🔞 ಖಾಕಿಯೊಳಗಿನ ‘ಕಾಮ ಪಿಶಾಚಿ’ ಅಸಲಿ ಮುಖವಾಡ ಕಳಚಿತು..! 🔞ಎಡಿಜಿಪಿ ರಾಮಚಂದ್ರ ರಾವ್ ‘ರಸಿಕ’ ದಾಟಕ್ಕೆ ನಾಡೇ ಉಗಿಯುತ್ತಿದೆ – ಇದು ಮಾರ್ಫಿಂಗ್ ನಾಟಕವೋ ಅಥವಾ ಮೋಜಿನ ಆಟವೋ..?
ಬೆಂಗಳೂರು ಜ.20

ರಾಜ್ಯ ಪೊಲೀಸ್ ಇಲಾಖೆಯ ಉನ್ನತ ಗದ್ದುಗೆಯಲ್ಲಿ ಕುಳಿತು ‘ಶಿಸ್ತು’ ಎಂದು ಬೊಬ್ಬೆ ಹೊಡೆಯುವ ಸಾಹೇಬರೊಬ್ಬರ ಅಸಲಿ ಮುಖ ಈಗ ರಕ್ಷಿತಾ ನದಿಯಂತೆ ಹರಿಯುತ್ತಿದೆ! ಎಡಿಜಿಪಿ ದರ್ಜೆಯ ಅಧಿಕಾರಿ ರಾಮಚಂದ್ರ ರಾವ್ ಎಂಬುವವರದ್ದೇ ಎನ್ನಲಾದ ಕಾಮದ ಕಹಾನಿ ಈಗ ಬೀದಿ ಬದಿಯ ಚರ್ಚೆಯಾಗಿದೆ. ಸಾರ್ವಜನಿಕರ ರಕ್ಷಣೆ ಮಾಡ ಬೇಕಾದ ಕೈಗಳು ಮಹಿಳೆಯೊಬ್ಬರ ಜೊತೆಗಿನ ಅಸಹ್ಯಕರ ಸರಸ-ಸಲ್ಲಾಪದಲ್ಲಿ ಮುಳುಗಿರುವುದು ಇಡೀ ಖಾಕಿ ಕುಲಕ್ಕೇ ಅಂಟಿದ ಶಾಪದಂತಿದೆ.
🔥 ಹಸಿ ಬಿಸಿ ವಿಡಿಯೋ:-
ಸಾಹೇಬರ ‘ಬಣ್ಣದ ಲೋಕ’ ಬಯಲು! ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಆ ವಿಡಿಯೋ ನೋಡಿದರೆ ನಾಗರಿಕ ಸಮಾಜ ತಲೆ ತಗ್ಗಿಸುವಂತಿದೆ. ಇಲಾಖೆಯ ಘನತೆಯನ್ನು ಗಾಳಿಗೆ ತೂರಿ, ಕಾಮದ ಅಮಲೇರಿ ದಂತೆ ವರ್ತಿಸಿರುವ ಈ ಅಧಿಕಾರಿಯ ನಡೆ ಈಗ ಎಲ್ಲೆಡೆ ಛೀಮಾರಿ ಹಾಕಿಸಿ ಕೊಳ್ಳುತ್ತಿದೆ. ಕೆಳ ಹಂತದ ಪೇದೆಗಳಿಗೆ ನೀತಿ ಪಾಠ ಮಾಡುವ ಈ ‘ದೊಡ್ಡ ಸಾಹೇಬರು’ ಇಂತಹ ಅಧೋಗತಿಯ ಕೃತ್ಯಕ್ಕೆ ಇಳಿದಿರುವುದು ಪೊಲೀಸ್ ಇಲಾಖೆಯ ಪಾಲಿಗೆ ಮರಣ ಶಾಸನ ಬರೆದಂತಿದೆ.
🎭 ಮಾರ್ಫಿಂಗ್ ಎಂಬ ‘ಕಳ್ಳಾಟ’ದ ಸಬೂಬು..!
ಯಾವಾಗ ತಾನು ಮಾಡಿದ ಕೃತ್ಯ ಜಗ ಜ್ಜಾಹೀರಾಯಿತೋ, ಆಗಲೇ ಈ ಅಧಿಕಾರಿ ‘ಮಾರ್ಫಿಂಗ್’ ಎಂಬ ರಕ್ಷಣಾ ಕವಚದ ಮೊರೆ ಹೋಗಿದ್ದಾರೆ. “ಇದು ನಾನಲ್ಲ, ನನ್ನನ್ನು ತೇಜೋವಧೆ ಮಾಡಲು ಮಾಡಿರುವ ಸಂಚು” ಎಂದು ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ ವಿಡಿಯೋದಲ್ಲಿರುವ ಸ್ಪಷ್ಟತೆ ಮತ್ತು ಹಾವ ಭಾವಗಳನ್ನು ನೋಡುತ್ತಿರುವ ಸಾರ್ವಜನಿಕರು, “ಸಾಹೇಬರೇ, ಸುಳ್ಳು ಹೇಳುವುದಕ್ಕೂ ಒಂದು ಮಿತಿ ಇರಲಿ” ಎಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಂಗ್ಯವಾಡುತ್ತಿದ್ದಾರೆ.
⚖️ ಕಾನೂನು ಕ್ರಮಕ್ಕೆ ಆಗ್ರಹ:-
ಬಣ್ಣ ಬಯಲಾಗುತ್ತಾ..? ಈ ಪ್ರಕರಣವು ಈಗ ವಿಧಿ ವಿಜ್ಞಾನ ಪ್ರಯೋಗಾಲಯದ (FSL) ಅಂಗಳದಲ್ಲಿದೆ. ಡಿಜಿಟಲ್ ಸಾಕ್ಷ್ಯಗಳು ಸುಳ್ಳು ಹೇಳುವುದಿಲ್ಲ. ಒಂದು ವೇಳೆ ಈ ವಿಡಿಯೋ ಅಸಲಿ ಎಂದು ಸಾಬೀತಾದರೆ, ಈ ಅಧಿಕಾರಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲೇ ಬೇಕು. ಸಾರ್ವಜನಿಕ ನೈತಿಕತೆಯನ್ನು ಗಾಳಿಗೆ ತೂರಿ, ಅಧಿಕಾರದ ಮದದಲ್ಲಿ ಇಂತಹ ಲಂಪಟತನ ಪ್ರದರ್ಶಿಸುವ ಅಧಿಕಾರಿಗಳಿಗೆ ತಕ್ಕ ಶಿಕ್ಷೆಯಾಗದಿದ್ದರೆ ಜನ ಸಾಮಾನ್ಯರಿಗೆ ಕಾನೂನಿನ ಮೇಲೆ ನಂಬಿಕೆ ಉಳಿಯುವುದಿಲ್ಲ.
ಖಾಕಿ ಅನ್ನೋದು ಬರೀ ಬಟ್ಟೆಯಲ್ಲ, ಅದು ಈ ನಾಡಿನ ಜನರ ಭರವಸೆ. ಇಂತಹ ಭರವಸೆಗೆ ದ್ರೋಹ ಬಗೆಯುವವರು ಯಾರೇ ಇರಲಿ, ಅವರು ಎಷ್ಟೇ ದೊಡ್ಡ ಹುದ್ದೆಯಲ್ಲಿರಲಿ, ಅವರನ್ನು ಕಾನೂನಿನ ಬೋನಿಗೆ ತಳ್ಳುವುದು ಅನಿವಾರ್ಯ. ಈ ‘ಮೋಜುಗಾರ’ ಅಧಿಕಾರಿಯ ಅಸಲಿ ಬಣ್ಣ ಬಯಲಾಗುವ ವರೆಗೆ ನಮ್ಮ ಈ ಹೋರಾಟ ನಿಲ್ಲದು..!
ವರದಿ:ಆರತಿ.ಗಿಳಿಯಾರು.ಉಡುಪಿ

