ಇಡೀ ಕುಟುಂಬ ಜನರಿಗಾಗಿ ಕೆಲಸ ಮಾಡುತ್ತಿದ್ದೇವೆ – ಜನಪ್ರಿಯ ಶಾಸಕರು ಜಿ.ಎಚ್ ಶ್ರೀನಿವಾಸ್.
ತರೀಕೆರೆ ಜ.25
ಮನೆ ಇಲ್ಲದವರಿಗೆ ನನ್ನ ಕ್ಷೇತ್ರದಲ್ಲಿ ಮನೆ ನಿವೇಶನಗಳ ಹಕ್ಕುಪತ್ರ ವಿತರಣೆ ಮಾಡಲು ಕಂದಾಯ ಗ್ರಾಮ ಮತ್ತು ಉಪ ಕಂದಾಯ ಗ್ರಾಮಗಳನ್ನು ಸರ್ವೆ ಮಾಡಿಸಿದ್ದೇನೆ ಎಂದು ಶಾಸಕರಾದ ಜಿಎಚ್ ಶ್ರೀನಿವಾಸ್ ಹೇಳಿದರು.
ಅವರು ಇಂದು ತಮ್ಮ ನಿವಾಸದ ಕಚೇರಿಯಲ್ಲಿ ಜನ ಸಂಪರ್ಕ ಸಭೆಯನ್ನು ನಡೆಸಿ ಬೆಟ್ಟದಹಳ್ಳಿ, ಕೆ ಹೊಸೂರು, ಸಮತಲ,ಅತ್ತಿಗೆನಾಳು, ಬೈರಾಪುರ ಗ್ರಾಮಗಳಿಂದ ಆಗಮಿಸಿದ್ದ ಗ್ರಾಮಸ್ಥರೊಂದಿಗೆ ಮಾತನಾಡುತ್ತಾ ಬಗರ್ ಹುಕುಂ ಸಾಗುವಳಿಯನ್ನು ಸಕ್ರಮ ಮಾಡಿ ಹಕ್ಕು ಪತ್ರ ಕೊಡಿಸಿದ್ದೇನೆ, 8000 ಕುಟುಂಬಗಳಿಗೆ ಮನೆ ನಿವೇಶನ ಹಕ್ಕುಪತ್ರ ಕೊಟ್ಟಿದ್ದು ಇ ಸ್ವತ್ತು ಮಾಡಿಸಿದ್ದೇನೆ ಎಂದು ಹೇಳಿದರು.
ವಿಧಾನ ಸಭೆಯ ಕಲಾಪಗಳಲ್ಲಿ ಮಾತನಾಡಿ ಮಾನ್ಯ ಮುಖ್ಯ ಮಂತ್ರಿಗಳು ಉಪ ಮುಖ್ಯಮಂತ್ರಿಗಳು ಹಾಗೂ ಹಲವಾರು ಮಂತ್ರಿಗಳ ಗಮನ ಸೆಳೆದ ಪರಿಣಾಮ ಕಂದಾಯ ಗ್ರಾಮ, ಉಪ ಕಂದಾಯ ಗ್ರಾಮ ಯೋಜನೆಯಡಿ ಮನೆ ನಿವೇಶನ ರಹಿತರಿಗೆ ಮನೆ ನಿವೇಶನ ನೀಡಲು ಈ ಯೋಜನೆ ಜಾರಿಯಾಗಿ ಇಂದು ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಲು ಸಹ ಈ ಯೋಜನೆ ಜಾರಿಯಲ್ಲಿರುವಂತೆ ಮಾಡಿದ್ದೇನೆ ಎಂದು ಹೇಳಿದರು.
ನಾನು ಜಾತಿ ನೋಡಿ ಕೆಲಸ ಮಾಡಿಲ್ಲ, ಎಲ್ಲಾ ಜಾತಿ ಸಮಾಜದವರನ್ನು ಒಂದೇ ಸಮಾನವಾಗಿ ನೋಡಿ ಕೆಲಸ ಮಾಡಿದ್ದೇನೆ. ಇಡೀ ನಮ್ಮ ಕುಟುಂಬ ಜನರಿಗಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.

ಈ ಸಭೆಯಲ್ಲಿ ಕೆಡಿಪಿ ಸದಸ್ಯರಾದ ಎಚ್ಎಸ್ ಮೆಹಬೂಬ್, ಸುಣ್ಣದಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಗಂಗಾಧರ್, ಮನು ಮುಂತಾದ ಸಾರ್ವಜನಿಕರು ಸಭೆಯಲ್ಲಿ ಭಾಗವಹಿಸಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಚಾನಲ್:ಎನ್. ವೆಂಕಟೇಶ್.ತರೀಕೆರೆ ಚಿಕ್ಕಮಗಳೂರು

