ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಪದಗ್ರಹಣ & ದಶಮಾನೋತ್ಸವ ಕಾರ್ಯಕ್ರಮ ಜರುಗಿತು.
ಕೊಲ್ಲೂರು ಜ.25

ಚಿತ್ತಾಪೂರ ತಾಲೂಕಿನ ಕೊಲ್ಲೂರು ಗ್ರಾಮದಲ್ಲಿ ಕ.ಜಾ.ಪ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ದಶಮಾನೋತ್ಸವ ಕಾರ್ಯಕ್ರಮ ನಡೆಯಿತು.
ಕಲಾವಿದರು ಸಾಕಷ್ಟು ಜನರಿದ್ದು ಅದರಲ್ಲಿ ಅಧಿಕ ಜನರು ಎಲೆಯ ಮರೆ ಕಾಯಿಯಂತಿರುವ ಕಲಾವಿದರನ್ನು ಬೆಳಕಿಗೆ ತರುವುದು ಕನ್ನಡ ಜಾನಪದ ಪರಿಷತ್ ಮೂಲ ಉದ್ದೇಶ ಎಂದು ಕ.ಜಾ.ಪ ಜಿಲ್ಲಾಧ್ಯಕ್ಷ ಎಂ.ಬಿ ನಿಂಗಪ್ಪ ಹೇಳಿದರು.
ಚಿತ್ತಾಪುರ ತಾಲೂಕಿನ ಕೊಲ್ಲೂರು ಗ್ರಾಮದ ಗ್ರಾಮ ಪಂಚಾಯತಿ ಕಾರ್ಯಾಲಯದ ಆವರಣದಲ್ಲಿ ಕನ್ನಡ ಜಾನಪದ ಪರಿಷತ್ ಬೆಂಗಳೂರು, ಕಲಬುರಗಿ, ಚಿತ್ತಾಪುರ ತಾಲೂಕು ಹಾಗೂ ನಾಲವಾರ (ವಲಯ) ಹೋಬಳಿ ಘಟಕದ ಸಹಯೋಗದಲ್ಲಿ ಕನ್ನಡ ಜಾನಪದ ವಲಯ ಘಟಕ ಪದಾಧಿಕಾರಿಗಳ ಪದಗ್ರಹಣ ಸಂಭ್ರಮ, ವಿವಿಧ ಕ್ಷೇತ್ರದಲ್ಲಿ ಇರುವ ಸಾಧಕರಿಗೆ ಸನ್ಮಾನ, ಹಾಗೂ ಹೋಬಳಿ ಘಟಕದ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಕೊಲ್ಲೂರು ಸರ್ಕಾರಿ ಶಾಲಾ ಮಕ್ಕಳ ಪ್ರಾರ್ಥನ ಗೀತೆ ಹಾಡುವ ಎಲ್ಲಾ ಕಜಾಪ ಸರ್ವ ಸದಸ್ಯರ ಸಮ್ಮುಖದಲ್ಲಿ ಉದ್ಘಾಟಿಸಿ.
ನಾಲವಾರ ಹೋಬಳಿ ಘಟಕದ ಪದಾಧಿಕಾರಿಗಳ ಪದಗ್ರಹಣ ನೆರವೇರಿಸಿ ಮಾತನಾಡಿ, ಜೋಗುಳ, ಲಾವಣಿ, ಹಂತಿ, ಕುಟ್ಟುವ, ಬಿಸುವ, ರಾಸಿ ಮಾಡುವ ಇನ್ನಿತರೆ ಹಲವಾರು ಹಾಡುಗಳನ್ನು ದಾಖಲಿಸಿ ಕೊಂಡು ಮಕ್ಕಳಿಗೆ ತಿಳಿಸಿ ಕೊಟ್ಟು ನೆಲ-ಮೂಲ ಪರಂಪರೆಯ ರೂವಾರಿ ಗಳನ್ನಾಗಿ ರೂಪಿಸುವುದು ಅವಶ್ಯವಿದೆ ಎಂದರು.

ಕ.ಜಾ.ಪ ತಾಲೂಕಾಧ್ಯಕ್ಷ ಚನ್ನವೀರ ಕಣಿಗಿ ಮಾತನಾಡಿ, ಜನರ ಎದೆಯ ಭಾವದಿಂದ ಜನ ಜನಿತವಾದ ಜನಪದ ಸಾಹಿತ್ಯವು ಹಳ್ಳಿ ಸೊಗಡಿನ ಮೂಲ ಸಂಸ್ಕೃತಿ ಆಕರ. ಅದು ಉತ್ತಮ ಆರೋಗ್ಯಕ್ಕೆ ಮೂಲ ರಕ್ಷಕ ಎಂದು ಹೇಳಿದರು.
ಶ್ರೀ ಭೀಮರೆಡ್ಡಿ ಗೌಡ ಕುರಾಳ ಸುಗೂರ ಎನ್ ಅವರು ಸನ್ಮಾನ ಸ್ವೀಕರಿಸಿ ಜ್ಯೋತಿ ಬೆಳಗಿಸಿ ಮಾತನಾಡಿ ಪುರಸ್ಕೃತರು. ಕ.ಜಾ.ಪ ಮಕ್ಕಳ ಹತ್ತಿರಕ್ಕೆ ಬಂದು ಸಾಹಿತ್ಯ ಸಂಸ್ಕೃತಿ ಬೆಳೆಸುತ್ತಿವೆ ಜನಪದವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕ.ಜಾ.ಪ ಮುಂಚುಣಿಯಲ್ಲಿದೆ ಎಂದರು.
ಜಾನಪದ ಪರಿಷತ್ ಪದಾಧಿಕಾರಿಗಳಿಗೆ ಸತ್ಕಾರಕ್ಕೆ ಉತ್ತರವಾಗಿ ವಿಶ್ರಾಂತ ಪ್ರಾಧ್ಯಾಪಕ ವಾಸುದೇವ ಸೇಡಂ ಸರ ಅವರು ಮಾತನಾಡಿದರು. ಈ ಸಂಧರ್ಭದಲ್ಲಿ ಶರಣಗೌಡ ಕರಡ್ಡಿ, ಶ್ರೀ ಹಣಮಂತ ರೆಡ್ಡಿ ಗೌಡ ತಿಪ್ಪರೆಡ್ಡಿ, ಕೃಷ್ಣಾರೆಡ್ಡಿ ಹಿರೆಡ್ಡಿ, ಶರಣು ಸಾಹುಕಾರ್ ಬಿರಾಳ. ಸ್ವಾಗತ ಭಾಷಣ – ಭಾಗಪ್ಪ ಎಂ ಯಾದಗಿರ ಕೊಲ್ಲೂರು ಮಾಡಿದರು.
ಗ್ರಾಮ. ಪಂಚಾಯತ ಸದಸ್ಯರು. ಹಾಗು ರಮೇಶ್ ಹಡಪದ, ಜೈ ಭೀಮ್ ಮಾರಡಗಿ, ಈರಣ್ಣ ಭಜಂತ್ರಿ, ಶಿವು ಪೂಜಾರಿ, ಸೇರಿದಂತೆ ನಾಲವಾರ ವಲಯ ಘಟಕ ಕಸಾಪ ಅಧ್ಯಕ್ಷರು ಅಂಜುನಾಥ ನಾಯ್ಕಲ್, ಮತ್ತು ಕಸಾಪ ಪದಾಧಿಕಾರಿಗಳು. ಮತ್ತು ಸದಸ್ಯರು. ಮಹಿಳಾ ತಾಯಂದಿರು ಸೇರಿದಂತೆ ಅನೇಕ ಕನ್ನಡದ ಅಭಿಮಾನಿಗಳು ಸೇರಿದರು, ಹಾಗೂ ಕ.ಜಾ.ಪ ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್ ಹಾಗೂ ದೇವು ಪೂಜಾರಿ ನಾಲವಾರ ವಲಯ ಘಟಕ ಸಂಚಾಲಕರು, ಸಹ ಸಂಚಾಲಕ ಮಲ್ಲಿಕಾರ್ಜುನ ತಳವಾರ ಮತ್ತು ಚಂದಾಸ್ ಸನ್ನತಿ, ಮತ್ತು ಮಹಿಳಾ ಪ್ರತಿನಿಧಿ ಗಂಗೂಬಾಯಿ ಮಠಪತಿ ಕೊಲ್ಲೂರು ಹಾಗೂ ಶಿವ ಲೀಲಾ ತುನ್ನೂರ, ಗೌರವ ನಿರ್ದೇಶಕರು ಮಲ್ಲಪ್ಪ ಸೊಂಟೇನೂರ, ಶರಣು ಹಡಪದ ಕೊಲ್ಲೂರು, ಭೀಮರಾಯ ಬೆಳಗೇರಿ, ಕಾರ್ಯಕ್ರಮ ನಿರೂಪಣೆ ಶಾಂತಕುಮಾರ ಎಣ್ಣಿ ಲಾಡ್ಲಾಪೂರು ಮಾಡಿದರು.
ಪ್ರಾಸ್ತಾವಿಕ ಭಾಷಣ ರಾಜೇಂದ್ರ ಕೊಲ್ಲೂರು ಮಾಡಿದರು ಎಂದು ನಾಲವಾರ ವಲಯ ಘಟಕ ಕನ್ನಡ ಜಾನಪದ ಪರಿಷತ್ ಸಂಚಾಲಕ ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್ ಅವರು ಪತ್ರಿಕೆ ಪ್ರಕಟಣೆಗೆ ತಿಳಿಸಿದರು ಎಂದು ವರದಿಯಾಗಿದೆ.

