ದಲಿತರಿಗೆ ಭೂಮಿ ಕೊಡಿ ಇಲ್ಲ ವಿಷ ಕೊಡಿ – ತರೀಕೆರೆ.ಎನ್ ವೆಂಕಟೇಶ್.
ನರಸಿಂಹರಾಜಪುರ ಫೆ.19

ದಾಸ್ಯದಿಂದ ಜೀತದಿಂದ ದಲಿತರು ಹೊರಗೆ ಬರಬೇಕು. ಸ್ವಾಭಿಮಾನಿಗಳಾಗಿ ಬದುಕಲು ದಲಿತರಿಗೆ ಭೂಮಿ ಬೇಕು, ಭೂಮಿಯ ಒಡೆಯರಾಗ ಬೇಕು ಎಂದು ಮಹಾತ್ಮ ಪ್ರೊ, ಬಿ.ಕೃಷ್ಣಪ್ಪ ರವರು ಭೂಮಿ ಚಳುವಳಿ ಮಾಡಿದ್ದಾರೆ ಎಂದು ರಾಜ್ಯ ಸಂಚಾಲಕರಾದ ತರೀಕೆರೆ.ಎನ್ ವೆಂಕಟೇಶ್ ಹೇಳಿದರು.
ದಲಿತರಿಗೆ ಭೂಮಿ ಕೊಡಿ ಇಲ್ಲವೇ, ವಿಷ ಕೊಡಿ ಎಂದು ಆಗ್ರಹಿಸಿದರು. ಅವರು ಇಂದು ಭೂಮಿಗಾಗಿ ಹೋರಾಟ ಅನಿರ್ದಿಷ್ಟ ಕಾಲ ಅಹೋ ರಾತ್ರಿ ಧರಣಿ ಸತ್ಯಾಗ್ರಹ 4 ನೇ. ದಿನಕ್ಕೆ ಮುಂದುವರೆದಿದ್ದು ಕುರಿತು ಮಾತನಾಡಿದರು.
ರಾಜ್ಯ ಸಂಘಟನಾ ಸಂಚಾಲಕರಾದ ಬೆಂಗಳೂರಿನ ರಾಜಶೇಖರ್ ಜಾಪುನೂರ್ ರವರು ಪ್ರತಿಭಟನೆಯಲ್ಲಿ ಪಾಲ್ಗೊಂಡು ದಲಿತರಿಗೆ ಮೀಸಲಿಟ್ಟಿರುವ ಜಮೀನನ್ನು ದಲಿತರಿಗೆ ಕೊಡುವವರೆಗೂ ಬಿಡುವುದಿಲ್ಲ ಪ್ರತಿಭಟನೆ ಧರಣಿಯನ್ನು ಮುಂದುವರಿಸುತ್ತೇವೆ ಎಂದು ಹೇಳಿದರು.
ರಾಜ್ಯ ಸಮಿತಿ ಸದಸ್ಯರಾದ ಎಸ್ ರಾಜೇಶ್ ಮಾತನಾಡಿ ನಮಗೆ ಜಮೀನು ಕೊಡಿ ಇಲ್ಲವಾದರೆ ನಮಗೆ ದಯಾಮರಣ ಕೊಡಿ ಎಂದು ಹೇಳಿದರು.

ಕರ್ನಾಟಕ ದಲಿತ ಮಹಿಳಾ ಒಕ್ಕೂಟದ ರಾಜ್ಯ ಸಂಚಾಲಕಿಯಾದ ಎಂ.ವಿ ಭವಾನಿ ರವರು ಮಾತನಾಡಿ ಅಧಿಕಾರಿಗಳು ನಮ್ಮ ಸಮಸ್ಯೆಗಳಿಗೆ ಸ್ಪಂದನೆ ಮಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕು ಸಂಚಾಲಕರಾದ ಎಂ.ಜೆ ಸಿಜು ರವರು ಮಾತನಾಡಿ ಭೂಹೀನ ದಲಿತರಿಗೆ ಇಂದಿನ ಜಿಲ್ಲಾಧಿಕಾರಿಗಳ ಆದೇಶದಿಂದ ತಹಸೀಲ್ದಾರ್ ನಕಾಶೆ ತಯಾರಿಸಿರುವ ಸರ್ಕಾರಿ ಗೋಮಾಳ ಜಮೀನು ಮಂಜೂರಾತಿ ಮಾಡಿ ಕೊಡುವ ವರೆಗೂ ಸಹ ನಾವು ಹೋರಾಟವನ್ನು ನಿಲ್ಲಿಸುವುದಿಲ್ಲ ಎಂದು ಹೇಳಿದರು.ತಾಲೂಕು ಸಂಘಟನಾ ಸಂಚಾಲಕರಾದ ಮೃತ್ಯುಂಜಯ ಮಾತನಾಡಿ ಭೂಮಿ ಚಳುವಳಿಗಳ ಬಗ್ಗೆ ತಿಳಿಸಿದರು.
ಜಿಲ್ಲಾ ಸಂಘಟನಾ ಸಂಚಾಲಕರಾದ ಅಬ್ದುಲ್ ರೆಹಮಾನ್ ಮತ್ತು ತಾಲೂಕು ಸಂಘಟನಾ ಸಂಚಾಲಕರಾದ ಸಿದ್ದಪ್ಪ, ಕಧೀರ್, ಜಯರಾಮ್,ಎಸ್ ರಾಜು, ಉಮೇಶ ಮೀನು ಕ್ಯಾಂಪ್ ವಾಸಂತಿ ಹಂದೂರಿನ ತಿಮ್ಮಣ್ಣ, ನಾಗರಾಜ,ಶೇಷ, ಮುಂತಾದವರು ಉಪಸ್ಥಿತರಿದ್ದು, ರಾಜ್ಯ ಸಮಿತಿ ಸದಸ್ಯರಾದ ಟಿ.ಮಂಜಪ್ಪ ಕ್ರಾಂತಿಕಾರಿ ಹೋರಾಟದ ಹಾಡುಗಳನ್ನು ಹಾಡಿದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎನ್.ವೆಂಕಟೇಶ್. ತರೀಕೆರೆ ಚಿಕ್ಕಮಗಳೂರು

