ಗುರು ವಂದನಾ ಕಾರ್ಯಕ್ರಮ ತುಂಬಾ – ಅದ್ಧೂರಿಯಾಗಿ ಜರುಗಿತು.

ಆಲಮೇಲ ಜ.20

ಎ.ಕೆ ನಂದಿ ಪ್ರೌಢ ಶಾಲೆಯ ಆಲಮೇಲದಲ್ಲಿ 1984 -85 ನೇ. ಸಾಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಂದ ಗುರು ವಂದನ ಕಾರ್ಯಕ್ರಮ ಹಾಗೂ ಸ್ನೇಹ ಸಮ್ಮಿಲನ ದಿನಾಂಕ 18-1 2026 ರಂದು ಆಲಮೇಲ ಪಟ್ಟಣದ ಶ್ರೀ ಜಗನ್ಮಾತೆ ದೇವಿ ಮಂದಿರ ದಿಂದ ರಥದಲ್ಲಿ ಗುರುಗಳ ಮೆರವಣಿಗೆ ಊದಿಸುತ್ತ ಬಾರಿಸುತ್ತಾ ಸಂಭ್ರಮದಿಂದ ಶ್ರೀ ಗುರು ಸಂಸ್ಥಾನ ಹಿರೇಮಠದ ವರೆಗೆ ಮೆರವಣಿಗೆ ಮೂಲಕ ವೇದಿಕೆಗೆ ಆಗಮಿಸಿ ನಂತರ 1984 85ನೇ ಸಾಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು ಸಡಗರ ಸಂಭ್ರಮದಿಂದ ಗುರುಗಳನ್ನು ಅದ್ದೂರಿಯಾಗಿ ಆರುತಿ ಮಾಡಿ ಹೂ ಮಳೆ ಯೊಂದಿಗೆ ಸ್ವಾಗತಿಸಿದರು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಷ ಬ್ರ ಶ್ರೀ ಚಂದ್ರಶೇಖರ ಶಿವಾಚಾರ್ಯರು ಶ್ರೀ ಗುರು ಸಂಸ್ಥಾನ ಹಿರೇಮಠ ಆಲಮೇಲ ವಹಿಸಿದ್ದರು.

ಶ್ರೀ ಎಂ ಆರ್.ಗೂಗವಾಡ ನಿವೃತ್ತ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ವೇದಿಕೆಯ ಮೇಲಿನ ಸಮಸ್ತ ಗೌರವಾನ್ವಿತರು ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವುದರೊಂದಿಗೆ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ 1984 85 ನೇ. ಸಾಲಿನ ವಿದ್ಯಾರ್ಥಿಗಳಿಂದ ಪ್ರಾರ್ಥನೆ ಗೀತೆಯೊಂದಿಗೆ ಕಾರ್ಯಕ್ರಮವು ಚಾಲನೆ ಗೊಂಡಿತು. ನಂತರ ಡಾ, ಶ್ರೀಶೈಲ್ ಪಾಟೀಲ್ ರಚಿಸಿರುವ ಗುರು ನಮನ ಗೀತೆಯನ್ನು ಖ್ಯಾತ ಸಂಗೀತಗಾರರಾದ ವೇತಾಳ ಜೋಶಿ ಹಾಗೂ ಸಂಗೀತ ಕಲಾ ತಂಡದವರಿಂದ ಮನ ಮುಟ್ಟುವಂತೆ ಸಂಗೀತ ಸೇವೆ ಮೂಡಿ ಬಂದಿತ್ತು. ತದನಂತರ ವೇದಿಕೆಯ ಮೇಲೆ ವಿಶೇಷ ಗೌರವ ಸನ್ಮಾನ ಶ್ರೀ ಎಮ್.ಆರ್ ಗೂಗವಾಡ ನಿವೃತ್ತ ಪ್ರಾಂಶುಪಾಲರು, ಶ್ರೀ ಎಲ್.ಎಸ್ ಹಾದಿಮನಿ ನಿವೃತ್ತ ಶಿಕ್ಷಕರು, ಶ್ರೀ ಬಿ.ಬಿ ಲೋಣಿ ನಿವೃತ್ತ ಶಿಕ್ಷಕರು, ಶ್ರೀ ಜಿ.ಕೆ ಪಡಗಾನೂರ ನಿವೃತ್ತ ಶಿಕ್ಷಕರು, ಶ್ರೀ ಜಿ.ಬಿ ಮುಂಡೇವಾಡಿ ನಿವೃತ್ತ ಶಿಕ್ಷಕರು, ಶ್ರೀ ಟಿ.ಎ ಸಾಲುಂಕೆ ನಿವೃತ್ತ ಶಿಕ್ಷಕರು, ಶ್ರೀ ಜಿ.ಬಿ ಸೌದಿ ನಿವೃತ್ತ ದೈಹಿಕ ಶಿಕ್ಷಕರು, ಶ್ರೀ ಜಿ.ಜಿ ಕಿಣಗಿ ನಿವೃತ್ತ ಚಿತ್ರಕಲಾ ಶಿಕ್ಷಕರು, ವಿಶೇಷ ಉಪನ್ಯಾಸಕರು ಶ್ರೀ ಅಶೋಕ್ ಹಂಚಲಿ ಶಿಕ್ಷಕ ಸಾಹಿತಿಗಳು ಬಸವನ ಬಾಗೇವಾಡಿ ಗುರುಗಳಿಗೆ ನೆನಪಿನ ಕಾಣಿಕೆ ಯೊಂದಿಗೆ ವಿಶೇಷ ಸನ್ಮಾನ ನಡೆಯಿತು. ವೇದಿಕೆ ಮೇಲೆ 1984 -85 ನೇ. ಸಾಲಿನ ವಿದ್ಯಾರ್ಥಿಗಳು ತಮ್ಮ ಬಾಲ್ಯದ ಜೀವನದ ಬಗ್ಗೆ ಗುರು ಶಿಷ್ಯರ ಬಾಂಧವ್ಯದ ಬಗ್ಗೆ ಮರುಕಳಿಸಿದ ಕಳೆದ ಕ್ಷಣಗಳನ್ನು ನೆನಪಿಸಿ ಕೊಂಡರು.

ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮಯ ಶ್ರೀ ಗುರುವೇ ನಮಃ ಎಂಬುವಂತೆ ಗುರುಗಳ ಮಾರ್ಗದರ್ಶನದಂತೆ ಗುರುಗಳ ಆಶೀರ್ವಾದದಿಂದ ನಾವು ಒಂದು ಸುಂದರವಾದ ಶಿಲೆಯಾಗಿ ಬದಲಾಗಿದ್ದೇವೆ ಎಂದು ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ಗುರುಗಳ ಸಮ್ಮುಖದಲ್ಲಿ ವ್ಯಕ್ತಪಡಿಸಿದರು. ಈ ಕಾರ್ಯಕ್ರಮದಲ್ಲಿ ಆಲಮೇಲ ಪಟ್ಟಣದ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಹಿರಿಯರು ವಿದ್ಯಾರ್ಥಿಗಳು ಭಾಗಿಯಾಗಿದ್ದು ಕಾರ್ಯಕ್ರಮದಲ್ಲಿ ಶುಚಿ-ರುಚಿಯಾದ ಪ್ರಸಾದ ವ್ಯವಸ್ಥೆ ಬಹಳ ಅಚ್ಚುಕಟ್ಟಾಗಿ ಮಾಡಲಾಗಿತ್ತು.ಮುಂದೆ ಗುರಿ ಹಿಂದೆ ಗುರು ಇದ್ದರೆ ನಾವು ಗುರಿ ಮುಟ್ಟಲು ಸಾಧ್ಯ ಎಂಬುದಕ್ಕೆ ಸಾಕ್ಷಿ ಇಂದು ನಡೆದ ಗುರು ವಂದನ ಕಾರ್ಯಕ್ರಮ ನಡೆಯಿತು.

ಎಲ್ಲಾ ಬಾಂಧವ್ಯಕ್ಕಿಂತ ಸ್ನೇಹ ಬಾಂಧವ ದೊಡ್ಡದು ಎಂಬುದಕ್ಕೆ ಇಂದು ನಡೆದ ಸ್ನೇಹ ಸಮ್ಮಿಲನವೇ ಸಾಕ್ಷಿ. ಕಾರ್ಯಕ್ರಮದ ಸ್ವಾಗತ ಮಲ್ಲಿಕಾರ್ಜುನ್ ಗು. ಹಿರೇಮಠ ಶಿಕ್ಷಕರು ನಿರೂಪಣೆ ಕಾಶಿನಾಥ್ ಅಕ್ಕಲಕೋಟ ವಂದನಾ ಆರ್ಷಣೆ ಇಂದುಮತಿ ನಾಯಕ ನೆರವೇರಿಸಿದರು ಹಾಗೂ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಗುರು ಹಿರಿಯರು ಭಾಗಿಯಾದರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಚಾನಲ್:ರೇವಣಸಿದ್ದಯ್ಯ ಜಿ ಹಿರೇಮಠ ಆಲಮೇಲ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button