ಜಕ್ಕಲಿಯಲ್ಲಿ ಯೋಗಿ ವಾಮನ್ – ಅವರ ಜನ್ಮದಿನಾಚರಣೆ.
ಜಕ್ಕಲಿ ಜ.20

ಗದಗ ಜಿಲ್ಲೆಯ ರೋಣ ತಾಲೂಕಿನ ನರೇಗಲ್ ಸಮೀಪದ ಜಕ್ಕಲಿ ಗ್ರಾಮದ ಸರ್ಕಾರಿ ಶಾಲೆಗಳ ಗಾಂಧಿ ಭವನದಲ್ಲಿ ಸೋಮವಾರದಂದು ಯೋಗಿ ವಾಮನ್ ಅವರ ಜನ್ಮದಿನವನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಗ್ರಾಮದ ಎಂ.ಪಿ.ಎಸ್. ಬಾಲಕರ ಸರಕಾರಿ ಮಾದರಿ ಕೇಂದ್ರ ಹಿರಿಯ ಪ್ರಾಥಮಿಕ ಶಾಲೆ, ಹೆಚ್.ಪಿ.ಕೆ.ಜಿ.ಎಸ್. ಕನ್ನಡ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಕಿರಿಯ ಉರ್ದು ಶಾಲೆಯ ಸಂಯುಕ್ತ ಆಶ್ರಯದಲ್ಲಿ ಈ ಕಾರ್ಯಕ್ರಮವು ಜರುಗಿತು.

ಕಾರ್ಯಕ್ರಮದಲ್ಲಿ ಯೋಗಿ ವಾಮನ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಅವರ ಜೀವನ ಹಾಗೂ ಸಂದೇಶಗಳ ಕುರಿತು ಸ್ಮರಿಸಲಾಯಿತು. ಶಾಲಾ ಮಕ್ಕಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು, ಗಣ್ಯರ ವಿಚಾರಧಾರೆಗಳನ್ನು ಆಲಿಸಿದರು.
ಈ ಸಂದರ್ಭದಲ್ಲಿ ಹೆಚ್.ಪಿ.ಕೆ.ಜಿ.ಎಸ್. ಹಿರಿಯ ಕನ್ನಡ ಹೆಣ್ಣು ಮಕ್ಕಳ ಶಾಲೆಯ ಮುಖ್ಯೋಪಾಧ್ಯಾಯರಾದ ಎಸ್.ಬಿ. ಗವಿ, ಜಿ.ಎಂ.ಪಿ.ಎಸ್. ಬಾಲಕರ ಸರಕಾರಿ ಮಾದರಿ ಕೇಂದ್ರ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಎ.ಬಿ. ಜಕ್ಕಲಿ, ಶಿಕ್ಷಕರುಗಳಾದ ಎಂ.ವಿ. ತಾಳಿಕೋಟಿ, ಎ.ಪಿ. ಶೆಟ್ಟರ್, ಸಿ.ಎಸ್. ಬೆಳ್ಳಟ್ಟಿ, ಸಿ.ಎಸ್. ಘೋಡೆಸವಾರ, ಎಸ್.ಎ. ಪಲ್ಲೆದ, ವಿ.ಎಸ್. ದಿಂಡೂರ್, ಪಿ.ಜಿ. ಹುಯಿಲಗೋಳ, ಎ.ಎಂ. ಸೂರ್ಯಭಟ್, ವಿಜಯಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

