“ನೀ ಇರಲು ನೀರು ಜೀವ ಶಕ್ತಿ”…..

ಭೂಮಾತೆಯ ಒಡಲಾಳದ ಸರ್ವ ಜೀವಿಗಳ

ಅಮೃತ ಕಣವು

ಜೀವ ಸಂಕುಲಗಳ ಜೀವಾತ್ಮ ಸಲಹುವ

ಜೀವನಾಂಶದ ಬಲವು

ಸರಳತೆಯ ಶುದ್ಧತೆಯ ಆನಂದಮಯ ನಿಜ

ದಿವ್ಯಾತ್ಮದ ಕಣವು

ಜೀವ ಉತ್ಪತ್ತಿಯು ಪವಿತ್ರತೆಯ ಪ್ರತೀಕವು

ನೀರು ನಿರ್ಮಲತೆಯ ಸಂಕೇತವು

ನೀರೆಂಬ ದಿವ್ಯ ಔಷಧಿ ಪಿತ್ತ ನಿವಾರಣೆಯು

ಜಲೌಷಧಿ ಹೃದಯ ರಕ್ತ ಶುದ್ಧಿಯು

ಬೆಳೆ ಕಳೆಗೆ ನೀರೆ ಮೂಲಾಧಾರವು

ಮನುಜರ ರೋಗ ನಿರೋಧ ಶಕ್ತಿ ಧಾಯಕವು

ಮೂಲವ್ಯಾಧಿ ತಡೆಗೆ ಹೆಚ್ಚು ನೀರು ಸೇವನೆ

ಅಗತ್ಯವು

ಪ್ರಾಣ ಶಕ್ತಿಗೆ ನೀರೆ ಔಷಧಿ ರಸೌಷಧಿಯು

ಭೂಲೋಕದ ಅಮೃತ ನೀರು

ಸರ್ವ ಜೀವ ಸಂಕುಲದ ಅಗತ್ಯತೆಯು

ನೀ ಇರಲು ನೀರು ಜೀವ ಶಕ್ತಿಯು

ಘನ ದ್ರವ ಅನಿಲ ಆವಿ ಸಮತೋಲನ

ಗುಣವು

ಇರುವದಾದರೆ ನೀರ ಗುಣವ ಅರಿತು ಜಗದಲಿ

ನೀ ಇರುವನಾಗಿರು

ಭೂವೊಡಲ ಜಲ ತಟವು ಸಕಲ ಜೀವಿಗಳ

ದಿವ್ಯೌಷಧಿಯ ಅಮೃತ ಪಾನವು

ಶ್ರೀಸುರೇಶ ಶಂಕ್ರೆಪ್ಪ ಅಂಗಡಿ

(ದೇಶಂಸು) ದೇವರ ಹಿಪ್ಪರಗಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button