ಪ್ರೇಮಪೂರ್ಣ ವ್ಯಕ್ತಿತ್ವ ಸಿಂಹಾದ್ರಿ ಸ್ವಾಮಿಗಳದು – ಪೂಜ್ಯ ವೈ ರಾಜಾರಾಮ್ ಗುರುಗಳು.
ಚಳ್ಳಕೆರೆ ಜ.23

ಶ್ರೀ ಸಿಂಹಾದ್ರಿ ಸ್ವಾಮಿಗಳದು ಪ್ರೇಮಪೂರ್ಣ ವ್ಯಕ್ತಿತ್ವ ಎಂದು ಚಳ್ಳಕೆರೆಯ ನರಹರಿ ನಗರದ ಶ್ರೀನರಹರಿ ಸದ್ಗುರು ಆಶ್ರಮದ ಪೀಠಾಧ್ಯಕ್ಷರಾದ ಪರಮಪೂಜ್ಯ ವೈ ರಾಜಾರಾಮ್ ಗುರುಗಳು ಅಭಿಪ್ರಾಯ ಪಟ್ಟರು.

ನಗರದ ಸದ್ಭಕ್ತರಾದ ಶ್ರೀಮತಿ ಪ್ರೇಮಲೀಲಾ ರಾಮಣ್ಣ ಅವರ ಕೌಸ್ತುಭ ನಿವಾಸದಲ್ಲಿ “ಸಿಂಹಾದ್ರಿ ಸದ್ಗುರುಗಳ 24 ನೇ. ಆರಾಧನಾ ಮಹೋತ್ಸವ” ದ ಪ್ರಯುಕ್ತ ಆಯೋಜಿಸಿದ್ದ ವಿಶೇಷ ಸತ್ಸಂಗ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಭಜನೆ ನಡೆಸಿ ಕೊಟ್ಟ ಅವರು ಆಶೀರ್ವಚನ ನೀಡಿದರು.

ಈ ಸಂದರ್ಭದಲ್ಲಿ ಸಿಂಹಾದ್ರಿ ಸ್ವಾಮಿಗಳಿಗೆ ವಿಶೇಷ ಪೂಜೆ, ಆರತಿ ಮತ್ತು ಅನ್ನಪ್ರಸಾದ ವಿನಿಯೋಗ ನಡೆಯಿತು.
ಆರಾಧನಾ ಮಹೋತ್ಸವದಲ್ಲಿ ಶ್ರೀಮತಿ ಪ್ರೇಮಲೀಲಾ ರಾಮಣ್ಣ, ಗೀತಾ ಭಕ್ತವತ್ಸಲ, ಸರಸ್ವತಿ ಗೋವಿಂದರಾಜು, ಪಿ.ಎಸ್ ಮಾಣಿಕ್ಯ ಸತ್ಯನಾರಾಯಣ, ಇಂದ್ರಮ್ಮ, ಕಲ್ಪನಾ, ಮೀರಾ, ಸುಮಂಗಳಮ್ಮ, ಸರಸ್ವತಿ ಮಾಕಂ ಶ್ರೀನಿವಾಸಲು, ಟೈಲರ್ ಸರಸ್ವತಿ ಸೇರಿದಂತೆ ಸದ್ಭಕ್ತರು ಭಾಗವಹಿಸಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

