ಯೋಗಿವರ ಸ್ವಾಮಿ ವಿವೇಕಾನಂದ – ಮಾತಾಜೀ ತ್ಯಾಗಮಯೀ ಅಭಿಮತ.

ಚಳ್ಳಕೆರೆ ಜ.21

ವೀರಸಂನ್ಯಾಸಿ ವಿಶ್ವವಿಜೇತ ವಿಶ್ವಮಾನವ ಸ್ವಾಮಿ ವಿವೇಕಾನಂದರು ಯೋಗಿವರರಾಗಿದ್ದರು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ತ್ಯಾಗಮಯೀ ತಿಳಿಸಿದರು.

ನಗರದ ಶಾಂತಿ ನಗರದ ಶ್ರೀಗಣಪತಿ ದೇವಸ್ಥಾನದ ಆವರಣದಲ್ಲಿ ತ್ಯಾಗರಾಜ ನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದಿಂದ “ಸ್ವಾಮಿ ವಿವೇಕಾನಂದರ 164 ನೇ. ಜಯಂತ್ಯುತ್ಸವ” ದ ಪ್ರಯುಕ್ತ ಆಯೋಜಿಸಿದ್ದ ವಿಶೇಷ ಸತ್ಸಂಗ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು‌.

ಯೋಗಿಗಳಲ್ಲಿ ಸರ್ವಶ್ರೇಷ್ಠರಾದ ಸ್ವಾಮಿ ವಿವೇಕಾನಂದರಲ್ಲಿ ಭಗವಂತನ ಮಹಿಮೆಯ ಎಲ್ಲಾ ವಿಶೇಷ ಮುಖಗಳನ್ನು ಅಪಾರ ಸೇವಾ ಮನೋಭಾವ ಪ್ರಚಂಡ ಬುದ್ಧಿ ಮತ್ತೆ ಭಕ್ತಿಭಾವ ಭರಿತ ಭಜನೆಗಳನ್ನು ಹಾಡುವ ಮತ್ತು ಧ್ಯಾನ ಸಿದ್ಧಿಯ ಸಾಮರ್ಥ್ಯವನ್ನು ಕಾಣುತ್ತೇವೆ. ಅವರು ಕರ್ಮ ಯೋಗಿಯಾಗಿ, ಜ್ಞಾನಯೋಗಿ, ಧ್ಯಾನ ಯೋಗಿ, ಭಕ್ತಿ ಯೋಗಿ ಯಾಗಿಯೂ ಕಾಣುತ್ತಾರೆ. “ಯೋಗಿವರ” ಎಂದರೆ ಧ್ಯಾನ ಯೋಗದಲ್ಲಿ ಗುರಿಯನ್ನು ತಲುಪಿದವರು ಸ್ವಾಮಿ ವಿವೇಕಾನಂದರು ಎಂಬುವುದಕ್ಕೆ ಅವರ ಜೀವನದ ಅನೇಕ ಘಟನೆಗಳನ್ನು ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು “ಸ್ವಾಮಿ ವಿವೇಕಾನಂದರ ಕೊಲಂಬೊ ಇಂದ ಆಲ್ಮೋರಾ ಪ್ರವಚನಗಳ ಸಂದೇಶ” ಎಂಬ ವಿಷಯವಾಗಿ ವಿಶೇಷ ಉಪನ್ಯಾಸ ನೀಡಿದ ಬಾಪೂಜಿ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಂಶುಪಾಲರು ಮತ್ತು ಪ್ರಾಧ್ಯಾಪಕರಾದ ಡಾ, ಸಿ.ಟಿ ಬಸವರಾಜಪ್ಪ ಅವರು ಭಾರತದ ಸನಾತನ ಹಿಂದೂ ಧರ್ಮದ ವಿಜಯ ಪತಾಕೆಯನ್ನು ಅಮೇರಿಕಾದ ಚಿಕಾಗೋ ನಗರದ ಸರ್ವ ಧರ್ಮ ಸಮ್ಮೇಳನದಲ್ಲಿ ಹಾರಿಸಿದ ಸ್ವಾಮಿ ವಿವೇಕಾನಂದರ ಶಕ್ತಿಮಂತ್ರಗಳು ಇಂದಿನ ಯುವ ಜನಾಂಗಕ್ಕೆ ಆದರ್ಶವಾಗಬೇಕು, ಭಾರತೀಯರು ಉಪನಿಷತ್ತುಗಳನ್ನು ಸಮಗ್ರವಾಗಿ ಅಧ್ಯಯನ ಮಾಡುವ ತುರ್ತು ಅವಶ್ಯಕತೆಯಿದೆ. ವೇದಾಂತ ಮತ್ತು ಉಪನಿಷತ್ ನ ಜ್ಞಾನವನ್ನು ಪ್ರಾಯೋಗಿಕವಾಗಿ ನಿತ್ಯ ಜೀವನದಲ್ಲಿ ಜಾರಿಗೆ ತಂದ ಶ್ರೀರಾಮಕೃಷ್ಣ ಪರಮಹಂಸ ರಿಂದ ಪಡೆದ ವೇದಾಂತದ ಸಾರವನ್ನು ಇಡೀ ಜಗತ್ತಿಗೆ ಉಣ ಬಡಿಸಿದ ಕೀರ್ತಿ ವಿಶ್ವ ವಿಜೇತ ಸ್ವಾಮಿ ವಿವೇಕಾನಂದರಿಗೆ ಸಲ್ಲುತ್ತದೆ.

ಇಂದಿನ ಶಿಕ್ಷಣ ವ್ಯವಸ್ಥೆ ಸಂಪೂರ್ಣ ಕುಸಿದಿದ್ದು ಮೌಲ್ಯಗಳಿಲ್ಲದ ಸತ್ವ ರಹಿತ ಶಿಕ್ಷಣ ವಾಗಿದೆ. ಶೈಕ್ಷಣಿಕ ವ್ಯವಸ್ಥೆಯ ಬದಲಾವಣೆಯ ಮೂಲಕ ಮಾತ್ರ ಸಮಾಜದ ಪರಿವರ್ತನೆ ಸಾಧ್ಯವಿದ್ದು ಸ್ವಾಮಿ ವಿವೇಕಾನಂದರ ಚಿಂತನೆಗಳ ಬೆಳಕಿನಲ್ಲಿ ಪಠ್ಯಕ್ರಮ ರೂಪಗೊಳ್ಳ ಬೇಕಾದ ಅಗತ್ಯತೆಯಿದೆ. ಸ್ವಾಮಿ ವಿವೇಕಾನಂದರ ಸಮಗ್ರ ಜೀವನವನ್ನು ಪ್ರತಿಯೊಬ್ಬರೂ ಓದಬೇಕು ಎಂದು ಕಿವಿಮಾತು ಹೇಳಿದರು.

ಜಯಂತ್ಯುತ್ಸವದ ಪ್ರಯುಕ್ತ ಶಾಂತಿ ನಗರದ ಶ್ರೀಗಣಪತಿ ಭಜನಾ ಮಂಡಳಿಯ ಶ್ರೀಮತಿ ಸುನೀತಾ ಗೋಪಾಲಕೃಷ್ಣ ಮತ್ತು ಸಂಗಡಿಗರಿಂದ ವಿಶೇಷ ಭಜನೆಗಳು, ಶ್ರೀಸುಬ್ರಮಣ್ಯ ಶಾಸ್ತ್ರಿ ಅವರಿಂದ ಭಜನೆಗೆ ತಬಲಾ ಸಾಥ್, ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ “ಶ್ರೀ ವಿವೇಕ ಗಾನ ಲಹರಿ”, ಶ್ರೀಶಾರದಾ ಬಾಲಕ ಸಂಘದ ಮಕ್ಕಳಿಂದ ಸ್ವಾಮಿ ವಿವೇಕಾನಂದರ ಶಕ್ತಿ ಮಂತ್ರ, ಸ್ವದೇಶ ಮಂತ್ರ ಹಾಗೂ ಚೈತನ್ಯ ದಾಯಕ ನುಡಿಗಳ ಪಠಣ ನಡೆದರೆ, ಜೀವ ಶಿವ ಸೇವೆ ಮಾಡಿದ ಸೂಲಗಿತ್ತಿ ತಳುಕಿನ ತಿಮ್ಮಕ್ಕ, ಆರ್ಥಿಕವಾಗಿ ದುರ್ಬಲರಾದ ಮೂರು ಜನ ಮಹಿಳೆಯರಿಗೆ ಅಗತ್ಯ ವಸ್ತುಗಳ ವಿತರಣೆ ಸೇರಿದಂತೆ ಕಾರ್ಯಕ್ರಮಕ್ಕಾಗಿ ದುಡಿದ ಗಣ್ಯರನ್ನು ಗೌರವಿಸಿ ಸನ್ಮಾನಿಸಲಾಯಿತು.

ಕೊನೆಯಲ್ಲಿ ದಿವ್ಯತ್ರಯರಿಗೆ ಮಂಗಳಾರತಿ ಮತ್ತು ವಿಶೇಷ ಅನ್ನ ಪ್ರಸಾದ, ಪುಸ್ತಕ ಮಾರಾಟದ ವ್ಯವಸ್ಥೆ ಮಾಡಲಾಗಿತ್ತು.

ಕಾರ್ಯಕ್ರಮದ ಸ್ವಾಗತ ಪರಿಚಯವನ್ನು ಸದ್ಭಕ್ತರಾದ ಶ್ರೀಮತಿ ಎಂ ಗೀತಾ ನಾಗರಾಜ್ ಮಾಡಿದರೆ ಯತೀಶ್ ಎಂ ಸಿದ್ದಾಪುರ ವಂದನಾರ್ಪಣೆ ನಡೆಸಿ ಕೊಟ್ಟರು.

ಜಯಂತ್ಯುತ್ಸವದಲ್ಲಿ ಕಾರ್ಯಕ್ರಮದಲ್ಲಿ ಸಾಮಾಜಿಕ ಹೋರಾಟಗಾರ ಎಚ್.ಎಸ್ ಸೈಯದ್, ಲೋಕಮಾನ್ಯ, ಸುನೀತಾ ಗೋಪಾಲಕೃಷ್ಣ, ಅರ್ಚಕ ವಿಶ್ವನಾಥ್, ನಾಗಶಯನ ಗೌತಮ್, ಬಾಲಾಜಿ ವೆಂಕಟೇಶ್, ಎಚ್ ಲಕ್ಷ್ಮೀದೇವಮ್ಮ, ಎಂ ಗೀತಾ ನಾಗರಾಜ್, ಗೀತಾ ವೆಂಕಟೇಶರೆಡ್ಡಿ, ಸುವರ್ಣಮ್ಮ, ಪದ್ಮಾವತಿ, ಗಜಾಲಕ್ಷ್ಮೀ, ಸುಜಾತಾ, ಲತಾ, ಕವಿತಾ, ಕಾಮಾಕ್ಷಿ, ಭವಾನಿ, ಭಾವನಾ, ಭಾಗ್ಯ, ಗೀತಾ, ಶೋಭಾ, ಜ್ಯೋತಿ, ಮೋಹಿನಿ, ಅನಿತಾ ಕಿಶೋರ್, ಸುಮ, ಈಶ್ವರಮ್ಮ ಎರ್ರಿಸ್ವಾಮಿ, ವಿಶ್ಮೀತಾ, ಭಾರತಿ, ಮಾಕಂಸ್ ಲಕ್ಷ್ಮೀ, ಸಂತೋಷ್, ಸುಧಾಮಣಿ, ಶಾಂತಮ್ಮ, ಹರ್ಷಿತಾ, ಮನಸಿರಿ, ಪ್ರತೀಕ್ಷಾ, ಸಾಯಿ ಸಮರ್ಥ್, ಡಾ, ಭೂಮಿಕಾ, ಮಾನ್ಯ, ಲಕ್ಷ್ಮೀ, ಹೃತಿಕ್, ವಿಶಾಲಾಕ್ಷಿ, ಹೂವಿನ ಲಕ್ಷ್ಮೀದೇವಿ, ಕುಮಾರಸ್ವಾಮಿ, ಲಕ್ಷ್ಮಣ ಜಾದವ್, ಗಿರಿಜಾ, ಗಂಗಾಂಬಿಕೆ, ಆರ್, ಗೋವಿಂದಶೆಟ್ಟಿ, ಜಿ ಯಶೋಧಾ ಪ್ರಕಾಶ್, ಸೌಮ್ಯ, ಪಂಕಜ, ಅಶ್ವಿನಿ, ಬಿ.ಸಿ ವೀಣಾ, ಪಾಲಕ್ಕ, ಮಂಜುಳಾ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಸದ್ಭಕ್ತರು ಭಾಗವಹಿಸಿದ್ದರು.

ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button