ಜನವರಿ 18 ಕ್ಕೆ ಶಾಂತಿ ನಗರದ ಶ್ರೀಗಣಪತಿ ದೇವಸ್ಥಾನದ ಆವರಣದಲ್ಲಿ – ಸ್ವಾಮಿ ವಿವೇಕಾನಂದರ ಜಯಂತ್ಯುತ್ಸವ.

ಚಳ್ಳಕೆರೆ ಜ.16

ನಗರದ ಶಾಂತಿ ನಗರದ ಶ್ರೀಗಣಪತಿ ದೇವಸ್ಥಾನದ ಆವರಣದಲ್ಲಿ ತ್ಯಾಗರಾಜ ನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದಿಂದ “ಸ್ವಾಮಿ ವಿವೇಕಾನಂದರ 164 ನೇ. ಜಯಂತ್ಯುತ್ಸವ”ದ ಪ್ರಯುಕ್ತ ವಿಶೇಷ ಸತ್ಸಂಗ ಕಾರ್ಯಕ್ರಮವನ್ನು ಜನವರಿ 18 ರ ಭಾನುವಾರ ಬೆಳಿಗ್ಗೆ 10.30 ರಿಂದ ಆಯೋಜಿಸಿದ್ದು ಶಾಂತಿ ನಗರದ ಶ್ರೀಗಣಪತಿ ಭಜನಾ ಮಂಡಳಿಯ ಮುಖ್ಯಸ್ಥರಾದ ಶ್ರೀಮತಿ ಸುನೀತಾ ಗೋಪಾಲಕೃಷ್ಣ ಮತ್ತು ಸಂಗಡಿಗರಿಂದ ವಿಶೇಷ ಭಜನೆ, ಶ್ರೀಶಾರದಾಶ್ರಮದ ಭಕ್ತವೃಂದ ದಿಂದ ಶ್ರೀವಿವೇಕ ಗಾನ ಲಹರಿ, ಶ್ರೀಶಾರದಾ ಬಾಲಕ ಸಂಘದ ಮಕ್ಕಳಿಂದ ಸ್ವಾಮಿ ವಿವೇಕಾನಂದರ ಸ್ವದೇಶ ಮಂತ್ರದ ಪ್ರಸ್ತುತಿ, ಬಾಪೂಜಿ ಆಯುರ್ವೇದ ಕಾಲೇಜಿನ ಪ್ರಾಂಶುಪಾಲರಾದ ಡಾ‌, ಸಿ‌.ಟಿ‌ ಬಸವರಾಜಪ್ಪ ಅವರಿಂದ “ಸ್ವಾಮಿ ವಿವೇಕಾನಂದರ ಕೊಲಂಬೊ ಇಂದ ಆಲ್ಮೋರಾ ಪ್ರವಚನಗಳ ಸಂದೇಶ” ಎಂಬ ವಿಷಯವಾಗಿ ಉಪನ್ಯಾಸ, ಶ್ರೀಶಾರದಾಶ್ರಮದ ಅಧ್ಯಕ್ಷರಾದ ಮಾತಾಜೀ ತ್ಯಾಗಮಯೀ ಅವರಿಂದ “ಯೋಗಿವರ ಸ್ವಾಮಿ ವಿವೇಕಾನಂದ” ಎಂಬ ವಿಷಯವಾಗಿ ಪ್ರವಚನ ಕಾರ್ಯಕ್ರಮ ಮತ್ತು ಅನ್ನ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ ಎಂದು ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಮುಖ್ಯಸ್ಥರಾದ ಶ್ರೀಮತಿ ಎಚ್ ಲಕ್ಷ್ಮೀದೇವಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button