ಮನಸ್ಸಿನ ಸಮರ್ಥ ನಿಯಂತ್ರಣ ದಿಂದ ಅದ್ಭುತ ಕಾರ್ಯ ಸಾಧ್ಯ – ಚೇತನ್ ಕುಮಾರ್.
ಚಳ್ಳಕೆರೆ ಫೆ.19

ಮನಸ್ಸಿನ ಸಮರ್ಥ ನಿಯಂತ್ರಣದಿಂದ ಅದ್ಭುತ ಕಾರ್ಯ ಸಾಧ್ಯವಾಗುತ್ತದೆ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸ್ವಯಂ ಸೇವಕ ಚೇತನ್ ಕುಮಾರ್ ತಿಳಿಸಿದರು.

ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಬಾಪೂಜಿ ಆಯುರ್ವೇದ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ವಾರದ ವ್ಯಕ್ತಿತ್ವ ನಿರ್ಮಾಣಕಾರಿ ತರಗತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು “ಮನಸ್ಸಿನ ಶಕ್ತಿ” ಎಂಬ ವಿಷಯವಾಗಿ ಉಪನ್ಯಾಸ ನೀಡಿದರು.

ಕಾರ್ಯಕ್ರಮದ ಆರಂಭದಲ್ಲಿ ಪ್ರಾರ್ಥನೆ ಮತ್ತು ಭಜನೆಯನ್ನು ಯತೀಶ್ ಎಂ ಸಿದ್ದಾಪುರ ನಡೆಸಿಕೊಟ್ಟರೆ ಪೂಜ್ಯ ಮಾತಾಜೀ ತ್ಯಾಗಮಯೀ ಅವರು ದಿವ್ಯತ್ರಯರಿಗೆ ಮಂಗಳಾರತಿಯನ್ನು ಮಾಡಿದರು.

ತರಗತಿಯಲ್ಲಿ ಹೃತಿಕ್, ಮಾನ್ಯ, ಪುಷ್ಪಲತಾ, ದಾನೇಶ್ವರಿ, ಸಂತೋಷ್, ಚಾರ್ಮಿಶ್ರೀ, ಸೃಷ್ಟಿ ಸೇರಿದಂತೆ ಸಾಕಷ್ಟು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

