ಶಾಖೋತ್ಪನ್ನ ವಿದ್ಯುತ್ ಕೇಂದ್ರದ ಆಡಳಿತ ಕಛೇರಿಯಲ್ಲಿ 77 ನೇ. – ಗಣರಾಜ್ಯೋತ್ಸವ ಆಚರಣೆ.
ರಾಯಚೂರು ಜ.26

ಇಂದು ಶಕ್ತಿ ನಗರದ ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರದ ಆಡಳಿತ ಕಚೇರಿಯಲ್ಲಿ 77 ನೇ. ಗಣರಾಜ್ಯೋತ್ಸವವನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಯಿತು. ಮಾನ್ಯ ಶ್ರೀ ರಮೇಶ್ ಹೆಚ್ ಆರ್ ಕಾರ್ಯನಿರ್ವಾಹಕ ನಿರ್ದೇಶಕರು-ಆರ್.ಟಿ.ಪಿ.ಎಸ್ ರವರು ಧ್ವಜಾರೋಹಣ ನೆರವೇರಿಸಿ, ಭಾಷಣದಲ್ಲಿ ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವ ಸಂಕಲ್ಪ ಮಾಡುವ ಮೂಲಕ ದೇಶ ಅಭಿವೃದ್ಧಿಯಲ್ಲಿ 4 ನೇ. ಸ್ಥಾನದಲ್ಲಿ ಇದ್ದು, ಮುಂದೆ ಅಭಿವೃದ್ಧಿ ಹೊಂದಿದ ದೇಶವಾಗಿ ಮಾಡಲು ಶ್ರಮವಹಿಸಿ ನಿಗಮದ ವಿದ್ಯುತ್ ಉತ್ಪಾದನೆಯನ್ನು 3000 ದಿಂದ 9000 ಮೆ. ವ್ಯಾ. ರವರಿಗೆ ಉತ್ಪಾದನೆ ಮಾಡಲಾಗುತ್ತಿದೆ ಎಂದು ಇನ್ನು ಮುಂದೆ ನಾವುಗಳೆಲ್ಲರೂ ಸೇರಿ ಸೌರ, ಪವನ, ಅನಿಲ ಮುಂತಾದ ವಿವಿಧ ಸಂಪನ್ಮೂಲಗಳ ಮೂಲಕ ವಿದ್ಯುತ್ ಉತ್ಪಾದನೆ ಮಾಡಲು ಶ್ರಮ ವಹಿಸಲು ತಿಳಿಸಿದರು. ಧ್ವಜಾರೋಹಣದಲ್ಲಿ ಭಾಗವಹಿಸಿದ ಎಲ್ಲಾ ಹಿರಿಯ ಅಧಿಕಾರಿಗಳಿಗೂ, ಎಲ್ಲಾ ಸಂಘದ ಪದಾಧಿಕಾರಿಗಳಿಗೂ ಮತ್ತು ಉದ್ಯೋಗಿಗಳಿಗೂ ಧನ್ಯವಾದಗಳು. 🇮🇳✊💐💐 ಮತ್ತೊಮ್ಮೆ ಎಲ್ಲರಿಗೂ 77 ನೇ. ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು 💐🙏🏻🙏🏻💐

