ಗುಪ್ತರೂಪ ಜ್ಞಾನದಾತೆ ಶ್ರೀಮಾತೆ ಶಾರದಾದೇವಿ – ಮಾತಾಜೀ ತ್ಯಾಗಮಯೀ.
ಚಳ್ಳಕೆರೆ ಜ.23

ಶ್ರೀಮಾತೆ ಶಾರದಾದೇವಿಯವರು ಗುಪ್ತರೂಪ ಜ್ಞಾನದಾತೆಯಾಗಿ ಸಾರ್ಥಕ ಗೃಹಸ್ಥ ಜೀವನ ನಡೆಸಿದ್ದರು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ತ್ಯಾಗಮಯೀ ತಿಳಿಸಿದರು.

ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಆಯೋಜಿಸಿದ್ದ ವಾರದ ವಿಶೇಷ ಸತ್ಸಂಗ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು “ಶ್ರೀಶಾರದಾದೇವಿ ಸಂದೇಶ” ಎಂಬ ವಿಷಯವಾಗಿ ವಿಶೇಷ ಪ್ರವಚನ ನೀಡಿದರು.

ಶ್ರೀಮಾತೆ ಶಾರದಾದೇವಿಯವರ ಜೀವನದಲ್ಲಿ ಅದ್ಭುತ ಪಾತಿವ್ರತ್ಯ, ಸೇವಾ ಭಾವನೆ, ಸಹನೆ ಮತ್ತು ವಿಶ್ವವ ತಬ್ಬುವ ಮಾತೃತ್ವವನ್ನು ಕಾಣುತ್ತೇವೆ ಎಂದರು.

ಈ ಸತ್ಸಂಗದ ಪ್ರಯುಕ್ತ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ಭಜನೆ, ದಿವ್ಯತ್ರಯರಿಗೆ ಮಂಗಳಾರತಿ ಮತ್ತು ಕುಮಾರಿ ಯಶಸ್ವಿ ಅವರಿಂದ ಶ್ರೀಮದ್ ಭಗವದ್ಗೀತೆಯ ಕರ್ಮಯೋಗದ ಶ್ಲೋಕಗಳ ಪಠಣ ನಡೆಯಿತು.
ಸತ್ಸಂಗ ಸಭೆಯಲ್ಲಿ ಶ್ರೀಮತಿ ಅಂಬುಜಾ ಶಾಂತಕುಮಾರ್, ನಾಗರತ್ನಮ್ಮ, ನಾಗರಾಜ್, ಉಷಾ ಶ್ರೀನಿವಾಸ್, ಯತೀಶ್ ಎಂ ಸಿದ್ದಾಪುರ, ಪಿ.ಎಸ್ ಮಾಣಿಕ್ಯ ಸತ್ಯನಾರಾಯಣ, ಸಂಧ್ಯಾ, ಸಿ.ಎಸ್ ಭಾರತಿ ಚಂದ್ರಶೇಖರ್, ಚೇತನ್, ರಶ್ಮಿ ವಸಂತ, ಸುಧಾಮಣಿ, ಗೀತಾ ವೆಂಕಟೇಶ್ ರೆಡ್ಡಿ ಸೇರಿದಂತೆ ಸದ್ಭಕ್ತರು ಉಪಸ್ಥಿತರಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

