ವಿಶ್ವವ ತಬ್ಬುವ ಮಾತೃತ್ವ ಶಾರದಾಮಾತೆ ಯವರದು – ಮಾತಾಜೀ ತ್ಯಾಗಮಯೀ ಅಭಿಪ್ರಾಯ.
ಚಳ್ಳಕೆರೆ ಫೆ.03

ಶ್ರೀಮಾತೆ ಶಾರದಾದೇವಿಯವರು ಜಗತ್ತಿನ ಎಲ್ಲ ಜನರ ತಾಯಿಯಾಗಿ ವಿಶ್ವವ ತಬ್ಬುವ ಮಾತೃತ್ವವನ್ನು ಹೊಂದಿದ್ದರು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ತ್ಯಾಗಮಯೀ ತಿಳಿಸಿದರು.

ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಆಯೋಜಿಸಿದ್ದ ವಾರದ ವಿಶೇಷ ಸತ್ಸಂಗ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು “ಶ್ರೀಮಾತೆ ಶಾರದಾದೇವಿಯವರ ಮಾತೃತ್ವ” ಎಂಬ ವಿಷಯವಾಗಿ ವಿಶೇಷ ಪ್ರವಚನ ನೀಡಿದರು.

ಸತ್ಸಂಗದ ಆರಂಭದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ಭಜನೆ, ದಿವ್ಯತ್ರಯರಿಗೆ ಮಂಗಳಾರತಿ, ಕುಮಾರಿ ಹರ್ಷಿತಾ ಮತ್ತು ದವನ್ ಅವರಿಂದ ಶ್ರೀಮದ್ ಭಗವದ್ಗೀತೆಯ ಕರ್ಮಯೋಗದ ಶ್ಲೋಕಗಳ ಪಠಣ ನಡೆಯಿತು.

ಸತ್ಸಂಗದಲ್ಲಿ ಶ್ರೀಮತಿ ಪಿ.ಎಸ್ ಮಾಣಿಕ್ಯ ಸತ್ಯನಾರಾಯಣ, ಭಾವನಾ, ನಾಗರಾಜ್, ಗಂಗಾಧರಶೆಟ್ಟಿ, ಸುಮನಾ ಕೋಟೇಶ್ವರ, ಕಾವೇರಿ ಸುರೇಶ್, ಸಿ.ಎಸ್. ಭಾರತಿ ಚಂದ್ರಶೇಖರ್, ಚೇತನ್, ಪಂಕಜಾ, ಗೀತಾ ವೆಂಕಟೇಶ್ ರೆಡ್ಡಿ, ದೀಪಾ ರಾಘವೇಂದ್ರ, ಸುದೀಪ್, ವೆಂಕಟೇಶ್, ಶ್ಯಾಮ್, ಯತೀಶ್ ಎಂ ಸಿದ್ದಾಪುರ, ಪುಷ್ಪಲತಾ, ಅನ್ವಿಕಾ ಸೇರಿದಂತೆ ಸದ್ಭಕ್ತರು ಭಾಗವಹಿಸಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

