ಸರ್ವರಿಗೂ ಸಮಾನತೆ ನೀಡಿದೆ ಸಂವಿಧಾನ – ವಿಶ್ವಜಿತ್ ಮೆಹ್ತಾ.

ತರೀಕೆರೆ ಜ.26

ಸ್ವತಂತ್ರ ಭಾರತ ವಿವಿಧ ಭಾಷೆ ಧರ್ಮಗಳನ್ನು ಹೊಂದಿದೆ, ಸರ್ವಜಾತಿ ಸಮುದಾಯಗಳಿಗೆ ಸರ್ವರಿಗೂ ಸಮಾನತೆ ನೀಡಿದೆ ಸಂವಿಧಾನ ಎಂದು ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿ ಅಧ್ಯಕ್ಷರಾದ ತಹಶೀಲ್ದಾರ್ ವಿಶ್ವಜಿತ್ ಮೆಹ್ತಾ ಹೇಳಿದರು.

ಅವರು ಇಂದು ಪಟ್ಟಣದ ಬಯಲು ರಂಗ ಮಂದಿರದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಪುರಸಭೆ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ 77 ನೇ. ಗಣರಾಜ್ಯೋತ್ಸವ ದಿನಾಚರಣೆಯ ಪ್ರಯುಕ್ತ ಧ್ವಜಾರೋಹಣ ನೆರವೇರಿಸಿ ಗಣರಾಜ್ಯೋತ್ಸವದ ಸಂದೇಶ ನೀಡಿ, ಮಾತನಾಡಿದರು. ಸಂವಿಧಾನದಿಂದಲೇ ಶಾಸಕಾಂಗ ಕಾರ್ಯಾಂಗ ನ್ಯಾಯಾಂಗಗಳು ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದರು.

ಹಾಗೂ ಅಂಬೇಡ್ಕರ್ ಮತ್ತು ಗಾಂಧಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಮಾಡಲಾಯಿತು. ಪುರಸಭಾ ಅಧ್ಯಕ್ಷರಾದ ವಸಂತ್ ಕುಮಾರ್ ಕವಾಲಿ ಮಾತನಾಡಿ ಬಾಬಾ ಸಾಹೇಬ್ ಡಾ, ಬಿ.ಆರ್ ಅಂಬೇಡ್ಕರ್ ಅವರು ಈ ದೇಶಕ್ಕೆ ಸುಭದ್ರವಾದ ಸಂವಿಧಾನ ರಚಿಸಿದ್ದಾರೆ. ನಮ್ಮ ಈ ದೇಶವು ಜನವರಿ 26 ರಂದು ಅಂಬೇಡ್ಕರ್ ನೀಡಿದ ಸಂವಿಧಾನವನ್ನು ಜಾರಿಗೆ ತಂದಿದೆ ಎಂದು ಹೇಳಿದರು.

ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಅನಂತಪ್ಪ ಮಾತನಾಡಿ ಯುರೋಪಿನಿಂದ ಆಂಗ್ಲರು ವ್ಯಾಪಾರಕ್ಕೆ ನಮ್ಮ ದೇಶಕ್ಕೆ ಬಂದು, ದೇಶದ ಅಧಿಕಾರದ ಚುಕ್ಕಾಣಿ ಹಿಡಿದರು ಸ್ವತಂತ್ರ ಚಳುವಳಿಯಲ್ಲಿ ಸಾವಿರಾರು ಜನ ಪ್ರಾಣ ತ್ಯಾಗ ಮಾಡಿದ್ದಾರೆ, ಭಾರತದಲ್ಲಿ ಅತಿ ಹೆಚ್ಚು ವ್ಯಾಸಂಗ ಮಾಡಿದ 32 ಪದವಿಗಳನ್ನು ಪಡೆದವರು ಡಾ. ಬಿ ಆರ್ ಅಂಬೇಡ್ಕರ್ ಅವರು ವಿಶ್ವದಲ್ಲಿಯೇ ಪ್ರಖ್ಯಾತವಾದ ಸಂವಿಧಾನವನ್ನು ನೀಡಿದ್ದಾರೆ ಎಂದು ಹೇಳಿದರು.

ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪೊಲೀಸ್ ಉಪ ಅಧೀಕ್ಷಕರಾದ ಪರಶುರಾಮಪ್ಪ, ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಡಾ, ದೇವೇಂದ್ರಪ್ಪ, ವಲಯ ಅರಣ್ಯ ಅಧಿಕಾರಿಯದ ಉಮ್ಮರ್ ಪಾಷಾ, ಪುರಸಭಾ ಮುಖ್ಯ ಅಧಿಕಾರಿ ರಂಜಾನ್, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್ ಎ ಪರಶುರಾಮಪ್ಪ ಉಪಸಿತರಿದ್ದು, ಇದೇ ಸಂದರ್ಭದಲ್ಲಿ ಸಾಧಕರಿಗೆ ಸನ್ಮಾನ ಮಾಡಲಾಯಿತು. ಬಿ.ಆರ್.ಸಿ ಮಂಜುನಾಥ್ ಸ್ವಾಗತಿಸಿ, ಕವಿತಾ ನಿರೂಪಿಸಿ, ಚೇತನ್ ವಂದಿಸಿದರು.

ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಚಾನಲ್:ಎನ್. ವೆಂಕಟೇಶ್.ತರೀಕೆರೆ ಚಿಕ್ಕಮಗಳೂರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button