“ಗಣರಾಜ್ಯೋತ್ಸವ ಪ್ರಜಾಪ್ರಭುತ್ವದ ದಿನವು”…..

ಜನೇವರಿ 26 ನೇ. ದಿನವು ರಾಷ್ಟ್ರ ಪ್ರೇಮ
ಹಬ್ಬದ ಹರುಷವು
ಪ್ರಜಾರಾಜರ ಸಮಾನತೆಯ ಆಡಳಿತ
ಹೆಮ್ಮೆಯ ದಿನವು
ಅವಶ್ಯಕತೆ ಇರುವಂಗೆ ನ್ಯಾಯ ನೀತಿ
ಧರ್ಮದ ಅನುಕುಲವು
ಸಂವಿಧಾನವೇ ಜೀವನಾಡಿಯಾಗಿಸಿದ
ಅರ್ಪಿಸಿ ಸಿದ್ಧತೆಯ ಬದ್ಧತೆಯು
ಸ್ವಾತಂತ್ರ್ಯದ ಹಕ್ಕು ದೊರಕಿಸಿದವರ
ನೆನವ ಸುದಿನವು
ಕರ್ತವ್ಯ ಜವಾಬ್ದಾರಿ ನಮ್ಮೆಲ್ಲರ ಬದ್ಧತೆಯು
ಸರಕಾರಿ ಶಾಲಾ ಗೃಹ ಇಲಾಖೆ ವಿವಿಧ ಸರಕಾರಿ
ಖಾಸಗಿ ಸಂಸ್ಥೆಗಳಲ್ಲಿ ಪ್ರಭಾತಪೇರಿ
ಆಗಸದೆತ್ತರದಲಿ ಧ್ವಜರೋಹಣವು
ಭಾರತ ಮಾತೆಯ ಸರ್ವ ಸೇವಾ ವೀರರಿಗೆ
ಗೌರವ ಸಮರ್ಪಣೆಯು
ಭಾರತ ಗಣರಾಜ್ಯೋತ್ಸವ ಸರ್ವ ಜನ ಗಣ
ಮನದ ಏಕತೆಯ ಸಂಭ್ರಮವು
ನಮ್ಮ ದೇಶ ನಮ್ಮ ಹೆಮ್ಮೆ ಭಾರತ ಮಹಾನವು
‘ಜೈ ಹಿಂದ್’ ‘ವಂದೇ ಮಾತರಂ’ ವಿಶ್ವದೆಲ್ಲೆಡೆ
ನಿರಂತರ ಜಯಘೋಷವು
ಶ್ರೀಸುರೇಶ ಶಂಕ್ರೆಪ್ಪ ಅಂಗಡಿ
(ದೇಶಂಸು) ದೇವರ ಹಿಪ್ಪರಗಿ

