ಮಕ್ಕಳಿಂದ ಸ್ವಾಮಿ ವಿವೇಕಾನಂದರ ಚೈತನ್ಯದಾಯಕ – ನುಡಿಗಳ ಪಠಣ.
ಚಳ್ಳಕೆರೆ ಫೆ.21

ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದಲ್ಲಿ ಮಕ್ಕಳಿಗಾಗಿ ಆಯೋಜಿಸಿದ್ದ “ವಿವೇಕ ವಿಹಾರ ವಿದ್ಯಾರ್ಥಿ ಶಿಬಿರ” ಕಾರ್ಯಕ್ರಮದಲ್ಲಿ ಮಕ್ಕಳಿಂದ ಓಂಕಾರ, ದಿವ್ಯತ್ರಯರ ಪ್ರಣಾಮಮಂತ್ರ ಪಠಣ, ಶ್ರೀರಾಮಕೃಷ್ಣ ಮತ್ತು ಶಿವನ ನಾಮಸ್ಮರಣೆ, ಸ್ವಾಮಿ ವಿವೇಕಾನಂದರ ಶಕ್ತಿ ಮಂತ್ರ, ಸ್ವದೇಶ ಮಂತ್ರ ಹಾಗೂ ಸ್ವಾಮಿ ವಿವೇಕಾನಂದರ ಚೈತನ್ಯದಾಯಕ ನುಡಿಗಳ ಪಠಣ ನಡೆಯಿತು.

ಭಜನೆಯನ್ನು ಯತೀಶ್ ಎಂ ಸಿದ್ದಾಪುರ ನಡೆಸಿ ಕೊಟ್ಟರೆ ಸಂತೋಷ್ ಕುಮಾರ್ ಅವರು ವಿವಿಧ ಆಟಗಳನ್ನು ಆಡಿಸಿದರು.
ತರಗತಿಯಲ್ಲಿ ವಿದ್ಯಾರ್ಥಿಗಳಾದ ಮಹಾಲಕ್ಷ್ಮೀ, ಬಿಂದು, ಹಂಸ, ಸಂಜನಾ, ನಮ್ರತಾ, ಯಶಸ್ವಿ , ಹರ್ಷಿತಾ, ದವನ್, ಯಶಸ್ಸು, ಶ್ರೇಯಸ್, ವಿನತಿ, ಲಕ್ಷ್ಮೀ, ಚರಣ್ಯ, ಸಹನಾ ಪಾಲ್ಗೊಂಡಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

