ಅಸಮಾನತೆಯ ವಿರುದ್ಧ ಹೋರಾಟದ ಚಲನ ಚಿತ್ರ ಲ್ಯಾಂಡ್ ಲಾರ್ಡ್ ಸಿನಿಮಾ ಟಾಕೀಸ್ ಗೆ ಹೋಗಿ – ವೀಕ್ಷಿಸಿರಿ ಎಂದ ಡಿ.ಎಸ್.ಎಸ್ ರಾಜ್ಯ ಸಂಘಟನಾ ಸಂಚಾಲಕರಾದ ಕೆ.ನಂಜಪ್ಪ ಬಸವನಗುಡಿ.

ಮೈಸೂರು ಜ.25

ನಿಮಗೆ ಗೊತ್ತಾ… ಒಂದು ಕ್ಷಣಾ ಮೂಕ ಪ್ರೇಕ್ಷಕಳಂತೆ ನಿಂತೆ.. ಇಡೀ ಥಿಯೇಟರ್ ಮುಂಭಾಗ ಜೈಭೀಮ್ ಘೋಷಣೆಯನ್ನು ಆಕಾಶ ದೆತ್ತರಕ್ಕೆ ಮೊಳಗಿಸಿದ ಏಕೈಕ ಚಿತ್ರ ಇದು.ಇಂಥ ಚಿತ್ರವನ್ನು ತೆರೆಗೆ ತರಲು ಎದೆಗಾರಿಕೆ ಬೇಕು… ಇಡೀ ಚಿತ್ರ ತಂಡಕ್ಕೆ ಧನ್ಯವಾದಗಳು🙏

ಸಂವಿಧಾನವೇ ಶೋಷಿತರ ಬದುಕನ್ನು ಹಸನು ಮಾಡಿದ್ದು, ಇದು ಸಾರ್ವತ್ರಿಕ ಸತ್ಯ . ಒಂದು ತುಂಡು ಭೂಮಿಗಾಗಿ ,ಆ ಭೂಮಿಯಲ್ಲಿ ಬೆಳೆ ಬೆಳೆದು 3 ಹೊತ್ತು ಊಟ ಮಾಡುವ ಎಂಬ ಕನಸು ಹೊತ್ತು ಸಂವಿಧಾನದ ಮೊರೆ ಹೋಗುವ ಕೂಲಿ ಆಳುಗಳ ಸುತ್ತಲ ಹೆಣೆದಿರುವ ಕಥೆ.

ಉಳ್ಳವರು ಮತ್ತು ಇಲ್ಲದವರ ನಡುವಿನ ಸಂಘರ್ಷ… ಜಮೀನ್ದಾರಿಕೆ ಜೀತಗಾರಿಕೆಯ ನಡುವಿನ ಸಮರ, ಅಂದವುಳ್ಳ ತಳ ಸಮುದಾಯದ ಹೆಣ್ಣು ಮಕ್ಕಳನ್ನು ಊರ ಬಸವಿ (ದೇವದಾಸಿ) ಮಾಡ್ತೀನಿ ಅಂತ ತೊಡೆ ತಟ್ಟಿ ಬೆತ್ತಲೆ ನಿಂತ ಗಂಡು ಸೂಳೆಯರ ಗಂಡಸ್ತನಕ್ಕೆ ಕೊಟ್ಟ ಪೆಟ್ಟು.

ಅಸ್ಪೃಶ್ಯರು ಶಿಕ್ಷಣ ಪಡೆಯ ಬಾರದು, ಭೂಮಿ ಒಡೆಯ ನಾಗಬಾರ್ದು, ಆಫೀಸು-ಕಛೇರಿಯಲ್ಲಿ ಕೆಲಸ ಮಾಡ ಬಾರದು. ಇಂಥ ತಡೆ ಗೋಡೆಯನ್ನು ಕೆಡವಿದ್ದು ಸಂವಿಧಾನ. ಸಂವಿಧಾನದ ಹಕ್ಕನ್ನು ಒತ್ತಿ ಒತ್ತಿ ಹೇಳುವ ಅದ್ಬುತ ಸಿನಿಮಾ…

ಉಳುವವನೆ ಭೂಮಿ ಒಡೆಯ ಕಾಯಿದೆ ಬಂದಾಗ ಕಡ್ಡಾಯವಾಗಿ ಅನುಷ್ಠಾನ ಗೊಳಿಸಿದ್ದು ಕರ್ನಾಟಕದಲ್ಲಿ ಅಂದಿನ ದೇವರಾಜ ಅರಸು ಸರ್ಕಾರಕ್ಕೆ ಇದೊಂದು ದೊಡ್ಡ ಸವಾಲು… ಶ್ರೀಮತಿ ಇಂದಿರ ಗಾಂಧಿಯವರನ್ನು ಇಂದಿಗೂ ರೈತಾಪಿ ವರ್ಗ ನೆನೆಯುತ್ತಾರೆ ಎಂದರೆ ಅದುವೇ ಈ ಕಾಯಿದೆಯ ಜಾರಿ… ಜಮೀನ್ದಾರರು ರಾಕ್ಷಸರಂತೆ ವರ್ತಿಸಲು ಶುರು ಮಾಡಿದ್ರು ದೌರ್ಜನ್ಯಗಳು ಹೆಚ್ಚಾದವು. ಇದನ್ನೆಲ್ಲ ಬಗ್ಗು ಬಡಿದಿದ್ದೆ ನಮ್ಮ ಸಂವಿಧಾನ.

ಸಂವಿಧಾನದ ಮಹತ್ತರ ವಿಷಯಗಳನ್ನು ಹೇಳುತ್ತಾ ಹೋಗುವ ಈ ಸಿನೆಮಾ ನಿಜಕ್ಕೂ ಇತಿಹಾಸ ಪುಟದಲ್ಲಿ ದಾಖಲೆ ಯಾಗಲೇ ಬೇಕು.

ಇನ್ನೂ ಮೊದಲನೇದಾಗಿ Duniya Vijay ಅವರಿಗೆ ವಿಶೇಷವಾಗಿ ಅಭಿನಂದನೆಗಳು… ಕರಿಯಾ I Love you ಕರುನಾಡ ಮೇಲಾಣೆ…. ನಿಮ್ಮ ಅತ್ಯದ್ಭುತ ನಟನೆಗೆ ನನ್ನದೊಂದು ದೊಡ್ಡ ಸಲಾಮ್…. ಹೇಳಿ ಮಾಡಿಸಿದಂಥ ಹೀರೊ. ಇಂಥ ಎದೆಗಾರಿಕೆ ಯಾವ ನಟನಲ್ಲೂ ಕಂಡಿಲ್ಲ. ಬಾಯಲ್ಲಿ ಮಾತ್ರ ಬಾಬಾ ಸಾಹೇಬರ ಹೆಸರು ಹೇಳಿ ಚಪ್ಪಾಳೆ ಗಿಟ್ಟಿಸಿ ಕೊಳ್ಳುವ ನಟರು ನಿಮ್ಮಂತೆ ಇಂಥಾ ಸಿನೆಮಾಗಳಲ್ಲಿ ನಟಿಸಿ ಸೈ ಎನಿಸಿ ಕೊಳ್ಳಲಿ.

ಒಬ್ಬ ವಿದ್ಯಾವಂತ ಹೆಣ್ಣು ಮಗಳು ವ್ಯವಸ್ಥೆಯ ದಿಕ್ಕನ್ನೇ ಬದಲಿಸಬಹುದು ಎಂಬುದಕ್ಕೆ ನಿಂಗವ್ವ ರಾಚಯ್ಯನ ಮಗಳು ಭಾಗ್ಯ ಅದ್ಭುತ ಸಾಕ್ಷಿ. ಅಬ್ಬಾ ಈ ಹುಡುಗಿಯಂತೂ ನಟನೆಯಲ್ಲಿ ಜಿದ್ದಿಗೆ ಬಿದ್ದವಳಂತೆ ನಟಿಸಿದ್ದಾಳೆ. (rithnya vijay ದುನಿಯಾ ವಿಜಯ್ ಅವರ ಮಗಳು) ವಾವ್ ನಿಮಗೆ ಸಿನಿ ಭವಿಷ್ಯವಿದೆ.

ರಚಿತಾ ರಾಮ್ ನಿಜಕ್ಕೂ ಕಲಾ ರಾಕ್ಷಿಸಿ ಇನ್ನೂ ರಾಜ್ ಬಿ ಶೆಟ್ಟಿ. ಏನಯ್ಯ ನಿನ್ನ acting ಇಂಥಾ ಖಳನಾಯಕ ಚಿತ್ರ ರಂಗಕ್ಕೆ ಸಿಕ್ಕಿದ್ದು ಅದ್ಭುತ ಕಲಾಕಾರ ಕಣಯ್ಯ ನೀನು. ಸಕಲ ಕಲಾವಲ್ಲಭ 🙏 ಇನ್ನೂ ಕಲಾ ದೇವತೆ ಉಮಾಶ್ರೀ ಅವರನ್ನು ಕೇಳ ಬೇಕೇ..?

ಒಟ್ಟಾರೆ ಎಲ್ಲಾ ಕಲಾವಿದರು ಜಿದ್ದಿಗೆ ಬಿದ್ದಿದ್ದು ನಿಜ ಇನ್ನೂ ನಿರ್ದೇಶಕನಿಗೆ ವಿಶೇಷವಾಗಿ ಅಭಿನಂದನೆಗಳು ಇಂಥಾ ಕಥೆಯನ್ನು ತೆರೆಯ ಮೇಲೆ ತರಲು ದೈರ್ಯ ಬೇಕು ನಿಮ್ಮ ಗಟ್ಟಿ ತನಕ್ಕೆ 🙏 #jadeshkhampi. ಪ್ರಸ್ತುತಕ್ಕೆ ತಕ್ಕಂತೆ ಸಿನಿಮಾ ಮಾಡಿದ್ದೀರಿ. ನಿಜಕ್ಕೂ ಇದೊಂದು ಸಾಂಸ್ಕೃತಿಕ ಕ್ರಾಂತಿ.

ಈ ಚಿತ್ರವನ್ನು ದಾಖಲೆ ಯಾಗುವಂತೆ ಗೆಲ್ಲಿಸುವುದು ನಮ್ಮೆಲ್ಲರ ಹೊಣೆ… ಇಲ್ಲವಾದ್ರೆ ಇಂತಹ ಸಂವಿಧಾನ ಪೂರಕವಾದ ಚಿತ್ರ ತೆಗೆಯಲು ಯಾರು ಸಾಹಸ ಮಾಡುವುದೇ ಇಲ್ಲಾ ರಾಜ್ಯದ ಪ್ರಜ್ಞಾವಂತ ನಾಗರೀಕ ಬಂಧುಗಳು ಲ್ಯಾಂಡ್ ಲಾರ್ಡ್ ಈ ಸಿನಿಮಾವನ್ನು ತಪ್ಪದೇ ನೋಡ ಬೇಕಾಗಿದೆ.

ಏಕೆಂದರೆ ಅಸಮಾನತೆಯ ವಿರುದ್ಧ ಸಮಾ ಸಮಾಜದ ಕನಸಿಗಾಗಿ ಕೂಲಿ ಮಾಡುವ ಸಮಾಜ ಸಂವಿಧಾನದ ಆಶ್ರಯದಲ್ಲಿ ಸರ್ವರಿಗೂ ಸಮಾನತೆ ಇದೆ ಎಂಬುದನ್ನು ಎತ್ತಿ ಹಿಡಿದಿರುವ ಈ ಚಲನ ಚಿತ್ರ ಕಾನೂನಿನ ಅರಿವು ಮತ್ತು ಜಾಗೃತಿಯನ್ನು ಮೂಡಿಸುವ ಪ್ರಯತ್ನ ಸಫಲವಾಗಿದೆ.

ಈ ಸಿನಿಮಾ ತಂಡದ ನಿರ್ದೇಶಕರಿಗೂ ಮತ್ತು ನಟ ದುನಿಯಾ ವಿಜಯ್ ರವರಿಗೂ ತುಂಬು ಹೃದಯದ ಭೀಮ್ ಅಭಿನಂದನೆಗಳನ್ನು ಧನ್ಯವಾದಗಳು ಅರ್ಪಿಸುತ್ತೇನೆ. ಪ್ರತಿಯೊಬ್ಬರು ನೋಡಿ ಹರಿಸಿ ಹಾರೈಸಿರಿ ಎಂದು ಮಹಾತ್ಮ ಪ್ರೊ, ಬಿ.ಕೃಷ್ಣಪ್ಪ ಸ್ಥಾಪಿಸಿದ ಡಿ.ಎಸ್.ಎಸ್ ರಾಜ್ಯ ಸಂಘಟನಾ ಸಂಚಾಲಕರು ಕೆ.ನಂಜಪ್ಪ ಬಸವನಗುಡಿ ಮೈಸೂರು ಆಗ್ರಹಿಸಿದ್ದಾರೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button