🚨 BREAKING NEWS, ಸಾಸ್ತಾನ ಟೋಲ್ ಪ್ಲಾಜಾದಲ್ಲಿ ‘ಸಂಸ್ಕಾರ ಹೀನ’ ಸಿಬ್ಬಂದಿಗಳ ಅಟ್ಟಹಾಸ..! 🚨ಸೈನಿಕನ ರಕ್ತಕ್ಕೆ ಇಲ್ಲಿ ಕಿಮ್ಮತ್ತಿಲ್ಲವೇ? ದೇಶ ಕಾಯುವ ಯೋಧನನ್ನೇ ರೋಡಲ್ಲಿ ನಿಲ್ಲಿಸಿದ ‘ಟೋಲ್ ಹೈನಾನಿ’ಗಳು..!
ಉಡುಪಿ ಜ.26

ದೇಶದ ಗಡಿ ಕಾಯಲು ಹೋಗಿ ಶತ್ರುಗಳ ಗುಂಡಿಗೆ ಎದೆಯೊಡ್ಡಿ, ತನ್ನ ಅಂಗಾಂಗವನ್ನೇ ದೇಶಕ್ಕಾಗಿ ಬಲಿಕೊಟ್ಟ ಒಬ್ಬ ವೀರ ಯೋಧನಿಗೆ ಸಲ್ಲಬೇಕಾದ ಗೌರವ ಇದೇನಾ? ಸಾಸ್ತಾನ ಟೋಲ್ ಪ್ಲಾಜಾ ಎಂಬ ಹೆಸರಿನಲ್ಲಿ ನಡೆಯುತ್ತಿರುವ ಈ ಲೂಟಿ ಕೇಂದ್ರದಲ್ಲಿ ಗಣರಾಜ್ಯೋತ್ಸವದಂದೇ ಜಿಲ್ಲೆಯ ಮರ್ಯಾದೆಯನ್ನು ಹರಾಜು ಹಾಕಲಾಗಿದೆ. ಅಲ್ಲಿನ ಸಿಬ್ಬಂದಿಗಳ ಉದ್ಧಟತನ ಮತ್ತು ಕೀಳುಮಟ್ಟದ ನಡವಳಿಕೆಯಿಂದಾಗಿ ಇಂದು ಇಡೀ ಜಿಲ್ಲೆ ತಲೆತಗ್ಗಿಸುವಂತಾಗಿದೆ.
📍 ಏನಿದು ನಾಚಿಕೆಗೇಡಿನ ಸಂಗತಿ..?
ಗಣರಾಜ್ಯೋತ್ಸವದ ಸಂಭ್ರಮದ ಹೊತ್ತಲ್ಲೇ, ದೇಶಕ್ಕಾಗಿ ಹೋರಾಡಿ ಅಂಗವೈಕಲ್ಯ ಅನುಭವಿಸಿರುವ ಆರ್ಮಿ ಕಮಾಂಡರ್ ಒಬ್ಬರು ಈ ದಾರಿಯಾಗಿ ಬಂದಾಗ, ಅವರಿಗೆ ಗೌರವದಿಂದ ಹಾದಿ ಬಿಡುವುದನ್ನು ಬಿಟ್ಟು, ಟೋಲ್ ಫ್ರೀ ದಾಖಲೆಗಳಿದ್ದರೂ ಕೂಡ ಸಿಬ್ಬಂದಿಗಳು ಅವರನ್ನು ಭಿಕ್ಷುಕರಂತೆ ನಡೆಸಿ ಕೊಂಡಿದ್ದಾರೆ. ಟೋಲ್ ಕಲೆಕ್ಟ್ ಮಾಡುವ ಈ ‘ಕೂಲಿಗಳ’ ದರ್ಪ ಹೇಗಿದೆಯೆಂದರೆ, ಕಾನೂನು ಬದ್ಧವಾಗಿ ದಾಖಲೆ ತೋರಿಸಿದರೂ ಲೂಟಿಯ ದಾಹಕ್ಕೆ ಯೋಧನನ್ನೂ ಬಿಡುತ್ತಿಲ್ಲ.
💥 ವರದಿಯ ಮುಖ್ಯಾಂಶಗಳು:,-
🛑ದೇಶದ ಸೈನಿಕನಿಗೆ ಅಗೌರವ:-
ಅಂಗಾಂಗ ಕಳೆದುಕೊಂಡ ಕಮಾಂಡರ್‌ಗೆ ಕನಿಷ್ಠ ಮಾನವೀಯತೆ ತೋರದ ಮೃಗ ಸದೃಶ ಸಿಬ್ಬಂದಿಗಳು.
🛑 ದಾಖಲೆಗಳಿದ್ದರೂ ದರ್ಪ:-
ಅಧಿಕೃತ ಕಾರ್ಡ್ ತೋರಿಸಿದರೂ “ದುಡ್ಡು ಕೊಡು ಇಲ್ಲದಿದ್ದರೆ ನಡಿ” ಎಂಬ ಕೀಳುಮಟ್ಟದ ಭಾಷಾ ಪ್ರಯೋಗ.
🛑 ಗಣರಾಜ್ಯೋತ್ಸವದಂದೇ ಅಟ್ಟಹಾಸ:-
ರಾಷ್ಟ್ರದ ಹಬ್ಬದ ದಿನವೇ ಒಬ್ಬ ದೇಶಭಕ್ತನ ಸ್ವಾಭಿಮಾನಕ್ಕೆ ಪೆಟ್ಟು ನೀಡಿದ ಲೂಟಿಕೋರರು.
🛑 ಜಿಲ್ಲೆಯ ಮರ್ಯಾದೆ ಹರಾಜು:-
ಸಾಸ್ತಾನ ಟೋಲ್‌ನ ಈ ಸರಣಿ ಕಿರುಕುಳಕ್ಕೆ ಅಂತಿಮ ಮೊಳೆ ಹೊಡೆಯುವವರು ಯಾರು?
🗣️ ನಮ್ಮ ತೀಕ್ಷ್ಣ ಪ್ರತಿಕ್ರಿಯೆ:-
“ಸಾರಿ ಸೋಲ್ಜರ್, ಇಲ್ಲಿ ಮಾನವೀಯತೆ ಸತ್ತುಹೋಗಿದೆ!” “ದೇಶ ಕಾಯುವ ಸೈನಿಕನಿಗೆ ರೋಡಲ್ಲಿ ಬೆಲೆ ಕೊಡದ ಇಂತಹ ಟೋಲ್ ಪ್ಲಾಜಾಗಳು ಈ ನಾಡಿನ ಕ್ಯಾನ್ಸರ್ ಇದ್ದಂತೆ. ಕೇವಲ ಹಣದ ಹಸಿವಿನಿಂದ ಕುರುಡಾಗಿರುವ ಇಂತಹ ಕಿರಾತಕ ಸಿಬ್ಬಂದಿಗಳಿಗೆ ತಕ್ಕ ಶಿಕ್ಷೆಯಾಗಲೇಬೇಕು. ಇವರ ಈ ಉದ್ಧಟತನಕ್ಕೆ ಅಂತ್ಯ ಹಾಡದಿದ್ದರೆ ಕರಾವಳಿಯ ಸ್ವಾಭಿಮಾನಕ್ಕೆ ದೊಡ್ಡ ಹೊಡೆತ ಬೀಳುವುದು ಖಚಿತ.”
🚩 ಈ ಲೂಟಿ ಕೇಂದ್ರದ ವಿರುದ್ಧ ಜಿಲ್ಲಾಡಳಿತ ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಸಾರ್ವಜನಿಕ ಆಕ್ರೋಶ ಸ್ಫೋಟ ಗೊಳ್ಳುವುದು ಗ್ಯಾರಂಟಿ!
ವರದಿ:ಆರತಿ.ಗಿಳಿಯಾರು.ಉಡುಪಿ

