ಕಾಡು ಹಂದಿಗಳ ಹಾವಳಿ – ರೈತನ ಮೆಕ್ಕೆ ಜೋಳ ಬೆಳೆ ನಾಶ.
ಕೆ.ಹೊಸಹಳ್ಳಿ ಫೆ.10

ಗ್ರಾಮದ ಎನ್ ಮಹಾಂತೇಶ ಅವರ ಎರಡು ಎಕರೆ ಜಮೀನಿನಲ್ಲಿ ಹಾಕಿದ ಮೆಕ್ಕೆ ಜೋಳದ ಸುಮಾರು ಅರ್ಧ ಎಕರೆ ಮೆಕ್ಕೆ ಜೋಳವನ್ನು ಕಾಡು ಹಂದಿಗಳು ಭಾನುವಾರ ರಾತ್ರಿ ದಾಳಿ ಮಾಡಿ ನಾಶ ಮಾಡಿವೆ. ಇದರಿಂದ ದಲಿತ ಕುಟುಂಬಕ್ಕೆ ಸೇರಿದ ರೈತ ಮಹಾಂತೇಶ್ ಸುಮಾರು 30 ರಿಂದ 40 ಸಾವಿರ ನಷ್ಟ ಅನುಭವಿಸುವ ಪರಿಸ್ಥಿತಿ ಬಂದಿದೆ.
ಮಹಾಂತೇಶ್ ಅವರು ಹೇಳುವ ಪ್ರಕಾರ, ಕಾಡು ಹಂದಿಗಳು ಅವರ ಬೆಳೆಗೆ ಹಾವಳಿ ಮಾಡುತ್ತಿರುವುದು ಇದೇ ಮೊದಲಲ್ಲ. ಅಕ್ಕ ಪಕ್ಕದ ರೈತರ ಜಮೀನಿನಲ್ಲಿ ಹಾಕಿದ ಮೆಕ್ಕೆ ಜೋಳದ ಫೈರುಗಳನ್ನು ನಾಶ ಮಾಡಿದ್ದವು.ನನ್ನ ಬೆಳೆ ನಾಶ ಮಾಡಿದ ಹಂದಿಗಳನ್ನು ಹಿಡಿದು ಸೂಕ್ತ ಸ್ಥಳಕ್ಕೆ ಕೂಡಿ ಹಾಕಬೇಕು. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲಿಸಿ ಪರಿಹಾರ ಕಲ್ಪಿಸಿ ಕೊಡಬೇಕೆಂದು ಮಹಾಂತೇಶ್ ವಿನಂತಿಸಿದ್ದಾರೆ. ಕಾಡು ಪ್ರಾಣಿಗಳ ಹಾವಳಿ ತಪ್ಪಿಸಲು ಕ್ರಮ ಕೈಗೊಳ್ಳ ಬೇಕೆಂದು ಅವರು ಕೇಳಿ ಕೊಂಡಿದ್ದಾರೆ.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್ ವೀರೇಶ್ ಕೆ ಹೊಸಹಳ್ಳಿ

