🚨 SUPER EXCLUSIVE BREAKING NEWS 🚨💥 ಲೋಕಾಯುಕ್ತದ ಹೆಸರಲ್ಲಿ ‘ಖಾಕಿ’ ಡಕಾಯಿತರ ದರ್ಬಾರ್, ದಲಿತ ಅಧಿಕಾರಿಯ ಬದುಕಿನ ಜೊತೆ ಚೆಲ್ಲಾಟವಾಡಿದ 21 ಮಂದಿ ‘ಶಿಕಾರಿ’ ಗಳು..! 💥
ಉಡುಪಿ/ಗಂಗೊಳ್ಳಿ ಜ.20

ಭ್ರಷ್ಟಾಚಾರವನ್ನು ಅಳಿಸ ಬೇಕಾದ ಲೋಕಾಯುಕ್ತವೇ ಇಂದು ‘ಭ್ರಷ್ಟರ ಸಂರಕ್ಷಣಾ ಅಡ್ಡಾ’ ಆಗಿದೆಯೇ? ಉಡುಪಿ ಜಿಲ್ಲೆಯ ಗಂಗೊಳ್ಳಿ ಗ್ರಾಮ ಪಂಚಾಯತ್ ನಲ್ಲಿ ನಡೆದ ಘಟನೆ ಇಡೀ ರಾಜ್ಯದ ಪೊಲೀಸ್ ವ್ಯವಸ್ಥೆಯೇ ತಲೆ ತಗ್ಗಿಸುವಂತೆ ಮಾಡಿದೆ. ಒಬ್ಬ ಪ್ರಾಮಾಣಿಕ ಅಧಿಕಾರಿಯನ್ನು ಮುಗಿಸಲು ರೌಡಿಶೀಟರ್ ಮಹಮ್ಮದ್ ಹನೀಫ್ ಜೊತೆ ಶಾಮೀಲಾದ ಲೋಕಾಯುಕ್ತದ 21 ಅಧಿಕಾರಿಗಳ ಬಣ್ಣ ಈಗ ಬಯಲಾಗಿದೆ!
🔥 ಅಸಲಿ ‘ಡೀಲ್’ ಹಿಂದಿನ ಮಾಸ್ಟರ್ ಮೈಂಡ್ ಮಂಜುನಾಥ್! 🔥
ಅಧಿಕಾರಿಯ ಮೇಲೆ ನಕಲಿ ಟ್ರ್ಯಾಪ್ ರಚಿಸಿದ ಬಳಿಕ, ಹಿಂದಿನ ಪ್ರಭಾರ ಡಿವೈಎಸ್ ಪಿ ಮಂಜುನಾಥ್ ಅವರು ಅಧಿಕಾರಿಯನ್ನು ಪ್ರತ್ಯೇಕ ಕೋಣೆಗೆ ಕರೆದೊಯ್ದು 15 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿರುವುದು ಈಗ ಜಗಜ್ಜಾಹೀರಾಗಿದೆ. “ಹಣ ಕೊಟ್ಟರೆ ಕೇಸ್ ಮುಚ್ಚಿ ಹಾಕುತ್ತೇನೆ” ಎಂದು ಹೇಳುವ ಮೂಲಕ ಇವರು ತನಿಖಾಧಿಕಾರಿಯಲ್ಲ, ಬದಲಿಗೆ ‘ಹಗಲು ದರೋಡೆಕೋರ’ ಎಂಬುದು ಸಾಬೀತಾಗಿದೆ.
🚫 19 ಸೆಕೆಂಡ್‌ನ ‘ಮ್ಯಾಜಿಕ್’ ಟ್ರ್ಯಾಪ್, ಲೋಕಾಯುಕ್ತದ ಕಳ್ಳಾಟ ಬಯಲು! 🚫
ಸಿಸಿಟಿವಿ ದೃಶ್ಯಾವಳಿಗಳು ಲೋಕಾಯುಕ್ತ ಪೊಲೀಸರ ಮುಖವಾಡ ಕಳಚಿವೆ. ಮಹಜರ್‌ನಲ್ಲಿ ಹೇಳಲಾದ ಸುಳ್ಳುಗಳಿಗೂ ಸಿಸಿಟಿವಿಗೂ ಏಣಿಕೆಯೇ ಇಲ್ಲ.
ಅಸಾಧ್ಯ ಕೃತ್ಯ:-
ಕೇವಲ 19 ಸೆಕೆಂಡುಗಳಲ್ಲಿ ಲಂಚದ ಹಣ ಎಣಿಸಿ ಜೇಬಿಗೆ ಹಾಕಿ ಕೊಳ್ಳಲು ಸಾಧ್ಯವೇ?
ಬಲವಂತದ ತುರುಕುವಿಕೆ:-
ಲೋಕಾಯುಕ್ತ ಸಿಬ್ಬಂದಿ ರಮೇಶ್ ಸಿಪಿಸಿ ಅವರು ಅಧಿಕಾರಿಯ ಕಿಸೆಗೆ ಬಲವಂತವಾಗಿ ಹಣ ತುರುಕಿಸಿರುವುದು ದೌರ್ಜನ್ಯದ ಪರಮಾವಧಿ.
ನಕಲಿ ಸಾಕ್ಷ್ಯ ಸೃಷ್ಟಿ:-
ವಾಯ್ಸ್ ರೆಕಾರ್ಡರ್‌ನಲ್ಲಿ ಸಂಭಾಷಣೆ ಇಲ್ಲದಿದ್ದರೂ, ಒಂದು ವಾರ ಹನೀಫ್‌ನ ಫೋನ್ ಇಟ್ಟುಕೊಂಡು ಬೇರೆ ದಿನದ ಸಂಭಾಷಣೆಯನ್ನು ಎಡಿಟ್ ಮಾಡಿ ಸೇರಿಸಿರುವುದು ಜೈಲಿಗಟ್ಟಬೇಕಾದ ಅಪರಾಧ!
🛑 ಮರ್ಯಾದೆ ಗೇಡು ಅಧಿಕಾರಿಗಳ ‘ಕಪ್ಪು ಪಟ್ಟಿ’ (21 ಮಂದಿ ಆರೋಪಿಗಳು): 🛑
ತಮ್ಮ ಅಧಿಕಾರ ಬಳಸಿ ದಲಿತ ಅಧಿಕಾರಿಯ ಜಾತಿ ನಿಂದನೆ ಮಾಡಿ, ಮಾನವ ಹಕ್ಕುಗಳನ್ನು ತುಳಿದ ಈ ಕೆಳಗಿನ ವ್ಯಕ್ತಿಗಳ ವಿರುದ್ಧ ಕಾನೂನು ಸಮರ ಶುರುವಾಗಿದೆ.
ಮಂಜುನಾಥ್ (DYSP):-
15 ಲಕ್ಷ ಲಂಚದ ಬೇಡಿಕೆ ಮತ್ತು ಸುಲಿಗೆ ಸಂಚು.
ರಮೇಶ್ ಸಿಪಿಸಿ:-
ಬಲವಂತವಾಗಿ ಹಣ ತುರುಕಿಸಿದ ಕಿರಾತಕ.
ಚಂದ್ರಶೇಖರ.ಕೆ ಎನ್ (ಇನ್ಸ್‌ಪೆಕ್ಟರ್):-
ತನಿಖಾ ವೈಫಲ್ಯ ಮತ್ತು ದೌರ್ಜನ್ಯಕ್ಕೆ ಸಾಥ್.
ರಾಜೇಂದ್ರ ನಾಯಕ್ (PSI):
ಸಿಸಿಟಿವಿ ಪುಟೇಜ್ ಇಲ್ಲವೆಂದು ನ್ಯಾಯಾಲಯಕ್ಕೆ ಸುಳ್ಳು ವರದಿ ನೀಡಿದ ‘ಪಳಗಿದ ಸುಳ್ಳುಗಾರ’.
ಮಹಮ್ಮದ್ ಹನೀಫ್ & ಎಂ.ಡಿ ಆಸೀಫ್:-
ಅಕ್ರಮ ಕಸಾಯಿಖಾನೆಗೆ ಪರವಾನಿಗೆ ಸಿಗದಿದ್ದಕ್ಕೆ ಸಂಚು ರೂಪಿಸಿದ ದೂರುದಾರರು.
ಇತರ ಸಿಬ್ಬಂದಿಗಳು:-
ಅಬ್ದುಲ್ ಜಲಾಲ್, ಶಿವರಾಂ ಗಾಣಿಗ, ವಿನಾಯಕ, ಸೂರಜ್, ಶರತ್ ಸಿಂಗ್, ರಾಘವೇಂದ್ರ, ಸತೀಶ್ ಹಂದಾಡಿ, ರೋಹಿತ್, ನಾಗೇಶ್ ಉಡುಪ, ನಾಗರಾಜು, ಮಹೇಶ್ ಪ್ರಸನ್ನ, ರವೀಂದ್ರ. ಸುಳ್ಳು ಸಾಕ್ಷಿಗಳು: ಪಂಚನಾಮೆಗೆ ಸಹಿ ಹಾಕಿದ ಸಂತೋಷ್ ಕುಮಾರ್ ಮತ್ತು ಪೂಜಿತ್ ಪಿ.ಜಿ.
⚖️ ದಲಿತ ಅಧಿಕಾರಿಯ ಮೇಲೆ ಅಟ್ಟಹಾಸ – SC/ST ದೌರ್ಜನ್ಯದ ಪರಾಕಾಷ್ಠೆ..!⚖️
“ನಿನ್ನ ಜನ್ಮಕ್ಕೆ ಬೆಂಕಿ ಹಾಕ” ಎಂದು ಜಾತಿ ನಿಂದನೆ ಮಾಡಿ, ಅಧಿಕಾರಿಯ ಗೌರವಕ್ಕೆ ಮಸಿ ಬಳಿದ ಈ 21 ಮಂದಿಯ ವಿರುದ್ಧ ಈಗ SC/ST ವಿಶೇಷ ನ್ಯಾಯಾಲಯದಲ್ಲಿ ಕಾನೂನು ಹೋರಾಟ ತೀವ್ರ ಗೊಂಡಿದೆ. ಭ್ರಷ್ಟಾಚಾರದ ವಿರುದ್ಧ ಹೋರಾಡುವ ಸಂಸ್ಥೆಯೇ ಇಷ್ಟೊಂದು ಕೀಳು ಮಟ್ಟಕ್ಕೆ ಇಳಿದಿರುವುದು ರಾಜ್ಯಕ್ಕೆ ಶಾಪದಂತಿದೆ.
ಸಾರ್ವಜನಿಕರ ಪ್ರಶ್ನೆ:-
ಸತ್ಯವನ್ನು ಮುಚ್ಚಿಡಲು ಯತ್ನಿಸುತ್ತಿರುವ ಲೋಕಾಯುಕ್ತದ ಈ ‘ಡರ್ಟಿ ಗ್ಯಾಂಗ್’ ಅನ್ನು ಸರ್ಕಾರ ಯಾವಾಗ ಅಮಾನತು ಗೊಳಿಸುತ್ತದೆ..? ಪತ್ರಕರ್ತರಿಗೆ ಬೆದರಿಕೆ ಹಾಕುವ ಇವರಿಗೆ ಕಾನೂನಿನ ಭಯವಿಲ್ಲವೇ..?
🚨 ವರದಿ:ಆರತಿ.ಗಿಳಿಯಾರು.ಉಡುಪಿ

