“ಮುತ್ತು” ಸ್ ಫೌಂಡೇಶನ್ ಸಂಭ್ರಮ, ಜ 21. ಕ್ಕೆ ಸಾಧಕರಿಗೆ ಸನ್ಮಾನ ಹಾಗೂ – ರಸಮಂಜರಿ ಕಾರ್ಯಕ್ರಮ ಆಯೋಜನೆ.
ಸುರಕೋಡ ಜ.14

ವಿದ್ಯೆಯೇ ವಿಮೋಚನೆಗೆ ಹೆದ್ದಾರಿ ಎಂಬ ಧ್ಯೇಯ ವಾಕ್ಯದೊಂದಿಗೆ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿ ಕೊಂಡಿರುವ ಸುರಕೋಡದ “ಮುತ್ತು” ಸ್ ಫೌಂಡೇಶನ್ (ನೋಂ) ತನ್ನ 5 ನೇ. ವರ್ಷದ ವಾರ್ಷಿಕೋತ್ಸವವನ್ನು ಜನೆವರಿ 21 ರ ಬುಧವಾರ ದಂದು ಅತ್ಯಂತ ವಿಜೃಂಭಣೆ ಯಿಂದ ಹಮ್ಮಿಕೊಂಡಿದೆ.
ದಿವ್ಯ ಸಾನಿಧ್ಯ ಹಾಗೂ ಉದ್ಘಾಟನೆ:-
ಕಾರ್ಯಕ್ರಮಕ್ಕೆ ಶಿವಯೋಗಿ ಮಂದಿರದ ಶ್ರೀ ಮ.ನಿ.ಪ್ರ ಶಾಂತಲಿಂಗ ಮಹಾಸ್ವಾಮಿಗಳು, ಸವಡಿಯ ಶ್ರೀ ಮರುಳುಸಿದ್ದೇಶ್ವರ ಮಹಾಸ್ವಾಮಿಗಳು, ಇಟಗಿಯ ಶ್ರೀ ಶಿವಶರಣ ಗದಿಗಪ್ಪ ಅಜ್ಜನವರು ಹಾಗೂ ಹಿರೇ ಸಿಂದೋಗಿಯ ಶ್ರೀ ನಾಗರಾಜ ಸ್ವಾಮೀಜಿಗಳ ಪಾವನ ಸಾನಿಧ್ಯವಿರಲಿದೆ. ಫೌಂಡೇಶನ್ ಅಧ್ಯಕ್ಷ ಡಾ, ಮುತ್ತು ಸುರಕೋಡ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಸಮಾರಂಭವನ್ನು ಯುವ ಮುಖಂಡ ಡಾ, ಸಂಗಮೇಶ ಕೊಳ್ಳಿಯವರ ಹಾಗೂ ಇತರ ಗಣ್ಯರು ಉದ್ಘಾಟಿಸಲಿದ್ದಾರೆ.
ವಿವಿಧ ಕ್ಷೇತ್ರಗಳಲ್ಲಿ ಅಭೂತ ಪೂರ್ವ ಸಾಧನೆ ಮಾಡಿದ 200 ಕ್ಕೂ ಹೆಚ್ಚು ಸಾಧಕರನ್ನು ಈ ವೇದಿಕೆಯಲ್ಲಿ ಸನ್ಮಾನಿಸಲಾಗುತ್ತಿದೆ.
ವಿಶೇಷ ರತ್ನ ಪ್ರಶಸ್ತಿಗಳು:-
ಕು. ಲಕ್ಷ್ಮೀ ಬಸವರಾಜ ಪೂಜಾರ (ಕ್ರೀಡಾ ರತ್ನ), ಶ್ರೀ ಪ್ರಭುಗೌಡ ಈ. ಪವತಗೌಡ್ರ (ಶಿಕ್ಷಣ ರತ್ನ), ಶ್ರೀ ಬಸವರಾಜ ಪಿಡ್ನನ್ನವರ (ಕಲಾ ರತ್ನ), ಶ್ರೀ ಶರಣಪ್ಪ ಗದಗಿನ (ಕಾಯಕ ರತ್ನ), ಶ್ರೀಮತಿ ದಿಲ್‌ಶಾದ್‌ಬೇಗಂ.ನ ನಡಾಫ (ಸಮಾಜ ಸೇವಾ ರತ್ನ) ಹಾಗೂ ಶ್ರೀ ವಸಂತ.ದೆ ಚವಡಿ ಮತ್ತು ಶ್ರೀ ಯಲ್ಲಪ್ಪ.ರಾ ಶಿರಸಂಗಿ ಅವರಿಗೆ ‘ಸೇವಾ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಶಾಲಾ ಶಿಕ್ಷಕರು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ಸೈನಿಕರು, ಪಂಚಾಯಿತಿ ಸಿಬ್ಬಂದಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಮುಖಂಡರಿಗೆ ವಿಶೇಷ ಗೌರವ ಸಲ್ಲಿಸಲಾಗುವುದು.
ಸಂಜೆ ನಡೆಯುವ ರಸಮಂಜರಿ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕರಾದ ರಾಮಕೃಷ್ಣ ಪೂಜಾರ ಹಾಗೂ ರಮೇಶ್ ವೈ. ಮ್ಯಾಗೇರಿ ತಂಡದಿಂದ ಸಂಗೀತ ಸುಧೆ ಹರಿಯಲಿದೆ. ಬಾಗಲಕೋಟೆಯ ಕುಮಾರಿ ಆರಾಧ್ಯ ಮ. ತಳವಾರ ಅವರಿಂದ ಭರತನಾಟ್ಯ ಪ್ರದರ್ಶನ ಏರ್ಪಡಿಸಲಾಗಿದೆ.
ಸ್ಥಳ:-
ಶ್ರೀ ಬಸವೇಶ್ವರ ದೇವಸ್ಥಾನದ ಬಯಲು ಜಾಗ, ಸುರಕೋಡ. ಸಮಯ: 21-01-2026, ಬುಧವಾರ ಸಾಯಂಕಾಲ 4-00 ಗಂಟೆಗೆ.
ಈ ಅದ್ಧೂರಿ ಕಾರ್ಯಕ್ರಮಕ್ಕೆ ತಾಲ್ಲೂಕಿನ ಸಮಸ್ತ ಸಾರ್ವಜನಿಕರು ಭಾಗವಹಿಸಿ ಯಶಸ್ವಿ ಗೊಳಿಸ ಬೇಕೆಂದು ಫೌಂಡೇಶನ್‌ನ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಸುರಕೋಡ ಗ್ರಾಮಸ್ಥರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

