ವಾಸವಿ ಕಾಲೋನಿಯ ಮಹಿಳಾ ಸದ್ಭಕ್ತರಿಂದ – ಸಾಮೂಹಿಕ ಶ್ರೀಲಲಿತಾ ಸಹಸ್ರನಾಮ ಪಾರಾಯಣ.
ಚಳ್ಳಕೆರೆ ಫೆ.16

ನಗರದ ವಾಸವಿ ಕಾಲೋನಿಯ ಮಹಿಳಾ ಸದ್ಭಕ್ತರಿಂದ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಸಾಮೂಹಿಕ ಶ್ರೀಲಲಿತಾ ಸಹಸ್ರನಾಮ ಪಾರಾಯಣ, ವಿಶೇಷ ಭಜನೆ ನಡೆದರೆ ಪೂಜ್ಯ ಮಾತಾಜೀ ತ್ಯಾಗಮಯೀ ಅವರಿಂದ ದಿವ್ಯತ್ರಯರಿಗೆ ಮಂಗಳಾರತಿ ಮತ್ತು ಯುಗಾವತಾರ ಶ್ರೀರಾಮಕೃಷ್ಣ ಭಾಗ-೨ ರ ಗ್ರಂಥ ಪಾರಾಯಣ ಕಾರ್ಯಕ್ರಮ ನಡೆಯಿತು.

ಪಾರಾಯಣ ಕಾರ್ಯಕ್ರಮದಲ್ಲಿ ಲಕ್ಷ್ಮೀ ಗಂಗಾಧರ, ವನಜಾಕ್ಷಿ ಮೋಹನ್, ಲಕ್ಷ್ಮೀ ನಾಗಭೂಷಣ, ಲತಾ, ಸಂಧ್ಯಾ, ವಿಮಲಾ, ಶ್ವೇತ,ಚಂದ್ರಕಲಾ, ಭವ್ಯ, ವಾಸವಿ, ವಿನುತಾ, ಅಂಬುಜಾ ಶಾಂತಕುಮಾರ್, ಕವಿತಾ, ಪಿ.ಎಸ್ ಮಾಣಿಕ್ಯ ಸತ್ಯನಾರಾಯಣ, ಚೇತನ್, ರಶ್ಮಿ, ಯಶಸ್ವಿ, ಸ್ವಪ್ನ, ಪುಷ್ಪಲತಾ, ಯತೀಶ್ ಎಂ ಸಿದ್ದಾಪುರ, ಸುದೀಪ್ ಸೇರಿದಂತೆ ಸದ್ಭಕ್ತರು ಭಾಗವಹಿಸಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

