ಪಿ.ಎಂ ಶಿವಲಿಂಗಮೂರ್ತಿ ಅವರ 90 ನೇ. ವರ್ಷದ – ಹುಟ್ಟು ಹಬ್ಬದ ಪ್ರಯುಕ್ತ ವಿಶೇಷ ಸತ್ಸಂಗ.
ನಾಯಕನಹಟ್ಟಿ ಫೆ.06

ನಗರದ ನಿವಾಸಿಗಳು ಮತ್ತು ನಿವೃತ್ತ ಹಿಂದಿ ಭಾಷಾ ಶಿಕ್ಷಕರು, ಪಂಡಿತರಾದ ಪಿ.ಎಂ ಶಿವಲಿಂಗಮೂರ್ತಿ ಅವರ 90 ನೇ. ವರ್ಷದ ಹುಟ್ಟು ಹಬ್ಬದ ಸಂಭ್ರಮದ ಪ್ರಯುಕ್ತ ಇದೇ ಭಾನುವಾರ ಸಂಜೆ 4 ಗಂಟೆಯಿಂದ ವಿದ್ಯಾ ವಿಕಾಸ ಶಾಲಾ ಆವರಣದಲ್ಲಿ ಶ್ರೀಶಾರದಾಶ್ರಮದ ಯತೀಶ್ ಎಂ ಸಿದ್ದಾಪುರ ಮತ್ತು ಸಂಗಡಿಗ ರಿಂದ ಭಜನೆ, ವಿಶೇಷ ಸತ್ಸಂಗ ಮತ್ತು ವಿವಿಧ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಿದ್ದು ಸತ್ಸಂಗದ ದಿವ್ಯ ಸಾನಿಧ್ಯವನ್ನು ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ತ್ಯಾಗಮಯೀ ವಹಿಸಿ ಆಶೀರ್ವಚನ ನೀಡುವರು.
ಮುಖ್ಯ ಅತಿಥಿಗಳಾಗಿ ಚಿತ್ರದುರ್ಗದ ಕಾರ್ಡಿಲೋಜಿಸ್ಟ್ ಡಾ, ಆರ್.ಎಸ್ ಕಾರ್ತಿಕ್, ಕನ್ನಡ ಸಾಹಿತ್ಯ ಪರಿಷತ್ ನ ಜಿಲ್ಲಾಧ್ಯಕ್ಷರಾದ ಕೆ.ಎಂ ಶಿವಸ್ವಾಮಿ, ಎಂ.ಟಿ ಮಲ್ಲಿಕಾರ್ಜುನಸ್ವಾಮಿ, ಕಾಶಿನಾಥ್ ಎಸ್.ಎಂ ಪಟೇಲ್ ಜಿ.ಎಂ ತಿಪ್ಪೇಸ್ವಾಮಿ, ಕೆ.ಎಂ ತಿಪ್ಪೇಸ್ವಾಮಿ, ಕೆ.ವಿ ರಾಮಕೃಷ್ಣರೆಡ್ಡಿ ಸೇರಿದಂತೆ ಶಿವಲಿಂಗಮೂರ್ತಿಯರ ಮಕ್ಕಳು, ಅಳಿಯಂದಿರು, ಸೊಸೆಯಂದಿರು, ಮೊಮ್ಮಕ್ಕಳು, ಪೊಬ್ಬರಹಳ್ಳಿ ಮಠದ ಬಂಧುಗಳು, ಸಮಸ್ತ ವೀರಶೈವ ಬಾಂಧವರು ಮತ್ತು ಅವರ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಪಿ.ಎಂ ಶಿವಲಿಂಗಮೂರ್ತಿ ಅವರ ಪುತ್ರಿ ಸುಗುಣಾ ಪಿ.ಎಂ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

