ಅಖಿಲ ಕರ್ನಾಟಕ ವಿಶ್ವಕರ್ಮ ಮಹಾ ಸಭಾ ಜಿಲ್ಲಾ ಯುವ ಘಟಕ ಪ್ರಧಾನ ಕಾರ್ಯದರ್ಶಿಯಾಗಿ ಚನ್ನಪ್ಪ.ಕೆ ಹೊಸಹಳ್ಳಿ ಹಾಗೂ – ಸಂಘಟನಾ ಕಾರ್ಯದರ್ಶಿಯಾಗಿ ರಾಜು ಪತ್ತಾರ ಬಳಗಾನೂರ ಆಯ್ಕೆ ಆಗಿದ್ದಾರೆ.
ಸಿಂಧನೂರು ಫೆ.10

ಅಖಿಲ ಕರ್ನಾಟಕ ವಿಶ್ವಕರ್ಮ ಮಹಾ ಸಭಾ ಸಂಸ್ಥಾಪಕ ರಾಜ್ಯಾಧ್ಯಕ್ಷರು ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯರಾದ ಕೆ.ಪಿ.ನಂಜುಂಡಿ ವಿಶ್ವಕರ್ಮ ಅವರ ಆದೇಶದ ಮೇರೆಗೆ ಅ.ಕ.ವಿ.ಮ ರಾಜ್ಯ ಪ್ರಧಾನ ಕಾರ್ಯದರ್ಶಿ ಬ್ರಹ್ಮಗಣೇಶ ವಕೀಲರು, ರಾಜ್ಯ ಕಾರ್ಯದರ್ಶಿ ಸೋಮಣ್ಣ ಪತ್ತಾರ ಸುಕಲಪೇಟೆ, ಜಿಲ್ಲಾ ಘಟಕದ ಅಧ್ಯಕ್ಷ ಮಾರುತಿ ಬಡಿಗೇರ, ರಾ.ಜಿ.ವಿ.ಸ.ಜಿಲ್ಲಾಧ್ಯಕ್ಷರಾದ ಉದಯಕುಮಾರ ಪತ್ತಾರ ಮಸ್ಕಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ರಾಮು ಗಾಣಧಾಳ, ಅ.ಕ.ವಿ.ಮ ಜಿಲ್ಲಾ ಯುವ ಘಟಕ ಅಧ್ಯಕ್ಷ ಸುರೇಶ ಸಂಗಾಪುರ, ಸಿಂಧನೂರು ಹಿರಿಯ ಮುಖಂಡರಾದ ವೀರೇಶ ದೇವರಗುಡಿ ಹಾಗೂ ಜಿಲ್ಲೆಯ 8 ತಾಲೂಕುಗಳ ಹಿರಿಯ ಕಿರಿಯ ಸಮಾಜದ ಮುಖಂಡರು ನೇತೃತ್ವದಲ್ಲಿ ರಾಯಚೂರಿನ ಬೇರೂನಕಿಲ್ಲಾದ ಶ್ರೀ ಕಾಳಿಕಾದೇವಿ ದೇವಸ್ಥಾನದಲ್ಲಿ ನಡೆದ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ರಾಯಚೂರು ಜಿಲ್ಲಾ ಯುವ ಘಟಕ ಪ್ರಧಾನ ಕಾರ್ಯದರ್ಶಿಯಾಗಿ ಸಿಂಧನೂರಿನ ಚನ್ನಪ್ಪ ವಿಶ್ವಕರ್ಮ ಕೆ.ಹೊಸಹಳ್ಳಿ ಮತ್ತು ಸಂಘಟನಾ ಕಾರ್ಯದರ್ಶಿಯಾಗಿ ರಾಜು ಪತ್ತಾರ ಬಳಗಾನೂರ ಅವರನ್ನು ಸರ್ವಾನು ಮತದಿಂದ ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಚನ್ನಪ್ಪ.ಕೆ ಹೊಸಹಳ್ಳಿ ಅವರು ರಾಜ್ಯಾಧ್ಯಕ್ಷರಾದ ಕೆ.ಪಿ ನಂಜುಂಡಿ ಅವರು ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ವಧುವರರ ಸಮಾವೇಶ ಮೇಲುಸ್ತುವಾರಿಯಾಗಿ, ಪಾದಯಾತ್ರೆ, ಬೆಂಗಳೂರಿನ ಸಂಘಟನಾ ಸಭೆಗಳಲ್ಲಿ ಭಾಗವಸುವ ಮೂಲಕ ಒಡನಾಡಿಯಾಗಿ ಅವರ ಮಾರ್ಗದರ್ಶನದಲ್ಲಿ ಸಮಾಜ ಸೇವೆಯಲ್ಲಿ ತೊಡಗಿ ಕೊಂಡು ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಹಲವಾರು ಜಿಲ್ಲಾ ಮಟ್ಟದ ಸಂಘಟನಾ ಸಭೆಗಳಲ್ಲಿ ಭಾಗವಹಿಸಿ ಯುವಕರನ್ನು ಸಂಘಟನೆಯಲ್ಲಿ ಸಕ್ರಿಯವಾಗಿ ಪಾಲ್ಗೊಳುವಂತೆ ಮಾಡುತ್ತಿದ್ದಾರೆ. ಜೊತೆಗೆ ತಾಲೂಕಿನಲ್ಲಿ ಸಂಘಟನಾ ಕಾರ್ಯದರ್ಶಿಯಾಗಿ ಸಮಾಜವನ್ನು ಸಂಘಟಿಸುತ್ತಿದ್ದಾರೆ. ಸಮಾಜದ ಮೇಲಿನ ಅಪಾರ ಕಾಳಜಿಯನ್ನು ಗುರುತಿಸಿ ಜಿಲ್ಲೆಯಲ್ಲಿ ಸಮಾಜ ಸಂಘಟನೆಯನ್ನು ಬಲ ಪಡಿಸಲೆಂದು ಮತ್ತು ಕೆ.ಪಿ ನಂಜುಂಡಿ ವಿಶ್ವಕರ್ಮ ಅವರ ಕಾರ್ಯಗಳಲ್ಲಿ ಯುವಕರನ್ನು ಹೆಚ್ಚು ಹೆಚ್ಚು ಉತ್ಸಾಹದಿಂದ ಸಂಘಟನೆಯಲ್ಲಿ ಸಕ್ರಿಯವಾಗಿ ಪಾಲ್ಗೊಳುವಂತೆ ಮಾಡುವ ಹಿತ ದೃಷ್ಟಿಯಿಂದ ಚನ್ನಪ್ಪ ಕೆ.ಹೊಸಹಳ್ಳಿ ಮತ್ತು ಸಂಘಟನಾ ಕಾರ್ಯದರ್ಶಿಯಾಗಿ ರಾಜು ಬಳಗಾನೂರು ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು ಎಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾ ಸಭಾ ರಾಜ್ಯ ಕಾರ್ಯದರ್ಶಿ ಸೋಮಣ್ಣ ಸುಕಲಪೇಟೆ ಅವರು ತಿಳಿಸಿದರು.
ಈ ಸಂಧರ್ಭದಲ್ಲಿ ಸಮಾಜದ ಮುಖಂಡರಾದ ವೆಂಕಟೇಶ ಆನ್ವರಿ, ಅನಂತಶಯನ, ಎ.ಈಶ್ವರ ವಿಶ್ವಕರ್ಮ, ಮನೋಹರ BSNL, ಮಲ್ಲಪ್ಪ, ಗಂಗಾಧರ, ಧರ್ಮಣ್ಣ ಗುಂಜಳ್ಳಿ, ಮಂಜುನಾಥ ಕೊಟ್ನೆಕಲ್, ದೇವರಾಜ ಮಸ್ಕಿ, ಅಮರೇಶ ಚಿಲ್ಕರಾಗಿ, ರಾಮಚಂದ್ರಪ್ಪ, ವಿಜಯಕುಮಾರ ಮಸ್ಕಿ, ಕಾಳಪ್ಪ ಮಸ್ಕಿ, ಡಾ, ವೆಂಕಟೇಶ, ಮೌನೇಶ ತಡಕಲ್, ಷಣ್ಮುಖ ಆಚಾರಿ, ಅಮರನಾಥ ಮಾನ್ವಿ, ನಾಗರಾಜ ಪತ್ತಾರ, ಕೆ.ನರಸಪ್ಪ, ಪ್ರಕಾಶ, ಕೆ.ವೆಂಕಟೇಶ, ಗುರು ಮಾಡ್ದಿಪೇಟೆ, ಸುರೇಶ,ಪ್ರಕಾಶ, ಅಮರೇಶ ಕಂಬಾರ, ಮಲ್ಲಿಕಾರ್ಜುನ, ರಾಮು, ಬ್ರಹ್ಮಯ್ಯ, ನಾಗರಾಜ, ರಾಮಕೃಷ್ಣ, ಮೌನೇಶ ವಡವಾಟಿ ಇನ್ನೂ ಮುಂತಾದವರು ಇದ್ದರು.
