ಗ್ರಾಮದಲ್ಲಿ ಮಂಗ ಸಾವು ಗ್ರಾಮಸ್ಥರಿಂದ – ಅಂತ್ಯ ಸಂಸ್ಕಾರ ಜರುಗಿಸಿದರು.
ತಾವರಖೇಡ ಜ.24

ಆಲಮೇಲ ತಾಲೂಕಿನ ತಾವರಖೇಡ ಗ್ರಾಮದಲ್ಲಿ ಸುಮಾರು ೪ .೫ ದಿನಗಳ ಕಾಲ ತಾವರಖೇಡ ಗ್ರಾಮದಲ್ಲಿ ಮಂಗಗಳು ವಾಶವಾಗಿದ್ದವು ಸ್ಥಳೀಯ ಗ್ರಾಮಸ್ಥರು ಮಕ್ಕಳಂತೆ ಜೋಪಾನ ಮಾಡುತ್ತಿದ್ದರು ಅದರಲ್ಲಿ ಒಂದು ಮಂಗ ಅಸ್ವಸ್ಥ ಗೊಂಡಿದ್ದು ಅದನ್ನು ಗಮನಿಸಿದ ತಾವರಖೇಡ ಗ್ರಾಮಸ್ಥರು ಮಂಗನನ್ನು ಕೂಡಲೇ ವಾಹನ ಮೂಲಕ ಆಲಮೇಲ ಸರ್ಕಾರಿ ಪಶು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿಸಿದರು ಸಹಿತ ಚಿಕಿತ್ಸೆ ಫಲಕಾರಿ ಯಾಗದೆ ದಿನಾಂಕ 24/1/2026 ಶನಿವಾರ ರಂದು ಬೆಳಿಗ್ಗೆ 8=00 ಘಂಟೆಗೆ ಮಂಗ ಮೃತ ಪಟ್ಟಿದೆ ಮಂಗನ ಶವ ಸಂಸ್ಕಾರದ ವಿಧಿ ವಿಧಾನಗಳೊಂದಿಗೆ ಸಂಪ್ರದಾಯದಂತೆ ಗ್ರಾಮಸ್ಥರು ನೆರೆವೇರಿಸಿದರು.

ಮಂಗನ ಅಂತ್ಯ ಸಂಸ್ಕಾರ ಊದಿಸುತ್ತ ಬಾರಿಸುತ್ತಾ ನಾನಾ ತರದ ಮದ್ದುಗಳನ್ನು ಸುಡುತ್ತಾ ಭಜನೆ ಮಾಡುತ್ತಾ ಗ್ರಾಮಸ್ಥರು ಜೈ ಶ್ರೀ ರಾಮ್ ಜೈ ಹನುಮಾನ್ ಎಂದು ಘೋಷಣೆ ಕೂಗುತ್ತಾ ಊರಿನ ಪ್ರಮುಖ ಬೀದಿಗಳಲ್ಲಿ ಎತ್ತಿನ ಬಂಡಿಯ ಮೇಲೆ ಮೆರವಣಿಗೆ ಮಾಡುತ್ತಾ ಭೀಮಾ ನದಿಯ ದಂಡೆಯಲ್ಲಿರುವ ಹಳೆ ತಾವರಖೇಡ ಗ್ರಾಮದಿಂದ ಹೊಸ ಪುನರ್ವಸತಿ ಕೇಂದ್ರದಲ್ಲಿ ಮಂಗನ ಅಂತ್ಯಕ್ರಿಯೆ ವೇದಮೂರ್ತಿ ಗುರುಮೋರ್ತಯ್ಯ ಶರಣಯ್ಯ ಹಿರೇಮಠ್ ವಿಧಿ ವಿಧಾನಗಳೊಂದಿಗೆ ನೆರವೇರಿಸಿದರು.
ಗ್ರಾಮದ ಯುವಕರು ಹಿರಿಯರು ತಾಯಂದಿರು ಅಂತ್ಯ ಕ್ರಿಯೆಯಲ್ಲಿ ಭಾಗಿ ಯಾಗಿದ್ದರು. ಅಂತ್ಯ ಕ್ರಿಯೆಗೆ ಆಗಮಿಸಿದ ಭಕ್ತಾದಿಗಳಿಗೆ ಅನ್ನಪ್ರಸಾದ ವ್ಯವಸ್ಥೆ ಅಚ್ಚುಕಟ್ಟಾಗಿ ನಿಭಾಯಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಚಾನಲ್:ರೇವಣಸಿದ್ದಯ್ಯ ಜಿ ಹಿರೇಮಠ ಆಲಮೇಲ

