77 ನೇ. ಗಣರಾಜ್ಯೋತ್ಸವ ಅತ್ಯಂತ ವೈಶಿಷ್ಟ – ಪೂರ್ಣವಾಗಿ ಆಚರಿಸಲಾಯಿತು.
ಯಲಗೋಡ ಜ.26

ದೇವರ ಹಿಪ್ಪರಗಿ ತಾಲೂಕಿನ ಯಲಗೋಡ ಗ್ರಾಮದಲ್ಲಿ 77 ನೇಯ ಗಣರಾಜ್ಯೋತ್ಸವವನ್ನು ಅತ್ಯಂತ ಅರ್ಥ ಪೂರ್ಣವಾಗಿ ಆಚರಣೆ ಮಾಡಲಾಯಿತು.

ಗ್ರಾಮ ಪಂಚಾಯತಿ ಅಧ್ಯಕ್ಷರಾದ ರೂಪಾ ಚಂದ್ರಶೇಖರ ಆಸ್ಕಿ ಧ್ವಜಾರೋಹಣ ಮಾಡಿದರು, ವಿವಿಧೋದ್ದೇಶ ಕೃಷಿ ಪತ್ತಿನ ಸಹಕಾರಿ ಬ್ಯಾಂಕುನ ಅಧ್ಯಕ್ಷರು ಹಾಗೂ ದೇವರ ಹಿಪ್ಪರಗಿ ತಾಲ್ಲೂಕು ಜೆಡಿಎಸ್ ಅಧ್ಯಕ್ಷರಾದ ಸಾಯಬಣ್ಣ ಬಾಗೇವಾಡಿ ಯವರು ಧ್ವಜಾರೋಹಣ ಮಾಡಿದರು.

ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಯಲ್ಲಿ ಶಾಲೆ ಯ ಮುಖ್ಯಗುರುಗಳಾದ ಮಲ್ಲಿಕಾರ್ಜುನ ದೊಡ್ಡಮನಿ ಯವರು ಧ್ವಜಾರೋಹಣ ಮಾಡಿದರು, ವೆಂಕಟೇಶ್ವರ ಪ್ರೌಢ ಶಾಲೆಯಲ್ಲಿ ಮಡಿವಾಳೇಶ್ವರ ದೇವಸ್ಥಾನದ ಪೀಠದಿಪತಿಗಳಾದ ಶ್ರೀ ನಿಂಗಯ್ಯ ಮಹಾಸ್ವಾಮಿಗಳು ಧ್ವಜಾರೋಹಣವನ್ನು ನೆರವೇರಿಸಿದರು.
ಈ 77 ನೇಯ ಗಣರಾಜ್ಯೋತ್ಸವ ಕಾರ್ಯಕ್ರಮ ದಲ್ಲಿ ಪಂಚಾಯತಿಯ ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರು, ಶಾಲೆಯ ಎಲ್ಲಾ ಶಿಕ್ಷಕರು ಹಾಗೂ ಮಕ್ಕಳು ಹಾಗೂ ಪಿಕೆಪಿಎಸ್ ನ ಎಲ್ಲಾ ಸಿಬ್ಬಂದಿ ವರ್ಗದವರು ಗ್ರಾಮದ ಎಲ್ಲಾ ಜಾತಿಯ ಮುಖಂಡರು ಮತ್ತು ಅಂಗನವಾಡಿ ಕಾರ್ಯಕರ್ತರು ಹಾಗೂ ಮಹಿಳೆಯರು, ಮಕ್ಕಳು ಹಾಗೂ ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಭೀಮಪ್ಪ ಹಚ್ಯಾಳ ದೇವರ ಹಿಪ್ಪರಗಿ

