ಕೀರ್ತನ.ಆರ್ ಅವರಿಂದ ಶಿವನ ಹಾಡುಗಳಿಗೆ – ಯೋಗ ನೃತ್ಯ.

ಚಿತ್ರದುರ್ಗ ಫೆ.20

ನಗರದ ಶ್ರೀಸದ್ಗುರು ಕಬೀರಾನಂದ ಮಠದಿಂದ ಮಹಾ ಶಿವರಾತ್ರಿಯ ಪ್ರಯುಕ್ತ ಆಯೋಜಿಸಲಾದ “96 ನೇ. ವರ್ಷದ ಶಿವರಾತ್ರಿ ಮಹೋತ್ಸವ” ದಲ್ಲಿ ಚಳ್ಳಕೆರೆಯ ಪ್ರಗತಿ ವಿದ್ಯಾಲಯದ ಆರನೇ ತರಗತಿ ವಿದ್ಯಾರ್ಥಿನಿ ಕುಮಾರಿ ಕೀರ್ತನಾ ಆರ್ ಅವರು ಯೋಗಿ ಶಿವ, ಶಿವ ತಾಂಡವ, ಕಾಲಭೈರವ ಅಷ್ಟಕ ಗೀತೆಗಳಿಗೆ ಯೋಗದ ಆಸನಗಳನ್ನು ಜೋಡಿಸಿ ಕೊಂಡು ಯೋಗ ನೃತ್ಯ ಪ್ರದರ್ಶನ ಮಾಡುವ ಮೂಲಕ ಎಲ್ಲರ ಪ್ರಶಂಸೆಗೆ ಪಾತ್ರಳಾದಳು. ಕೀರ್ತನಾ ಅವರನ್ನು ಮಠದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀಕಬೀರಾನಂದ ಆಶ್ರಮದ ಪೀಠಾಧ್ಯಕ್ಷರಾದ ಪೂಜ್ಯ ಶ್ರೀ ಶಿವಲಿಂಗಾನಂದ ಸ್ವಾಮಿಗಳವರು ವಹಿಸಿದ್ದರು.

ನಾಡಿನ ವಿವಿಧ ಮಠಗಳ ಮಠಾಧೀಶರು, ಗಣ್ಯರು ಹಾಗೂ ಕೀರ್ತನಾ ಆರ್ ಅವರ ಪೋಷಕರಾದ ಶೋಭಾ ರಮೇಶ್, ಸಾವಿತ್ರಮ್ಮ, ವೆಂಕಟೇಶ್, ನರಸಮ್ಮ, ಯೋಗೀಶ್, ಗಗನ್, ಅರವಿಂದ್, ಸೇರಿದಂತೆ ಮಠದ ಭಕ್ತರು, ಸಾರ್ವಜನಿಕರು ಉಪಸ್ಥಿತರಿದ್ದರು. ‌ ‌ ‌

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button