ಒನಕೆ ಓಬವ್ವ ಉತ್ಸವಕ್ಕೆ ಶಿಷ್ಟಾಚಾರ ಉಲ್ಲಂಘನೆ ಆರೋಪ – ಎನ್.ಎಂ ನೂರ್ ಅಹಮದ್ ಆಕ್ಷೇಪ.

ಗುಡೇಕೋಟೆ ಜ.31

ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಗ್ರಾಮದ ಒನಕೆ ಓಬವ್ವ ಉತ್ಸವಕ್ಕೆ ಶಿಷ್ಟಾಚಾರ ಉಲ್ಲಂಘನೆ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯಲ್ಲಿ ಸ್ಥಳೀಯ ಮಾಜಿ ಸಚಿವರು, ಮಾಜಿ ಶಾಸಕರ ಹೆಸರು ಕೈಬಿಡಲಾಗಿದೆ‌. ಅಧಿಕಾರಿಗಳ ನಿರ್ಲಕ್ಷ್ಯ ದಿಂದ ಅದ್ದೂರಿ ಆಚರಣೆಯಲ್ಲಿ ಲೋಪ ದೋಷಗಳಾಗುತ್ತಿವೆ ಎಂದು ಕಾಂಗ್ರೆಸ್ ಮುಖಂಡ ಎನ್.ಎಂ ನೂರ್ ಅಹಮದ್ ಅವರು ಅಸಮಾಧಾನಕ್ಕೆ ಕಾರಣವಾಗಿದೆ ಎಂದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ಸರ್ಕಾರಿ ಕಾರ್ಯಕ್ರಮಗಳಲ್ಲಿ ಜನ ಪ್ರತಿನಿಧಿಗಳ ಹೆಸರುಗಳನ್ನು ಆಮಂತ್ರಣ ಪತ್ರಿಕೆಯಲ್ಲಿ ಪ್ರಕಟವಾದೆ ಶಿಷ್ಟಾಚಾರ ಉಲ್ಲಂಘನೆ ಸ್ಥಳೀಯ ಮಾಜಿ ಸಚಿವರು, ಮಾಜಿ ಶಾಸಕರ ಹೆಸರು, ಇತರೆ ಸಮುದಾಯದ ಜನ ಪ್ರತಿನಿಧಿಗಳನ್ನು ಕಡೆಗಣಿಸಿ ತಾರತಮ್ಯ ಮಾಡಲಾಗಿದೆ.

ಸರ್ಕಾರಿ ಶಿಷ್ಟಾಚಾರದ ಪ್ರಕಾರ ಸ್ಥಳೀಯ ಸಂಸದರು, ಶಾಸಕರು ಮತ್ತು ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರನ್ನು ಆಹ್ವಾನಿಸುವುದು ಕಡ್ಡಾಯವಾಗಿದ್ದರೂ, ಇದನ್ನು ಪಾಲಿಸಿಲ್ಲ. ನಮ್ಮ ಕ್ಷೇತ್ರದ ಒನಕೆ ಓಬವ್ವಳ ಉತ್ಸವ ನಮಗೆ ಹೆಮ್ಮೆ ಇದೆ. ನಾವು ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಖುಷಿಯಿದೆ. ಸ್ಥಳೀಯ ಹಿರಿಯ ಮಾಜಿ ಸಚಿವರಿಗೆ, ಮಾಜಿ ಶಾಸಕರಿಗೆ ಆಹ್ವಾನ ಪತ್ರಿಕೆ ಹಾಗೂ ವಿ.ಐ.ಪಿ ಪಾಸ್ ಕೊಟ್ಟರೆ ಬಗೆಹರಿಯುತ್ತಾ. ಈ ಘಟನೆಯು ಸ್ಥಳೀಯ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಅಧಿಕಾರಿಗಳು ಪಕ್ಷಪಾತದ ಧೋರಣೆ ಅನುಸರಿಸುತ್ತಿದ್ದಾರೆ ಎಂಬ ಅಸಮಾಧಾನ ಮೂಡಿಸಿದೆ ಎಂದರು.

ಈ ಸಂದರ್ಭದಲ್ಲಿ ಎಲ್.ಎಸ್ ಬಷೀರ್ ಅಹಮ್ಮದ್, ನಜೀರ್ ಸಾಬ್, ಒನಕೆ ಓಬವ್ವಳ ಸಂಘದ ರಾಜ್ಯ ಅಧ್ಯಕ್ಷ ಹಿರೇ ಕುಂಬಳಗುಂಟೆ ಉಮೇಶ್, ಮಾಜಿ ಪಟ್ಟಣ ಪಂಚಾಯತಿ ಸದಸ್ಯರಾದ ವೆಂಕಟೇಶ್, ಈಶಣ್ಣ, ಸಿರಿಬಿ ರಾಘವೇಂದ್ರ, ಮಲ್ಲಾಪುರ ರಾಘವೇಂದ್ರ, ಮಂಜು ಮಯೂರ್ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಇದ್ದರು ಎಂದು ವರದಿಯಾಗಿದೆ.

ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್ ವೀರೇಶ್ ಕೆ ಹೊಸಹಳ್ಳಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button