“ಸಂಕ್ರಾಂತಿ ಹೊಸಕಾಂತಿ”…..

ಸಂಕ್ರಾಂತಿ ಹೊಸಕಾಂತಿ ಮೂಡಣ
ರವಿಕಿರಣವು
ನವಚೇತನ ದಕ್ಷಿಣ ಪಥದಿಂ ಉತ್ತರ
ಪಥದಡೆಯು
ಗೃಹ ಪ್ರವೇಶ ಧ್ವಾರದಲಿ ಹೂವು ಮಾವಿನ
ತೋರಣವು
ಮನೆಯ ಅಂಗಳದಲಿ ರಂಗೋಲಿ ಚಿತ್ತಾರ
ನಗುವ ಚಲುವು
ಎಣ್ಣೆ ಸ್ನಾನ ಹೊಸ ಬಟ್ಟೆ ಧರಿಸಿ ನಲಿವೆ
ಅಮ್ಮನು ತಯಾರಿಸಿದ ಸಜ್ಜೆರೋಟ್ಟಿ ಶೆಂಗಾ
ಹೊಳಿಗೆ ಬೆಲ್ಲದ ಅಚ್ಚು ಕಬ್ಬಿನ ತುಂಡು
ಭೋಜನವು
ತರಕಾರಿ ಪಚಡಿ ಮೊಸರನ್ನ ಸವಿ ರುಚಿ ಸವಿದು
ಆನಂದಿಸುವೆ
ರವಿತೇಜ ಮಕರ ಸಂಕ್ರಮಣ ಪ್ರವೇಶ ದನಕರು
ಕಿಚ್ಚು ಹಾಯಿಸಿ ದೃಷ್ಟಿ ತಗೆವರು
ಜನ ಮನ ಪದಗಳ ತುಡಿತದ ಧಾರ್ಮಿಕ
ಸಂಸ್ಕೃತಿ ಸುಗ್ಗಿ ಶುಭ ದಿನವು
ಎಳ್ಳು ಬೆಲ್ಲ ಸವಿ ಸಂತಸ ಸಮೃದ್ಧಿ ಸಾಮರಸ್ಯ
ತಂದೆ ತಾಯಿ ಹಿರಿಯರಿಗೆ ವಂದಿಸುವೆ
ಬಣ್ಣ ಬಣ್ಣದ ಗಾಳಿಪಟವ ಆಕಾಶದೆತ್ತರ
ಹಾರಿಸುವೆ
ಚಿಟ್ಟೆಗಳ ಹಾಗೇ ಕುಣಿಯುತ ನಲಿಯುವೆ
ಶುಭ ಸಂಭ್ರಮ ಕ್ಷಣ ಕ್ಷಣವು ನಮಗಿರಲಿ
ಸೂರ್ಯದೇವನಿಗೆ ನಮಸ್ಕರಿಸುವೆ ಸಂಕ್ರಾಂತಿ
ಹೊಸಕಾಂತಿ ಬೆಳಕಲಿ ಬಾಳುವೆ
“ಸಂಕ್ರಾಂತಿ ಹೊಸಕಾಂತಿ” ಮೂಡಣ ಹೊನ್ನ
ರವಿಕಿರಣವು ವಿಶ್ವದೆಲ್ಲೆಡೆ ಹರುಷದ ಸಂಕ್ರಾಂತಿ
ಹಬ್ಬವು
ಶ್ರೀದೇಶಂಸು
ಶ್ರೀಸುರೇಶ ಶಂಕ್ರೆಪ್ಪ ಅಂಗಡಿ
ದೇವರ ಹಿಪ್ಪರಗಿ

