“ಸನ್ಮಾರ್ಗದ ದುಂಬಿ ಪುಸ್ತಕದ ವಿಮರ್ಶೆ:….

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಹಿರೇಮಾಗಿ ಗ್ರಾಮದ ಹಿರೇಮಳಗಾವಿಯ ಶಾಲೆಯ ಶಿಕ್ಷಕರಾದ ಶ್ರೀ ಮುತ್ತು ವಡ್ಡರವರ ಹಾಗೂ ನನ್ನ ಆತ್ಮೀಯ ಗುರುಗಳಾದ ಅವರ ಸನ್ಮಾರ್ಗದ ದುಂಬಿ ಎಂಬ ಕವನ ಸಂಕಲನದಲ್ಲಿ ಇರುವ ಪದಗಳು ಸಮುದ್ರದ ಆಳದಲ್ಲಿ ಸಿಗುವ ಮುತ್ತಿಗೆ ಇರುವಷ್ಟು ಬೆಲೆ ಇವರು ತಮ್ಮ ಕವನ ಸಂಕಲನದಲ್ಲಿ ಜೋಡಿಸಿದ ಪ್ರತಿಯೊಂದು ಪದಗಳಿಗೆ ಕೂಡ ಅಷ್ಟೇ ಬೆಲೆಯಿದೆ ಅಂತ ಹೇಳಿದರೆ ತಪ್ಪಾಗಲಾರದು. ಏಕೆಂದರೆ ಅಷ್ಟು ಅಚ್ಚುಕಟ್ಟಾಗಿ ಪ್ರತಿಯೊಂದು ಕವನದಲ್ಲಿ ಕೂಡ ಪದಗಳ ಜೋಡಣೆ ಯಾಗಿದೆ.
ಪುಸ್ತಕ:ಸನ್ಮಾರ್ಗದ ದುಂಬಿ
ಶುಭ ಸಂದೇಶ:ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು, ಕೊಪ್ಪಳ
ಆಶೀರ್ವಾದದ ಶುಭ ನುಡಿ:ಜಗದ್ಗುರು ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ
ಮುನ್ನುಡಿ:ಡಾ, ಮಾತಾ ಬಿ.ಮಂಜಮ್ಮ ಜೋಗತಿ
ಬೆನ್ನುಡಿ:ಶ್ರೀ ಗಂಗಾವತಿ ಪ್ರಾಣೇಶ್ ರವರು
ಗ್ರಂಥ ದಾಸೋಹಿ:ಡಾ, ನ.ಗಂಗಾಧರಪ್ಪ ಮೈಸೂರು
ಪ್ರೋತ್ಸಾಹದ ನುಡಿ:ಶ್ರೀಮತಿ ಜಾಸ್ಮಿನ್ ಎಂ ಕಿಲ್ಲೇದಾರ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹುನಗುಂದ
ಲೇಖಕರು:ಶ್ರೀ ಮುತ್ತು ಯ. ವಡ್ಡರ ಶಿಕ್ಷಕರು,ಹುನಗುಂದ
ಇವರ ಸನ್ಮಾರ್ಗದ ದುಂಬಿಯೆಂಬ ಕವನ ಸಂಕಲನದಲ್ಲಿ ಇವರ ಕವನಗಳನ್ನು ಓದುತ್ತಾ ಹೋದರೆ ಪ್ರಸ್ತುತ ನಮ್ಮ ಜೀವನ ನಾವು ಹುಟ್ಟಿ ಬೆಳೆದು ಸಾಧನೆ ಮಾಡುವ ಬಗ್ಗೆ ಹಿರಿಯರಿಗೆ ಗೌರವ ಕೊಡುವ ಬಗ್ಗೆ ಪರಿಸರದ ಕಾಳಜಿಯ ಬಗ್ಗೆ ಸಾಧಿಸುವ ಛಲದ ಬಗ್ಗೆ ಶಿಕ್ಷಕರ ಬಗ್ಗೆ ಶಿಕ್ಷಕ ಮತ್ತು ಶಿಷ್ಯರ ನಡುವಿನ ಸಂಬಂಧದ ಬಗ್ಗೆ ಶಾಲೆಗಳ ಬಗ್ಗೆ ಹೀಗೆ ಅನೇಕ ಅಂಶಗಳನ್ನು ಈ ಎಲ್ಲ ಕವನಗಳು ಒಳಗೊಂಡಿದೆ. ಅದರಲ್ಲಿ ಕೆಲವೊಂದಿಷ್ಟು ಕವನದ ಬಗ್ಗೆ ಹೇಳುವುದಾದರೆ ಇವರು ಬರೆದಿರುವ ಮೊದಲ ಕವನದಲ್ಲಿ ನಡೆದಾಡುವ ದೇವರು ಸಿದ್ದಗಂಗಾ ಶ್ರೀ ಈ ಒಂದು ಕವನದಲ್ಲಿ ಆ ಒಂದು ಮಠದ ಹಾಗೂ ಪರಮ ಪೂಜ್ಯರ ಬಗ್ಗೆ ಅಷ್ಟೇ ಅಲ್ಲದೆ ತಾವು ಹುಟ್ಟಿ ಬೆಳೆದು ಈ ರೀತಿ ಒಬ್ಬ ಒಳ್ಳೆಯ ಶಿಕ್ಷಕನಾಗಿ ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗಿ ಗುರುತಿಸಿ ಕೊಳ್ಳಲು ಆ ಒಂದು ಸಿದ್ಧಗಂಗಾ ಮಠದ ಪರಮ ಪೂಜ್ಯರೆ ಕಾರಣ ಆ ಒಂದು ಸಿದ್ಧಗಂಗಾ ಮಠನೇ ಕಾರಣ ಎನ್ನುವ ರೀತಿಯಲ್ಲಿ ತಂದೆ ತಾಯಿ ಎಷ್ಟು ಮುಖ್ಯವೋ ಅದೇ ರೀತಿ ಈ ಮಠ ಮತ್ತು ಶ್ರೀಗಳು ಕೂಡ ಅವರ ಜೀವನಕ್ಕೆ ಅಷ್ಟೇ ಮುಖ್ಯ ಎಂದು ತುಂಬಾ ಸೊಗಸಾಗಿ ಬರೆದಿದ್ದಾರೆ. ನಂತರ ಕಾಡು ಬೆಳೆಸಿ ನಾಡು ಉಳಿಸಿ, ಈ ಒಂದು ಕವನದಲ್ಲಿ ಪ್ರಕೃತಿಯನ್ನು ಸಂರಕ್ಷಿಸಿ, ಮುಂದಿನ ಪೀಳಿಗೆಗೆ ಹಸಿರು ಭೂಮಿಯನ್ನು ಕೊಡುಗೆಯಾಗಿ ನೀಡುವುದು ನಮ್ಮ ಜವಾಬ್ದಾರಿ ಯಾಗಿದೆ ಹಸಿರೇ ಉಸಿರು ಉಸಿರೇ ಹೆಸರು ಹಸಿರೇ ಉಸಿರಾಗಲಿ ಎಂದು ಬರೆದಿದ್ದಾರೆ. ಹಾಗೆ ಹತ್ತರ ಮಗುವೆ ಎಚ್ಚರವಾಗಿರು ಈ ಒಂದು ಕವನದಲ್ಲಿ ಅಂದರೆ ವಿದ್ಯಾರ್ಥಿಗಳ ಮುಂದಿನ ಭವಿಷ್ಯ ಪ್ರಾರಂಭವಾಗುವುದು 10 ನೇ. ತರಗತಿ ಪರೀಕ್ಷೆಯಿಂದ ಅಂದರೆ ನಾವು ಯಾರಿಗಾಗಿ ಯಾವುದಕ್ಕಾಗಿ ಹಾಗೂ ಮುಂದೆ ನಮ್ಮ ಭವಿಷ್ಯವನ್ನು ರೂಪಿಸಿ ಕೊಳ್ಳಲು ಹೇಗೆ ಓದಬೇಕು ಮತ್ತು ನಮ್ಮ ತಂದೆ ತಾಯಿಗಳು ಪಡುತ್ತಿರುವ ಕಷ್ಟಕ್ಕೆ ಹೇಗೆ ಪ್ರತಿಫಲ ನೀಡಬೇಕು ಹೇಗೆ ನಾವು ಸಮಾಜದಲ್ಲಿ ಗುರುತಿಸಿ ಕೊಳ್ಳಬೇಕು ಇನ್ನು ಅನೇಕ ವಿಷಯಗಳನ್ನು ಈ ಒಂದು ಕವನದಲ್ಲಿ ವಿವರಿಸಿದ್ದಾರೆ. ಅನ್ನ ನೀಡುವ ಅನ್ನದಾತನ ಈ ಒಂದು ಕವನದಲ್ಲಿ ದೇಶದ ಗಡಿ ಕಾಯಲು ಸೈನಿಕ ಎಷ್ಟು ಮುಖ್ಯನೋ ಅಷ್ಟೇ ದೇಶದ ಜನರಿಗೆ ಅನ್ನ ನೀಡಲು ಕೃಷಿಕರು ಕೂಡ ಅಷ್ಟೇ ಮುಖ್ಯ. ದುಡಿಮೆಯೇ ದೇವರು ಎಂದು ನಂಬಿ ಹಗಲಿರುಳು ಭೂಮಿ ತಾಯಿಯ ಸೇವೆ ಮಾಡಿ ಇಡೀ ಜಗತ್ತಿಗೆ ಅನ್ನ ನೀಡುವ ಕಾಯಕ ಯೋಗಿಗಳ ಬಾಳು ಹಸನಾಗಲಿ ಸರ್ಕಾರದಿಂದ ಅವರಿಗೆ ಸಿಗಬೇಕಾದಂತಹ ಎಲ್ಲ ಸೌಲಭ್ಯಗಳು ಸಿಗಲಿ. ಹೃದಯವಂತ ರೈತನೇ ನಮ್ಮ ದೇವರು ಎಂದು ತಮ್ಮ ಕವನದಲ್ಲಿ ವಿವರಿಸಿದ್ದಾರೆ. ನಿನ್ನಿಂದಲೇ ಎಂಬ ಕವನದಲ್ಲಿ ತಾಯಿಯ ಬಗ್ಗೆ ತಾಯಿ ಎಂಬುದು ಕೇವಲ ಶಬ್ದವಲ್ಲ, ಅದೊಂದು ಭಾವನೆ, ಪ್ರೀತಿಯ ಸಾಗರ. ಪ್ರತಿಯೊಬ್ಬರ ಜೀವನದಲ್ಲೂ ತಾಯಿಯ ಪಾತ್ರ ಅತ್ಯಂತ ಶ್ರೇಷ್ಠ ಮತ್ತು ಅಪರಿಮಿತ. ಕಣ್ಣಿಗೆ ಕಾಣುವ ದೇವರೇ ಹಡೆದೆವ್ವ. ಕಷ್ಟದ ಸಮಯದಲ್ಲಿ ಧೈರ್ಯ ತುಂಬಿ, ಸರಿಯಾದ ದಾರಿಯಲ್ಲಿ ನಡೆಯಲು ಪ್ರೇರೇಪಿಸುವ ಮಾರ್ಗದರ್ಶಿ ಬೆಳಕು. ಅವಳನ್ನು ಎಷ್ಟು ಬಣ್ಣಿಸಿದರೂ ಪದಕ್ಕೆ ಸಿಗದವಳು ಎಂದು ತುಂಬಾ ಸೊಗಸಾಗಿ ತಾಯಿಯ ಬಗ್ಗೆ ವಿವರಿಸಿದ್ದಾರೆ. ಹಾಗೆ ಸಮಯದ ಸದುಪಯೋಗ ಎಂಬ ಕವನದಲ್ಲಿ ಪ್ರಸ್ತುತ ದಿನಮಾನಗಳಲ್ಲಿ ಸಮಯ ಎಷ್ಟು ಮುಖ್ಯ ಎಂಬುದು ಕಳೆದ ಸಮಯ ಮರಳಿ ಬರುವುದಿಲ್ಲ ಇರುವಂತಹ ಸಮಯದಲ್ಲಿ ಏನಾದರೂ ಸಾಧನೆ ಮಾಡಿ ಒಳ್ಳೆಯ ಹೆಸರನ್ನು ಗಳಿಸಬೇಕು. ಸಮಯವು ಹಣಕ್ಕಿಂತ ಮೌಲ್ಯಯುತ ವಾಗಿದ್ದು, ಕಳೆದು ಹೋದ ಸಮಯ ಎಂದಿಗೂ ಮರಳಿ ಬರುವುದಿಲ್ಲ ಎಂಬುದನ್ನು ನೆನಪಿಟ್ಟು ಕೊಂಡು ಪ್ರತಿಯೊಬ್ಬರೂ ಸಮಯದ ಮಹತ್ವವನ್ನು ಅರಿತು ಬದುಕಬೇಕು ಎಂಬುದನ್ನು ಈ ಒಂದು ಕವನದಲ್ಲಿ ತಿಳಿಸಿದ್ದಾರೆ.
ಹಾಗೆ ಅಪ್ಪ ನನ್ನಪ್ಪ ಎಂಬ ಕವನದಲ್ಲಿ ಅಪ್ಪ ತಮ್ಮ ಮಕ್ಕಳನ್ನು ಬೆಳೆಸಿದ ರೀತಿ ಕಷ್ಟದಲ್ಲಿ ನೋವನ್ನು ನುಂಗಿ ಮನೆಯ ಜವಾಬ್ದಾರಿಯನ್ನು ಹೊತ್ತುಕೊಂಡು ಮಕ್ಕಳನ್ನು ರಾಜ ರಾಣಿಯಂತೆ ಬೆಳೆಸಿದ ರೀತಿ ಕುಟುಂಬದ ಎಲ್ಲಾ ನೋವುಗಳನ್ನು ನುಂಗಿ, ಮಕ್ಕಳ ಸುಖ-ಸಂತೋಷಕ್ಕಾಗಿ ಬದುಕಿನುದ್ದಕ್ಕೂ ಶ್ರಮಿಸುವ ಶ್ರಮಜೀವಿ. ಅಪ್ಪ ಬೆನ್ನಿಲುಬಾಗಿ ನಿಂತು, ಧೈರ್ಯ ತುಂಬಿ, ಮಾರ್ಗದರ್ಶನ ನೀಡುವ ದಾರಿ ದೀಪ. ಅವರ ಪ್ರೀತಿ ಮತ್ತು ಮಾರ್ಗದರ್ಶನವೇ ನಮ್ಮ ಬಾಳಿನ ಬುನಾದಿ. ಅಪ್ಪನಿಂದಲೇ ಬದುಕೆ ಕಥೆಯಾಯಿತು ನನ್ನಪ್ಪ ಅಂತ ಈ ಒಂದು ಕವನದಲ್ಲಿ ವಿವರಿಸಿದ್ದಾರೆ. ಹಾಗೆ ನೀವು ಸುಮ್ಮನಿರಿ ಸಾಕು ಈ ಒಂದು ಕವನದಲ್ಲಿ ಬೆನ್ನ ಹಿಂದೆ ಮಾತನಾಡುವವರ ಬಗ್ಗೆ ತಲೆಕೆಡಿಸಿಕೊಳ್ಳದೆ ನಾವು ಮಾಡುವ ಕೆಲಸದ ಬಗ್ಗೆ ಯೋಚನೆ ಮಾಡಿ ಮಾತನಾಡುವವರಿಗೆ ಕೂಡ ನಾವು ಮಾಡಿರುವ ಕೆಲಸ ನಮ್ಮನ್ನು ಹೊಗಳುವಂತೆ ಮಾತನಾಡಲು ಸಾಧನೆ ಮಾಡಬೇಕು ಎಲ್ಲಾ ಅವಮಾನ ಅಪಮಾನಗಳನ್ನು ಸಹಿಸಿಕೊಂಡು ಅವುಗಳ ಬಗ್ಗೆ ಚಿಂತಿಸದೆ ಸಾಧನೆಯ ಬಗ್ಗೆ ಚಿಂತನೆ ಮಾಡಿ ಸಾಧನೆಯನ್ನು ಸಾಧಿಸಿ ಅವಮಾನ ಅಪಮಾನ ಮಾಡಿದವರೇ, ನಿಮ್ಮಿಂದ ಏನು ಆಗುವುದಿಲ್ಲ ಹುಟ್ಟಿದ್ದೇ ವ್ಯರ್ಥ ಎನ್ನುವವರ ಮುಂದೆ ಅಸಮಾಧಾನಗೊಳ್ಳದೆ ಸಾಧನೆ ಮಾಡಿ ಹುಟ್ಟಿದ್ದು ಸಾರ್ಥಕ ಎನ್ನುವ ಹಾಗೆ ನೆಮ್ಮದಿಯಾಗಿ ಯಾವುದೇ ರೀತಿ ಚಿಂತನೆ ಮಾಡದೇ ಬದುಕಬೇಕು ಎಂದು ಸುಂದರವಾಗಿ ಸೊಗಸಾಗಿ ವಿವರಿಸಿದ್ದಾರೆ. ಗಡಿಯ ರಕ್ಷಕ ಹೆಮ್ಮೆಯ ಸೈನಿಕ ಎಂಬ ಕವನದಲ್ಲಿ ನಮ್ಮ ದೇಶದ ನಾಲ್ಕು ದಿಕ್ಕುಗಳಲ್ಲಿಯೂ ನಮ್ಮ ಯುವ ಉತ್ಸಾಹದ ಸೈನಿಕರು ಹಗಲಿರುಳು ಎನ್ನದೆ ನಮ್ಮ ದೇಶದ ರಕ್ಷಣೆಯನ್ನು ತಮ್ಮ ಮಡದಿ ಮಕ್ಕಳನ್ನು ಕುಟುಂಬ ಸಂಸಾರವನ್ನು ಮರೆತು ನಮ್ಮ ದೇಶದ ಪ್ರಜೆಗಳೆಲ್ಲರನ್ನು ನಿಶ್ಚಿಂತೆಯಿಂದ ನಿದ್ದೆ ಮಾಡುವಂತೆ ಕಾಪಾಡುತ್ತಿದ್ದಾರೆ ನಮ್ಮ ಈ ನೆಮ್ಮದಿಯ ಬದುಕಿಗೆ ಕಾರಣವೇ ನಮ್ಮ ದೇಶದ ವೀರ ಸೈನಿಕರು ಎಂದು ಸೈನಿಕರ ಬಗ್ಗೆ ತುಂಬಾ ಚೆನ್ನಾಗಿ ವಿವರಿಸಿದ್ದಾರೆ. ಹಾಗೆ ಕಲಿಸು ಗುರುವೇ ಕಲಿಸು ಜ್ಞಾನ ಭಂಡಾರದ ಗಣಿ ಗುರುಗಳು ಈ ಕವನಗಳಲ್ಲಿ ಕತ್ತಲನ್ನು ಹೋಗಲಾಡಿಸಿ ಬೆಳಕನ್ನು ತೋರುವವರೇ ಗುರು. ದಾರಿಯೇ ಗುರು ಗುರುವೇ ದಾರಿ ಎಂಬ ನಿಟ್ಟಿನಲ್ಲಿ ಅಕ್ಷರಗಳನ್ನು ಕಲಿಸುತ ವಿದ್ಯಾರ್ಥಿಯ ಬದುಕನ್ನು ತಿದ್ದುವ ಮೂಲಕ ಸನ್ಮಾರ್ಗದ ದಾರಿಯನ್ನು ತೋರಿಸಿ ಒಬ್ಬ ಒಳ್ಳೆಯ ಪ್ರಜೆಯನ್ನಾಗಿ ಮಾಡಿ ಹೆತ್ತ ತಂದೆ ತಾಯಿಗೂ ಕೂಡ ಒಳ್ಳೆಯ ಮಕ್ಕಳನ್ನಾಗಿ ಮಾಡಿ ಒಬ್ಬ ಶಿಷ್ಯನ ಸಂಪೂರ್ಣ ಜೀವನದ ಜವಾಬ್ದಾರಿಯನ್ನು ಹೇಗೆ ಆತ ನಿಭಾಯಿಸಬೇಕು ಎಂದು ಎಲ್ಲ ವಿಷಯಗಳನ್ನು ತಿಳಿಸಿಕೊಟ್ಟು ಒಳ್ಳೆಯ ವಿದ್ಯಾರ್ಥಿ ಅಥವಾ ಒಳ್ಳೆಯ ವ್ಯಕ್ತಿಯನ್ನಾಗಿ ರೂಪಿಸುವ ಗುರುವಿನ ಬಗ್ಗೆ ತುಂಬಾ ಚೆನ್ನಾಗಿ ಜ್ಞಾನ ದೇಗುಲದ ಜ್ಞಾನ ಭಂಡಾರದ ಗಣಿಯಾದ ಶ್ರೇಷ್ಠರು ಎಂದು ಗುರುವಿನ ಬಗ್ಗೆ ವಿವರಿಸಿದ್ದಾರೆ. ಬದಲಾಗಲಿ ಬದುಕು ಎಂಬ ಕವನದಲ್ಲಿ ಮನುಷ್ಯನಲ್ಲಿ ಇರತಕ್ಕಂತಹ ಅಹಂಕಾರ, ಸೊಕ್ಕು, ಹಣ,ಗರ್ವ ಇವೆಲ್ಲವೂ ಶಾಶ್ವತವಲ್ಲ ಪ್ರೀತಿ, ಮಮಕಾರ, ಒಳ್ಳೆಯ ಮಾತುಗಳು, ಒಳ್ಳೆಯ ಸಂಬಂಧ ಸ್ನೇಹದ ಜೀವನ, ಹಿರಿಯರಿಗೆ ಕಿರಿಯನಾಗಿ ಬಾಳಿ ಮತ್ತು ಕಿರಿಯರಿಗೆ ಮಾರ್ಗದರ್ಶಕನಾಗಬೇಕು ಮತ್ತು ಹೇಗೆ ಗೌರವ ಕೊಡಬೇಕು ಮಾನವ ಕುಲ ಒಂದೇ ಎಂಬುದನ್ನು ಎಲ್ಲ ರೀತಿಯ ತಾರತಮ್ಯವನ್ನು ಬಿಟ್ಟು ಸಮಾನತೆಯಿಂದ ಬದುಕಬೇಕು ನಾವು ಕೆಲಸ ಮಾಡುವಾಗ ಮಾತು ಕಡಿಮೆ ಇರಬೇಕು ಸಾಧಕನಾದ ಮೇಲೆ ಸೌಜನ್ಯತೆ ಹೆಚ್ಚಿಗೆ ಇರಬೇಕು ಎಂದು ಬದುಕಿಗೆ ಅರ್ಥಪೂರ್ಣವಾದಂತಹ ವಿಷಯಗಳನ್ನು ಈ ಒಂದು ಕವನದಲ್ಲಿ ವಿವರಿಸಿದ್ದಾರೆ. ಬಿಟ್ಟು ಬಿಡು, ಕೆಟ್ಟುಹೋಗುವ ಮುನ್ನ ಈ ಒಂದು ಕವನದಲ್ಲಿ ಮನುಷ್ಯನಲ್ಲಿ ಇರತಕ್ಕಂತಹ ಕೋಪ, ದ್ವೇಷ, ಹಿಂಸೆ, ಅಸೂಹೆ,ಮೋಸ,ಅಹಂಕಾರ, ಹೊಟ್ಟೆಕಿಚ್ಚು, ಚುಚ್ಚು ಮಾತುಗಳು, ಕೀಳರಿಮೆ, ಮೋಹ ಮತ್ತೊಬ್ಬರನ್ನು ನೋಡಿ ನಗುವ ಸ್ವಾರ್ಥ ಇವೆಲ್ಲವುಗಳನ್ನು ಬಿಟ್ಟು ಸಮಾನತೆ, ಪ್ರೀತಿಯನ್ನು, ಶಾಂತತೆಯನ್ನು, ಪ್ರೋತ್ಸಾಹವನ್ನು, ಸ್ನೇಹವನ್ನು ಮೆಚ್ಚಿ ಮಾತನಾಡುವುದನ್ನು, ಸ್ವಾಭಿಮಾನವನ್ನು, ಬಾಗುವುದನ್ನು, ಸಾರ್ಥಕತೆಯನ್ನು, ನೈಜ ತೃಪ್ತಿಯನ್ನು, ಒಳ್ಳೆಯ ಆದರ್ಶಗಳನ್ನು ಈ ರೀತಿಯ ವಿಷಯಗಳನ್ನು ನಾವು ಅಳವಡಿಸಿಕೊಳ್ಳಬೇಕು ಎಂದು ತುಂಬಾ ಮನ ಮುಟ್ಟುವಂತೆ ವಿವರಿಸಿದ್ದಾರೆ.
ಹಾಗೆ ಸಾಧನೆಗೆ ದಾರಿದೀಪ ಎಂಬ ಕವನದಲ್ಲಿ ನಮ್ಮ ಪ್ರಾಮಾಣಿಕ ಪ್ರಯತ್ನ ಮಾಡಿದರೆ ಆ ಪರಿಶ್ರಮಕ್ಕೆ ಸಾಧನೆ ದೊರೆಯುತ್ತದೆ ಎಂದು ನಮ್ಮ ಸತತ ಪ್ರಯತ್ನದ ಮುಖಾಂತರ ಛಲದ ಉತ್ತುಂಗ ಹೋರಾಟ ಮಾಡುವ ಮುಖಾಂತರ ನಾವು ಕಂಡಿರುವ ಕನಸನ್ನು ನನಸಾಗಿಸುವುದರಲ್ಲಿ ಗೆಲ್ಲಬಹುದು ಎಂದು ನಮ್ಮ ಸಾಧನೆ ಊರಲ್ಲಿ ಕಟೌಟ್ ಆಗಿ ನಿಲ್ಲಬೇಕು ಮತ್ತು ನಮ್ಮ ಬಗ್ಗೆ ಒಂದು ಪುಸ್ತಕ ಬರೆಯುವಂತಾಗಬೇಕು ಎಂದು ಸಾಧಕರ ಸಾಲಲ್ಲಿ ನಿಂತು ಹಲವಾರು ವೇದಿಕೆಗಳು ನಮಗೆ ದೊರೆಯಬೇಕು ಅಲ್ಲಿ ನಮ್ಮನ್ನು ಗುರುತಿಸಬೇಕು ನಮ್ಮ ಸಾಧನೆ ಎಲ್ಲರಿಗೂ ಕಾಣಬೇಕು ಎಂದು ಸಾಧನೆಯ ಬಗ್ಗೆ ಮೂಡಿಬಂದಿರುವ ಕವನ ತುಂಬಾ ಸೊಗಸಾಗಿದೆ. ನಾಡು ಕರುನಾಡು ಈ ಕವನದಲ್ಲಿ ಅಂದರೆ ನಮ್ಮ ಕನ್ನಡ ನಾಡು ನುಡಿಯ ಬಗ್ಗೆ ಇಲ್ಲಿ ಇರುವಂತಹ ಸಂಸ್ಕೃತಿಯ ಬಗ್ಗೆ ಭಾಷೆಯ ಬಗ್ಗೆ ಕನ್ನಡವೆಂದರೆ ಅದು ಬರೀ ಅಕ್ಷರವಲ್ಲ, ಅದು ಅಮೃತ ಮಾಣಿಕ್ಯ, ಅದು ಬರಹವಲ್ಲ ಅದು ಭಾಗ್ಯ, ಅದು ಪದವಲ್ಲ ಪಂಚಾಮೃತ ಎಂದು ಈ ತಾಯಿ ಭುವನೇಶ್ವರಿಯ ಮಡಿಲಲ್ಲಿ ಹುಟ್ಟಿದ ನಾವೇ ಪುಣ್ಯವಂತರು ಎಂದು ತುಂಬಾ ಸೊಗಸಾಗಿ ವಿವರಿಸಿದ್ದಾರೆ. ಬದುಕಿನ ಅರ್ಥ ನಾನಾರ್ಥ ಎಂಬ ಕವನದಲ್ಲಿ ಬದುಕು ಎಂದರೆ ಏನು ಎಂದು ಶಿಕ್ಷಕ, ವಿದ್ಯಾರ್ಥಿ, ಕಲಾವಿದ, ಶ್ರಮಿಕ, ಅನಾಥ ಹೀಗೆ ಅನೇಕರ ದೃಷ್ಟಿಯಲ್ಲಿ ಬದುಕು ಎಂದರೆ ಏನು ಎಂಬುದನ್ನು ತುಂಬ ಸೊಗಸಾಗಿ ವಿವರಿಸಿದ್ದಾರೆ. ಹೀಗೆ ಈ ಒಂದು ಪುಸ್ತಕದ ಹೆಸರು ಸನ್ಮಾರ್ಗದ ದುಂಬಿ ಈ ಒಂದು ಕವನದಲ್ಲಿ ನಾವು ಮಾಡಿರುವ ಸಾಧನೆ ಅಥವಾ ನಾವು ಮಾಡಬೇಕಾಗಿರುವ ಸಾಧನೆ ಹೇಗಿರಬೇಕು ಅದು ಹೇಗೆ ಸ್ಫೂರ್ತಿ ಆಗಬೇಕು ನಮ್ಮ ಪ್ರಯತ್ನ ಹೇಗಿರಬೇಕು ನಾವು ಇಟ್ಟುಕೊಳ್ಳುವ ಗುರಿ ಹೇಗಿರಬೇಕು ಯಶಸ್ವಿ ವ್ಯಕ್ತಿಗಳಾಗಿ ಹೇಗೆ ಜೀವನದಲ್ಲಿ ಬೆಳೆಯಬೇಕು ಯುವ ಪೀಳಿಗೆಗೆ ನಮ್ಮ ಜೀವನ ಹೇಗೆ ಮಾದರಿಯಾಗಬೇಕು ಎಲ್ಲರಿಗೂ ನಾವು ಸನ್ಮಾರ್ಗದ ದುಂಬಿ ಹೇಗೆ ಆಗಬೇಕು ಎಂಬುದನ್ನು ಅಚ್ಚುಕಟ್ಟಾಗಿ ಈ ಒಂದು ಕವನದಲ್ಲಿ ವಿವರಿಸಿದ್ದಾರೆ. ನೋವಿನಲ್ಲಿಯೂ ನಲಿವಿದೆ ಪ್ರಯತ್ನಿಸಿ ಎಂಬ ಕವನದಲ್ಲಿ ಮನುಷ್ಯರಾದ ನಾವು ಕಣ್ಣಿಲ್ಲ, ಕಾಲಿಲ್ಲ, ಕೈಕಾಲುಗಳಿಲ್ಲ, ದೇಹದ ಕೆಲವು ಭಾಗಗಳು ಸರಿ ಇಲ್ಲ, ಮೂಕ ಇದೀನಿ, ಬಡತನ ಇದೆ ಎಂದು ಈ ರೀತಿಯ ಕಾರಣಗಳನ್ನು ಇಟ್ಟುಕೊಂಡು ಸೋಮಾರಿಗಳು ಆಗದೇ ನಾವು ಕೂಡ ಏನಾದರೂ ಸಾಧನೆ ಮಾಡಬಹುದು ವಿಶೇಷವಾಗಿ ಗುರುತಿಸಿ ಕೊಳ್ಳಬಹುದು ನಮ್ಮಲ್ಲಿಯೂ ಕೂಡ ಕಲೆ ಇದೆ ಅದನ್ನು ವ್ಯಕ್ತಪಡಿಸಿ ವಿಶೇಷರಾಗಿ ಗುರುತಿಸಿ ಕೊಳ್ಳಬಹುದು ಎಂದು ತುಂಬಾ ಸೊಗಸಾಗಿ ವಿವರಿಸಿದ್ದಾರೆ. ಹಾಗೆ ಗುರು ಶಿಷ್ಯರ ಬಾಂಧವ್ಯದ ಈ ಕವನದಲ್ಲಿ ಗುರು ಕಥೆ ಆದರೆ ಅವರ ಶಿಷ್ಯ ದಂತಕಥೆ ಯಾಗಬೇಕು, ಗುರು ಶಿಕ್ಷಕನಾದರೆ ಆತನ ಶಿಷ್ಯ ಮುಖ್ಯ ಶಿಕ್ಷಕನಾಗಬೇಕು, ಗುರು ಅಕ್ಷರವಾದರೆ ಶಿಷ್ಯ ಶಬ್ದವಾಗಬೇಕು, ಪ್ರತಿ ಗುರುವಿನ ಆಶಯ ತನ್ನ ಶಿಷ್ಯ ತನ್ನನ್ನು ಮೀರಿಸುವ ಹಂತಕ್ಕೆ ಬೆಳೆಯಬೇಕೆಂಬುದು ಗುರುವಿನ ಕನಸು ಎಂದು ಮನಮುಟ್ಟುವಂತೆ ತಿಳಿಸಿದ್ದಾರೆ. ದೇವರಿದ್ದಾನೆ ಒಮ್ಮೆ ಯೋಚಿಸಿ ಎಂಬ ಕವನದಲ್ಲಿ ನಾವು ಮಾಡುವ ಪ್ರತಿಯೊಂದು ಕಾಯಕವಾಗಿರಬಹುದು ಅಥವಾ ನಾವು ಮಾಡುವ ಸಹಾಯ ವಾಗಿರಬಹುದು ಹೀಗೆ ನಾವು ಮಾಡುವ ಪ್ರತಿಯೊಂದರಲಿ ದೇವರಿದ್ದಾನೆ, ದೇವರ ಆಶೀರ್ವಾದ ಇದೆ ಎಂದು ತುಂಬಾ ಸೊಗಸಾಗಿ ವಿವರಿಸಿದ್ದಾರೆ. ಹಾಗೆ ಸಹಾಯದ ಬಗ್ಗೆ ಅರಿತು ಬದುಕು ಮರೆತು ಬದುಕಬೇಡ ಬಗ್ಗೆ, ಆಗುವುದಾದರೆ ಈ ರೀತಿ ಆಗಬೇಕು ಎನ್ನುವುದರ ಬಗ್ಗೆ, ನೀತಿ ನಿಯಮವಿಲ್ಲದ ಬಗ್ಗೆ, ಅಮೂಲ್ಯವಾದ ಸಂಪತ್ತು ವಿದ್ಯಾ ಸಂಪತ್ತು ಎಂಬುದರ ಬಗ್ಗೆ, ಕೆಲವೊಮ್ಮೆ ಹೀಗಾಗು ಎಂಬುದರ ಬಗ್ಗೆ, ನಮ್ಮ ಮಾತುಗಳು ಮುತ್ತಿನಂತಿರಲಿ ಎಂಬುದರ ಬಗ್ಗೆ, ನಾವು ಯಾರಿಗೆ ಧನ್ಯವಾದಗಳು ಹೇಳಬೇಕು ಎಂಬುದರ ಬಗ್ಗೆ, ಬದಲಾವಣೆಯ ಬದುಕು ಕೈ ಬೆರಳುಗಳಲ್ಲಿದೆ ಎಂಬುದರ ಬಗ್ಗೆ, ಪ್ರಸ್ತುತ ದಿನಮಾನಗಳಲ್ಲಿ ಮೊಬೈಲ್ ನಾ, ಪುಸ್ತಕ ನಾ ಎಂಬುದರ ಬಗ್ಗೆ, ಸಾಯುವ ಮುನ್ನ ಹೇಗೆ ಸಾಧನೆ ಮಾಡಬೇಕು ಎಂಬುದರ ಬಗ್ಗೆ, ನಮ್ಮ ಶತ್ರು ಕೂಡ ನಮ್ಮ ಸಾಧನೆ ಕಂಡು ಖುಷಿ ಪಡಬೇಕು ಬಡತನದಲ್ಲಿ ಸೋತು ಬಾಗದಂತೆ ಇರದೆ ಸಿರಿತನ ಬಂದರು ಬೀಗದೆ ಬದುಕುವಂತಿರ ಬೇಕು ಎಂದು, ನಮ್ಮ ಜೀವನ ಹೇಗಿರಬೇಕು ಅಂದರೆ ನಾವು ಹುಟ್ಟಿದರೆ ನಮ್ಮ ತಾಯಿ ಖುಷಿಪಡಬೇಕು ನಮ್ಮ ತಂದೆ ಆನಂದಿಸುವಂತಿರ ಬೇಕು ಹುಟ್ಟಿದ್ದು ಸಾಯೋದಕ್ಕಲ್ಲ ಸಾಧನೆ ಮಾಡಿ ಚರಿತ್ರೆ ಸೃಷ್ಟಿ ಮಾಡುವಂತಾಗಬೇಕು ಸಾವಿನ ದಿನ ಇತಿಹಾಸದ ಪುಟದಲ್ಲಿ ಹೆಸರು ಅಜರಾಮರವಾಗಿ ಉಳಿಯಬೇಕು ನಮ್ಮ ಜೀವನ ಒಟ್ಟಿನಲ್ಲಿ ಹೇಗಿರಬೇಕೆಂದರೆ ಬರೆದಿಡುವಂತಹ ಜೀವನ ನಮ್ಮದಾಗಬೇಕು ಎಂದು ತುಂಬಾ ಮನಮುಟ್ಟುವಂತೆ ಪದಗಳನ್ನು ಜೋಡಿಸಿ ವಿವರಿಸಿದ ಈ ಒಂದು ಕವನ ಮಹತ್ವದಾಗಿದೆ.
ಸನ್ಮಾರ್ಗದ ದುಂಬಿ ಈ ಒಂದು ಕವನ ಸಂಕಲನವು ವಿದ್ಯಾರ್ಥಿಗಳು ಭವಿಷ್ಯದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಿ ಹೇಗೆ ಸಾಧನೆ ಮಾಡಬೇಕು ಹಾಗೂ ಕಲಿಯುವ ಸಮಯದಲ್ಲಿ ಗುರುಗಳಿಗೆ ಹೇಗೆ ಗೌರವ ನೀಡಬೇಕು ಹಾಗೂ ತಂದೆ ತಾಯಿಗಳ ಬಗ್ಗೆ, ಮಕ್ಕಳ ಬೆಳವಣಿಗೆಯಲ್ಲಿ ತಂದೆ ತಾಯಿ ಪಡುತ್ತಿರುವ ಕಷ್ಟ ಅದರ ಜೊತೆಗೆ ಹೆತ್ತವರಿಗೆ ಗೌರವ ನೀಡುವ ಬಗ್ಗೆ, ಸರ್ಕಾರಿ ಶಾಲೆಗಳ ಬಗ್ಗೆ, ಬದುಕಿನಲ್ಲಿ ಅನೇಕ ಪ್ರಯತ್ನಗಳನ್ನು ಮಾಡಿದರು ಫಲ ದೊರೆಯದೇ ಕುಗ್ಗಿ ಹೋದಾಗ ಮತ್ತೆ ಪ್ರಯತ್ನ ಪಟ್ಟರೆ ಫಲ ದೊರೆಯುತ್ತೆ ಎನ್ನುವ ಸ್ಪೂರ್ತಿದಾಯಕ ಕವನಗಳು, ನಮ್ಮನ್ನು ಕಂಡು ಹಿಯಾಳಿಸಿದವರೇ ನಮ್ಮನ್ನು ಸನ್ಮಾನಿಸುವಂತಾಗ ಬೇಕು ಎಂಬ ಸ್ಪೂರ್ತಿಯಾಗಿರುವ ಕವನಗಳು ಈ ಒಂದು ಸಂಕಲನದಲ್ಲಿ ಒಳಗೊಂಡಿದೆ. ಈ ಪುಸ್ತಕದಲ್ಲಿರುವ ಪ್ರತೀ ಕವನಗಳು ಕೂಡ ಬಹಳ ಸ್ಪೂರ್ತಿದಾಯಕವಾಗಿ ಮನಮುಟ್ಟುವ ಹಾಗೆ ಜೀವನದಲ್ಲಿ ಏನಾದರೂ ಸಾಧಿಸಬೇಕೆಂಬ ಹಂಬಲ ಮೂಡುವಂತಹ ಕವನಗಳು ಇವಾಗಿವೆ. ವಿದ್ಯಾರ್ಥಿಗಳು ಚಾಚು ತಪ್ಪದೇ ಓದಬೇಕಾಗಿರುವ ಕವನಗಳು ಇಲ್ಲಿ ಪ್ರಕಟವಾಗಿವೆ. ಪ್ರತಿ ಅಕ್ಷರ ಪ್ರತಿ ವಾಕ್ಯವೂ ಕೂಡ ಮನ ಮುಟ್ಟುವ ಹಾಗೆ ಕವಿತೆಗಳು ಮೂಡಿಬಂದಿವೆ. ಸಾಧನೆ ಮಾಡಲು ಸ್ಪೂರ್ತಿ ತುಂಬವ ಧೈರ್ಯ ತುಂಬುವ ಆತ್ಮಸ್ಥೈರ್ಯವನ್ನು ಹೆಚ್ಚು ಗೊಳಿಸುವ ಆತ್ಮ ವಿಶ್ವಾಸವನ್ನು ಗಟ್ಟಿ ಗೊಳಿಸುವ ದಿಟ್ಟತನದ ಕವನಗಳು ಇವಾಗಿವೆ. ಹೀಗೆ ಇವರ ಪ್ರತಿಯೊಂದು ಕವನಗಳನ್ನು ವಿವರಣೆ ಮಾಡುತ್ತಾ ಹೋದರೆ ಲೇಖನದ ಒಂದು ಪುಸ್ತಕವೂ ಕೂಡ ಆಗುತ್ತದೆ ಆ ರೀತಿಯ ಒಳ್ಳೆಯ ಒಳ್ಳೆಯ ವಿಷಯಗಳು ಈ ಒಂದು ಕವನ ಸಂಕಲನ ಒಳಗೊಂಡಿದೆ. ಈ ಒಂದು ಕವನ ಸಂಕಲನವನ್ನು ತಾವು ಕಲಿತಿರುವ ಶ್ರೀ ಸಿದ್ಧಗಂಗಾ ಮಠದಲ್ಲಿ ಬಿಡುಗಡೆಗೊಳಿಸಿದ್ದಾರೆ ಪರಮ ಪೂಜ್ಯ ಶ್ರೀ ಶಿವಕುಮಾರ ಸ್ವಾಮೀಜಿಗಳ ಆಶೀರ್ವಾದ ಸದಾ ಇವರಿಗೆ ಇರಲಿ ಇನ್ನೂ ಹೆಚ್ಚು ಹೆಚ್ಚು ಪುಸ್ತಕಗಳು ಇವರಿಂದ ಹೊರ ಬರಲೇ ಎಂದು ಪ್ರಾರ್ಥಿಸುತ್ತಾ ಅಭಿನಂದನೆಗಳು ಸರ್. ನಮ್ಮ ಕನ್ನಡ ಸಾಹಿತ್ಯದಲ್ಲಿ ಅನೇಕ ಕವಿಗಳು ಬಂದು ಹೋಗಿದ್ದಾರೆ ಅವರ ಛಾಪನ್ನು ಮೂಡಿಸಿದ್ದಾರೆ. ನಮಗೆ ಸಾಹಿತ್ಯದ ಸವಿಯನ್ನು ಹಂಚಿದ್ದಾರೆ ಇಂತಹ ಮಹಾನ್ ಮೇರು ಕವಿಗಳ ಸಾಲಿನಲ್ಲಿ ಇವರು ಕೂಡ ತಮ್ಮ ಸಾಹಿತ್ಯದ ಗುರುತನ್ನು ಪಸರಿಸಲಿ ಕನ್ನಡವನ್ನು ಬದುಕಿನೊಂದಿಗೆ ಆರಾಧಿಸಿಕೊಂಡು ಕನ್ನಡ ಸಾಹಿತ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಮಾಡುವ ಕೆಲಸ ಮಹತ್ವದಾಗಿದೆ ಸಾಹಿತ್ಯದ ಅಪಾರ ಒಲವು ಹೊಂದಿರುವವರು ಇಷ್ಟೆಲ್ಲ ಹೇಳಿದ ಕಾರಣವೆಂದರೆ ಇಂತಹ ಮನಸ್ಥಿತಿಯ ವ್ಯಕ್ತಿ ಕವಿತೆ ಬರೆದರೆ ಅದು ಸಮಾಜದ ಆಸ್ತಿಯಾಗಲೇ ಬೇಕು.

ಕು. ಜ್ಯೋತಿ ಆನಂದ ಚಂದುಕರ
ಬಾಗಲಕೋಟ/9980180487

