ಮನ ಮುಟ್ಟುವ – “ಅಮೃತವಾಣಿ” ಚಿತ್ರ.
ಬೆಂಗಳೂರ ಜ.25

ಇತ್ತೀಚಿಗೆ ಸಾಮಾಜಿಕ ಜಾಲ ತಾಣದಲ್ಲಿ ಕಿರುಚಿತ್ರಗಳ ಸದ್ದೇ ಹೆಚ್ಚಿದೆ. ಆದರೆ ದ್ವದ್ವಾರ್ಥದ ಕಿರುಚಿತ್ರಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದುದು ಕಾಣುತ್ತವೆ. ಇದನ್ನು ಬ್ರೇಕ್ ಮಾಡಿರುವ ನವಿಲುಗರಿ ಸಿನಿಮಾಸ್ ನ ಪಿಬಿಎನ್ ಬ್ರದರ್ಸ್ “ಅಮೃತವಾಣಿ” ಎಂಬ ಕಿರುಚಿತ್ರವನ್ನು ಮಾಡಿದ್ದು ಈ ಚಿತ್ರ ಮುದ್ದು ಮಕ್ಕಳಿಗೆ ಪೋಷಕರ ಕಷ್ಟಗಳ ಬಗ್ಗೆ ತಿಳಿಹೇಳುವ ವಿಷಯದ ಬಗ್ಗೆ ಡಾ. ನಿರಂಜನ ಪಿ ಬಿ ಅವರು ಸುಂದರವಾಗಿ ಕಥೆ ಹೇಳಿದ್ದಾರೆ. ಈ ಚಿತ್ರಕ್ಕೆ ನವಿಲುಗರಿ ನವೀನ್ ಪಿ. ಬಿ ಬಂಡವಾಳ ಹೂಡಿದ್ದಾರೆ.

ಬಹಳ ದಿನಗಳ ನಂತರ ಫೈರಿಂಗ್ ಸ್ಟಾರ್ ಹುಚ್ಚು ವೆಂಕಟ್ ಬುದ್ಧಿ ಹೇಳುವ ವಿಶೇಷ ಪಾತ್ರದಲ್ಲಿ ತುಂಬಾ ಅಚ್ಚುಕಟ್ಟಾಗಿ ಅಭಿನಯಿಸಿದ್ದಾರೆ. ಸೋಂಬೇರಿ ಹುಡುಗ ಪಾತ್ರದಲ್ಲಿ ಯಶ್ವಿನ್ ಆರ್ ನೈಜವಾಗಿ ನಟಿಸಿದ್ದಾನೆ. ಇನ್ನೂ ಚಿತ್ರದಲ್ಲಿ ಬರುವ ಉಳಿದ ಪಾತ್ರಗಳೆಲ್ಲ ತುಂಬಾ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಚಿತ್ರಕ್ಕೆ ಪ್ರಣವ್ ಸತೀಶ್ ಸಂಗೀತ,ಛಾಯಾಗ್ರಹಣ ಗೌತಮ್, ಪತ್ರಿಕಾ ಸಂಪರ್ಕ ಡಾ, ಪ್ರಭು ಗಂಜಿಹಾಳ, ಡಾ, ವೀರೇಶ ಹಂಡಿಗಿ ಅವರದಿದೆ.
ಈ ಚಿತ್ರ ನಿತ್ಯ ಜೀವನ ಯು ಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಯಾಗಿ ಯಶಸ್ವಿ ವೀಕ್ಷಣೆ ಪಡೆಯುತ್ತಾ ಇದೆ.
ರಾಜ್ಯ ಮಟ್ಟದ ವಿಶೇಷ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಚಾನಲ್:ಡಾ, ಪ್ರಭು ಗಂಜಿಹಾಳ ಗದಗ

