ಸಪಾಯಿ ಕರ್ಮಚಾರಿಗಳಿಗೆ ವಸತಿ ವ್ಯವಸ್ಥೆ ಮಾಡಿ – ವಿ.ಎನ್ ನಟೇಶ್.
ತರೀಕೆರೆ ಜ.17

ಪೌರ ಕಾರ್ಮಿಕರಿಗೆ ಸಪಾಯಿ ಕರ್ಮಚಾರಿಗಳಿಗೆ ಕೊಳಚೆ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ವಸತಿ ನಿರ್ಮಿಸಿ ಹಕ್ಕು ಪತ್ರ ನೀಡಬೇಕೆಂದು ಉಪ ವಿಭಾಗಾಧಿಕಾರಿ ವಿ.ಎನ್ ನಟೇಶ್ ರವರು ಹೇಳಿದರು.
ಅವರು ಇಂದು ಪಟ್ಟಣದ ಉಪ ವಿಭಾಗ ಅಧಿಕಾರಿಗಳ ಕಚೇರಿಯಲ್ಲಿ ಕರೆಯಲಾಗಿದ್ದ ಉಪ ವಿಭಾಗ ಮಟ್ಟದ ಸಪಾಯ ಕರ್ಮಚಾರಿಗಳ ಪುನರ್ವಸತಿ ಸಭೆಯಲ್ಲಿ ಹೇಳಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕರು ಹಾಗೂ ಸಮಿತಿ ಸದಸ್ಯರಾದ ತರೀಕೆರೆ ಎನ್.ವೆಂಕಟೇಶ್ ರವರು ಪೌರ ಕಾರ್ಮಿಕರಿಗೆ ಹಾಗೂ ಸಪಾಯ ಕರ್ಮಚಾರಿಗಳು ವಾಸವಾಗಿರುವ ಕೊಳಚೆ ಪ್ರದೇಶಗಳಲ್ಲಿ ಕೊಳಚೆ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ವಸತಿ ವ್ಯವಸ್ಥೆ ಮಾಡಿಲ್ಲ ಎಂದು ಸಭೆಯಲ್ಲಿ ದೂರಿದರು.
ಈ ಕುರಿತು ಸಭೆಯ ಅಧ್ಯಕ್ಷತೆ ವಹಿಸಿದ್ದ ಉಪ ವಿಭಾಗ ಅಧಿಕಾರಿಗಳು ಕೊಳಚೆ ಅಭಿವೃದ್ಧಿ ಮಂಡಳಿಯ ಜಿಲ್ಲಾ ಅಭಿಯಂತರರಾದ ಯಶವಂತ್ ರವರಿಗೆ ತಿಳಿಸುತ್ತಾ ತರೀಕೆರೆ ಅಂಬೇಡ್ಕರ್ ನಗರ, ಬಾಪೂಜಿ ಕಾಲೋನಿ ಕಡೂರು ಅಂಬೇಡ್ಕರ್ ನಗರ ಮತ್ತು ಸುಭಾಷ್ ನಗರ ಹಾಗೂ ಅಜ್ಜಂಪುರ,ಎನ್ ಆರ್ ಪುರ,ಬೀರೂರು ಪೌರ ಕಾರ್ಮಿಕರಿಗೆ ವಸತಿ ವ್ಯವಸ್ಥೆ ಕುರಿತು ಹೇಳಿದರು.
ಇದೇ ಸಂದರ್ಭದಲ್ಲಿ ತರೀಕೆರೆ ಉಪ ವಿಭಾಗ ಮಟ್ಟದ ಆಸ್ಪತ್ರೆಯ ಸ್ವಚ್ಛತಾ ಕರ್ಮಚಾರಿಗಳಿಗೆ ಸುರಕ್ಷತಾ ಪರಿಹಾರಗಳು ನೀಡಬೇಕು ವಿಶ್ರಾಂತಿ ಗೃಹ ನೀಡಬೇಕು ಮತ್ತು ಪ್ರತಿ ತಿಂಗಳು ಐದನೇ ತಾರೀಖಿನೊಳಗೆ ವೇತನ ಪಾವತಿಸಬೇಕು ಸರ್ಕಾರಿ ಎಲ್ಲಾ ರಜೆಗಳನ್ನು ನೀಡಬೇಕು ಎಂದು ಸದಸ್ಯರಾದ ತರೀಕೆರೆ ಎನ್ ವೆಂಕಟೇಶ್, ಎಂ.ವಿ ಭವಾನಿ, ಸಚಿನ್,ಜಿ ಟಿ ರಮೇಶ್ ಅವರು ತಿಳಿಸಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ನೀಡಿರುವ ಆದೇಶವನ್ನು ಪಾಲಿಸಲು ತಿಳಿಸಿದರು.
ಸಭೆಯಲ್ಲಿ ತರೀಕೆರೆ ತಹಸಿಲ್ದಾರ್ ವಿಶ್ವಜಿತ್ ಮೆಹ್ತಾ ಅಜ್ಜಂಪುರ ತಹಶೀಲ್ದಾರ್ ವಿನಾಯಕ ಸಾಗರ್ ಕಡೂರು ತಹಸೀಲ್ದಾರ್ ಪೂರ್ಣಿಮಾ ಎನ್ ಆರ್ ಪುರ ತಹಶೀಲ್ದಾರ್ ನೂರುಲ್ ಉದಾ ಮತ್ತು ತರೀಕೆರೆ ಪುರಸಭಾ ಮುಖ್ಯ ಅಧಿಕಾರಿಗಳಾದ ರಂಜನ್ ಬೀರೂರು ಮುಖ್ಯ ಅಧಿಕಾರಿಗಳಾದ ಪ್ರಕಾಶ್ ಎನ್ಆರ್ ಪುರ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿಗಳಾದ ಮಂಜುನಾಥ್ ಅಜ್ಜಂಪುರ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿಗಳಾದ ರಮೇಶ್ ಕಡೂರು ಪುರಸಭಾ ಅಧಿಕಾರಿಗಳು ಮತ್ತು ವೈದ್ಯಾಧಿಕಾರಿಗಳಾದ ಚಂದ್ರಶೇಖರ್ ಪತ್ರಕರ್ತರಾದ ಎಸ್ ಕೆ ಸ್ವಾಮಿ ಮುಂತಾದವರು ಉಪಸ್ಥಿತರಿದ್ದು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಎಸ್ ಮಂಜುನಾಥ್ ಸ್ವಾಗತಿಸಿ ವಂದಿಸಿದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಚಾನಲ್:ಎನ್.ವೆಂಕಟೇಶ್ ತರೀಕೆರೆ ಚಿಕ್ಕಮಗಳೂರು
