ಮಾದಿಗ ಸಮುದಾಯದ ಮಹಿಳಾ ಮಣಿಗಳಿಂದ ಕಳಸದ ಆರತಿ ಮೂಲಕ – ಶ್ರೀ ಬನಶಂಕರಿ ದೇವಿಗೆ ಹೂವಿನ ಹಾರ ಸಮರ್ಪಣೆ.
ಸೂಳೇಭಾವಿ ಫೆ.01

ಭಾವೈಕ್ಯತೆಯ ತವರೂರು ಶ್ರೀ ಬನಶಂಕರಿದೇವಿ ಸೂಳೇಭಾವಿ ಅಂದ್ರೆ ಬಹುಶಃ ಅತಿಶಯೋಕ್ತಿಯಲ್ಲ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ವ್ಯಾಪ್ತಿಗೆ ಬರುವ ಸೂಳೇಭಾವಿ ಗ್ರಾಮದ ಶ್ರೀ ಬನಶಂಕರಿ ದೇವಿಯ 51 ವರ್ಷದ ಭಾವೈಕ್ಯತೆಯ ಜಾತ್ರಾ ಮಹೋತ್ಸವವು ಅತ್ಯಂತ ಅದ್ದೂರಿ ಹಾಗೂ ವೈಶಿಷ್ಟ್ಯತೆಗೆ ಸಾಕ್ಷಿಯಾಗಿದೆ.

ಇಂದು ಬೆಳಿಗ್ಗೆ 08:00 ಗಂಟೆಗೆ ಮಾದಿಗ ಸಮುದಾಯದಿಂದ ಶ್ರೀ ದುರ್ಗಾದೇವಿಯ ಗರ್ಭ ಸ್ಥಾನದಿಂದ ಹೂವಿನ ಹಾರದ ಜೊತೆಗೆ ಮಹಿಳಾ ಮಣಿಗಳಿಂದ ಕಳಸದ ಆರತಿ ಮೆರವಣಿಗೆ ಮೂಲಕ ಅಗಸಿ ಓಣಿಯಿಂದ, ಹಿಡಿದು ಗಾಂಧಿ ಸರ್ಕಲ್ ಮೂಲಕ ವಾಯ್ ಶ್ರೀ ಬನಶಂಕರಿ ದೇವಿಯ ಭಾವೈಕ್ಯತೆಯ ಮೊಟ್ಟ ಮೊದಲು ಮಾತಂಗಿಯರಿಂದ ಹೂವಿನ ಹಾರ ಸಮರ್ಪಣೆ ಮಾಡಿ ಬನಶಂಕರಿ ದೇವಿಯ ಜಾತ್ರಾ ಮಹೋತ್ಸವ ಚಾಲನೆಗೆ ಸಾಕ್ಷಿಯಾದರು.

ಗುರು ಹಿರಿಯರು ಕಾಂಗ್ರೆಸ್ ಪಕ್ಷದ ಮುಖಂಡರು ರವೀಂದ್ರ ಕಲ್ಬುರ್ಗಿ, ಡಿ.ಎಚ್ ಹೊಸಮನಿ ಕಾಂಗ್ರೆಸ್ ಮುಖಂಡರು ಹಾಗೂ ಭೂ ನ್ಯಾಯ ಮಂಡಳಿ ಸಮಿತಿಯ ಸದಸ್ಯರು, ಸಂಗಪ್ಪ ಗಾಂಧಿ, ಸುಬ್ಬಣ್ಣ ಮೇಲಿನಮನಿ, ಕಟ್ಟೆಪ್ಪ ಜೋಗಿ ಇವರೆಲ್ಲರೂ ಥೇರಿಗೆ ಮಾಲಾರ್ಪಣೆ ಸಮರ್ಪಿಸಿ ಶ್ರೀ ಬನಶಂಕರಿದೇವಿ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿದರು.
ಶ್ರೀ ದುರ್ಗಾದೇವಿಯ ಗರ್ಭ ಸ್ಥಾನದಿಂದ ಹೂವಿನ ಹಾರ ಮಹಿಳಾ ಮಣಿಗಳಿಂದ ಕಳಸದ ಆರತಿ ಮೂಲಕ ಮೆರವಣಿಗೆಗೆ ಚಾಲನೆ ನೀಡಿದ ಮಾದಿಗ ಸಮುದಾಯದ ಪ್ರಮುಖರು ರಾಮಪ್ಪ ಮೇಲಿನಮನಿ, ದುರುಗಪ್ಪ ಕರಡಿ, ಯಮನಪ್ಪ ಪೂಜಾರಿ ಮಾಜಿ ಗ್ರಾ.ಪ ಸದಸ್ಯರು, ಅಡಿಯಪ್ಪ ಕಂಧಾರಿ, ಯಮನಪ್ಪ ಜೋಗಿ, ತಿಪ್ಪಣ್ಣ ಮೇಲಿನಮನಿ, ಸುರೇಶ ಗಾಂಧಿ, ದುರುಗಪ್ಪ ಹುಲ್ಲಪ್ಪ ಮಾದರ ಇವರು ಎಲ್ಲಾರೂ ಸೇರಿ ಶ್ರೀ ಬನಶಂಕರಿದೇವಿ ಕೃಪೆಗೆ ಪಾತ್ರರಾದರು ಎಂದು ವರದಿಯಾಗಿದೆ.

