ಶ್ರೀರಾಮಕೃಷ್ಣ ಮಹಾಸಂಘದ ಜನನಿ ಶ್ರೀಮಾತೆ ಶಾರದಾದೇವಿ – ಶ್ರೀಮತಿ ಜಿ.ಯಶೋಧಾ ಪ್ರಕಾಶ್.
ಚಳ್ಳಕೆರೆ ಜ.22

ಶ್ರೀರಾಮಕೃಷ್ಣ ಮಹಾಸಂಘದ ಜನನಿ ಶ್ರೀಮಾತೆ ಶಾರದಾದೇವಿ ಎಂದು ಚಳ್ಳಕೆರೆಯ ಶಿವನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಮುಖ್ಯಸ್ಥರಾದ ಶ್ರೀಮತಿ ಜಿ ಯಶೋಧಾ ಪ್ರಕಾಶ್ ತಿಳಿಸಿದರು.

ಶಿವನ ಗರದ ತಮ್ಮ ಜಿ.ವಿ.ಎಸ್ ನಿವಾಸದಲ್ಲಿ ಆಯೋಜಿಸಿದ್ದ ವಾರದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು “ಶ್ರೀಶಾರದಾ ದೇವಿ ಜೀವನಗಂಗಾ” ಗ್ರಂಥ ಪಾರಾಯಣ ಮಾಡುತ್ತ ಮಾತನಾಡುತ್ತಿದ್ದರು.

ಈ ಸತ್ಸಂಗದ ಪ್ರಯುಕ್ತ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ಶ್ರೀದೇವಿಸ್ತುತಿ ಪಠಣ, ವಿಶೇಷ ಭಜನೆ ಮತ್ತು ಶ್ರೀಮದ್ ಭಗವದ್ಗೀತೆಯ ಶ್ಲೋಕಗಳ ಕಲಿಕಾ ಕಾರ್ಯಕ್ರಮ ನಡೆಯಿತು.

ಸತ್ಸಂಗ ಸಭೆಯಲ್ಲಿ ಶಿಲ್ಪಾ ಮಹೇಶ್, ಸರಸ್ವತಿ ರಾಜು, ವೀರಮ್ಮ, ರಶ್ಮಿ ವಸಂತ, ಯಶಸ್ವಿ, ಯತೀಶ್ ಎಂ ಸಿದ್ದಾಪುರ, ರಶ್ಮಿ ರಮೇಶ್, ವಿಜಯಲಕ್ಷ್ಮೀ,ಶೈಲಜಾ, ಕೃಷ್ಣವೇಣಿ, ಸೌಮ್ಯ,ಸುಧಾಮಣಿ, ನಾಗರತ್ನಮ್ಮ, ದ್ರಾಕ್ಷಾಯಣಿ ಉಪಸ್ಥಿತರಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

