ಸ್ವಾಮಿ ತ್ರಿಗುಣಾತೀತಾನಂದರ ಜಯಂತ್ಯುತ್ಸವದ – ಪ್ರಯುಕ್ತ ವಿಶೇಷ ಸತ್ಸಂಗ.
ಚಳ್ಳಕೆರೆ ಜ.31

ನಗರದ ತ್ಯಾಗರಾಜ ನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದಿಂದ ಸ್ವಾಮಿ ತ್ರಿಗುಣಾತೀತಾನಂದಜೀ ಅವರ ಜಯಂತ್ಯುತ್ಸವದ ಪ್ರಯುಕ್ತ ವಿಶೇಷ ಸತ್ಸಂಗ ಕಾರ್ಯಕ್ರಮವನ್ನು ಶ್ರೀಮತಿ ನಂಜಮ್ಮ ಕೆಂಚಪ್ಪ ಶಿಕ್ಷಕರ ಸವಿತಾ ನಿವಾಸದಲ್ಲಿ ಆಯೋಜಿಸಲಾಗಿತ್ತು.

ಸ್ವಾಮಿ ತ್ರಿಗುಣಾತೀತಾನಂದರ ಬಗ್ಗೆ ಸತ್ಸಂಗ ಕೇಂದ್ರದ ಮುಖ್ಯಸ್ಥರಾದ ಶ್ರೀಮತಿ ಎಚ್ ಲಕ್ಷ್ಮೀದೇವಮ್ಮ ಅವರು ವಿಶೇಷ ಉಪನ್ಯಾಸ ನೀಡಿದರು.

ಜಯಂತೋತ್ಸವದ ಪ್ರಯುಕ್ತ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ಶ್ರೀರಾಮರಕ್ಷಾ ಸ್ತೋತ್ರ ಪಠಣ, ಶ್ರೀರಾಮಕೃಷ್ಣರ ನಾಮಸ್ಮರಣೆ, ಶ್ರೀಮತಿ ಗೀತಾ ಪ್ರಕಾಶ್ ಮತ್ತು ತಿಪ್ಪಮ್ಮ ಉಮಾಶಂಕರ್ ಅವರಿಂದ ವಚನ ಗಾಯನ, ಯತೀಶ್ ಎಂ ಸಿದ್ದಾಪುರ ಅವರಿಂದ “ಶ್ರೀಶಾರದಾದೇವಿ ಜೀವನಗಂಗಾ” ಗ್ರಂಥ ಪಾರಾಯಣ, ದಿವ್ಯತ್ರಯರಿಗೆ ಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ನಡೆಯಿತು.
ಜಯಂತೋತ್ಸವ ಸಭೆಯಲ್ಲಿ ಶ್ರೀಮತಿ ಎಂ ಲಕ್ಷ್ಮೀದೇವಮ್ಮ, ಸುವರ್ಣಮ್ಮ, ಸರ್ವಮಂಗಳಾ, ಪ್ರೇಮಾ, ಸುನೀತಾ,ರಾಧಾ, ಸಹನಾ, ಸರಸ್ವತಿ, ಸರಸ್ವತಿ ನಾಗರಾಜ್, ಜಗದಂಬಾ, ಸರಸ್ವತಿ ರಾಜು, ಸೌಮ್ಯ ಪ್ರಸಾದ್, ರಾಘವೇಂದ್ರ ಪಾಲ್ಗೊಂಡಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.
