ಒನಕೆ ಓಬವ್ವನ ಉತ್ಸವ – ಕಲಾವಿದರಿಂದ ಅರ್ಜಿ ಆಹ್ವಾನ.
ಗುಡೇಕೋಟೆ ಜ.15

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಗ್ರಾಮದಲ್ಲಿ ದಿನಾಂಕ 31-01-2026 ಮತ್ತು 01-02-2026 ರಂದು ಎರಡು ದಿನಗಳಂದು ನಡೆಯುವ ಸಾಂಸ್ಕೃತಿಕ ಉತ್ಸವಗಳು ಮೆರವಣಿಗೆ ಕಾರ್ಯಕ್ರಮಗಳಲ್ಲಿ ಸ್ಥಳೀಯ ಹೊರ ಜಿಲ್ಲೆ ಮತ್ತು ರಾಜ್ಯದವರು ಭಾಗವಹಿಸಬಹುದು. ಆಸಕ್ತ ಕಲಾವಿದರಿಗೆ ಅರ್ಜಿ ಸಲ್ಲಿಸಲು ದಿನಾಂಕ 13-01-2026 ರಿಂದ ದಿನಾಂಕ 20-01-2026 ಸಾಯಂಕಾಲ 5.00 ಗಂಟೆಯ ವರೆಗೆ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ. ನಂತರ ಸಲ್ಲಿಸುವ ಅರ್ಜಿಗಳನ್ನು ಸ್ವೀಕರಿಸುವುದಿಲ್ಲಾ ಎಂದು ತಹಶೀಲ್ದಾರ್ ಕುಮಾರಿ ವಿ.ಕೆ ನೇತ್ರಾವತಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅರ್ಜಿಗಳನ್ನು ತಾಲೂಕು ಆಡಳಿತ ಸೌಧ ಕೂಡ್ಲಿಗಿ ಇಲ್ಲಿ ಅರ್ಜಿ ಸಲ್ಲಿಸಲು ಪ್ರಕಟಣೆ ಮೂಲಕ ತಿಳಿಸಿದೆ ಎಂದು ವರದಿಯಾಗಿದೆ.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್ ವೀರೇಶ್ ಕೆ ಹೊಸಹಳ್ಳಿ

