ಮಗು ಮಾಂಸದ ಮುದ್ದೆಯಂತೆ ತಿದ್ದಿ ತೀಡಿದಂತೆ – ನಾಗರಿಕ ಸಮಾಜದಲ್ಲಿ ನಂದಾ ದೀಪದಂತೆ ಪ್ರಜ್ವಲಿಸಲಿ.
ಬೆಂಗಳೂರು ಜ.15


ಬೆಂಗಳೂರಿನ ಕತ್ರಿಗುಪ್ಪೆಯ ವ್ಯಾಪ್ತಿಯಲ್ಲಿ ಬರುವ ಫೀಟ್ ಕಿಡ್ಸ್ – ಹ್ಯಾಪಿ ಕಿಡ್ಸ್ ನ ಗೀರ್ವಾಣಿ ಮಾಂಟೆಸ್ಸರಿ ಶಾಲೆಯ ಯುಕೆಜಿ ಯಲ್ಲಿ ಓದುತ್ತೀರುವ ರೀಶಬ್ ತಾಯಿ ಸೀಮಾ ಗಂ/ ಗುರುನಾಥ್ ರಾಠೋಡ ಎನ್ನುವ ಮಗು ಆರೋಗ್ಯ ಸಂಪತ್ತು ವಿಷಯದಲ್ಲಿ ಎರಡು ಗೋಲ್ಡ್ ಮೇಡಲ್ ಪ್ರಶಸ್ತಿ, ಎರಡು ಸಿಲ್ವರ್ ಮೇಡಲ್ ಪ್ರಶಸ್ತಿ, ಹಾಗೂ ಎರಡು ಬಹುಮಾನಿತ ಪ್ರಶಸ್ತಿ ಪತ್ರಗಳನ್ನು ಗಿಟ್ಟಿಸಿ ಕೊಂಡ.

ತನ್ನ ಊರು ಅಮೀನಗಡದ ಪ್ರಸಿದ್ದ ಕರದಂಟು ಊರಲ್ಲಿ ವಾಸವಾಗಿರುವ ಗುಂಡಪ್ಪ ಗಂ/ಶಾಂತವ್ವ ರಾಠೋಡ ಅವರ ಮೊಮ್ಮಗನಾದ ಈತನು ಇಷ್ಟು ಚಿಕ್ಕ ವಯಸ್ಸಿನಲ್ಲಿ ತನ್ನ ಚಾಕಚಕ್ಯತೆಯನ್ನು ಪ್ರದರ್ಶಿಸಿ ಮುಂಬರುವ ಸ್ಪರ್ಧಾ ಯುಗದಲ್ಲಿ ಇವರ ಹೆಜ್ಜೆ ಗುರುತುಗಳಾಗಲಿ ಎಂದು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್ ಹಾರೈಸುತ್ತದೆ

