ಹುನಗುಂದ-ಇಳಕಲ್ಲ ತಾಲ್ಲೂಕಿಗೆ ಕೇಂದ್ರ ಲೆಕ್ಕ – ಪರಿಶೋಧನಾ ತಂಡ ಭೇಟಿ.

ಕೆಲೂರ ಫೆ.21

ಹುನಗುಂದ ತಾಲ್ಲೂಕಿನ ಮೂಗನೂರು, ಗಂಜೀಹಾಳ, ರಕ್ಕಸಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗ್ರಾಮೀಣಾಭಿವೃದ್ಧಿ ಮಂತ್ರಾಲಯದ ತಂಡವು ವಿಶೇಷ ಲೆಕ್ಕ ಪರಿಶೋಧನೆಗೆ ಭೇಟಿ ನೀಡಿದರು.

ತಂಡದ ಅಧಿಕಾರಿ ಭೂಪೇಂದ್ರಕುಮಾರ ಹಾಗೂ ಇನ್ನಿತರ ಅಧಿಕಾರಿಗಳು ಮೂಗನೂರು ಗ್ರಾಪಂಗಳಿಗೆ ಭೇಟಿ ನೀಡಿ, ಮನರೇಗಾ ಯೋಜನೆಯಡಿ ಪ್ರಗತಿಯಲ್ಲಿರುವ ಕೆನಾಲ್ ಹೂಳೆತ್ತುವ ಕಾಮಗಾರಿಗಳು ಹಾಗೂ ದಾಖಲಾತಿಗಳನ್ನು ಪರಿಶೀಲನೆ ಮಾಡಿದರು.

ಬಳಿಕ ಗಂಜೀಹಾಳ ಗ್ರಾಪಂ ವ್ಯಾಪ್ತಿಯಲ್ಲಿ ಬದು ನಿರ್ಮಾಣ ಕಾಮಗಾರಿ ಹಾಗೂ ಕಾಮಗಾರಿಯ ಅಳತೆ ಪ್ರಮಾಣವನ್ನು ಪರಿಶೀಲಿಸಿದರು.

ಇನ್ನೂ ರಕ್ಕಸಗಿ ಗ್ರಾ.ಪಂ ವ್ಯಾಪ್ತಿಯಲ್ಲಿ ಕಡೂರು ಕೆರೆ ಭೇಟಿ ನೀಡಿ ಕಾಮಗಾರಿ ಹಾಗೂ ದಾಖಲಾತಿಗಳನ್ನು ಪರಿಶೀಲಿಸಿದರು.

ಬಳಿಕ ಇಳಕಲ್ಲ ತಾಲ್ಲೂಕಿನ ಕೆಲೂರ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ 7-ರಜಿಸ್ಟರ್, ಸಾಮಾಜಿಕ ಲೆಕ್ಕ ಪರಿಶೋಧನಾ ವರದಿ, ಕಾಮಗಾರಿ ಕಡತಗಳು, ಅಳತೆ ಪುಸ್ತಕ ಪರಿಶೀಲಿಸಿದರು. ಬಳಿಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆರೆಗಳ ಹೂಳೆತ್ತುವ ಕಾಮಗಾರಿ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಕಾರ್ಯನಿರ್ವಾಹಕ ಅಧಿಕಾರಿ ಮುರುಳಿಧರ ದೇಶಪಾಂಡೆ, ಸಹಾಯಕ ನಿರ್ದೇಶಕ ಮಹಾಂತೇಶ ಛಲವಾದಿ, ಸಹಾಯಕ ಜಿಲ್ಲಾ ಕಾರ್ಯಕ್ರಮ ಸಂಯೋಜಕ ರಾಜೇಶ್ವರಿ ಗಡೇದ , ಜಿಲ್ಲಾ ಸಮಾಜಿಕ ಲೆಕ್ಕ ಪರಿಶೋಧನಾ ಅಧಿಕಾರಿ ಬಸವರಾಜ ಔರಸಂಗ, ತಾಂತ್ರಿಕ ಸಂಯೋಜಕ ನವೀನ ಹಂಚಾಟೆ ಐ.ಇ.ಸಿ. ಸಂಯೋಜಕ ಬಸವರಾಜ ಕೊಪ್ಪದ , ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಎಸ್. ಎಸ್ ಅಡಾಲಟ್ಟಿ, ಸಿದ್ದು ನಂಜಯ್ಯನಮಠ, ಶೋಭಾ ನಾಯಿಕ, ಸುಮನ್, ತಾಂತ್ರಿಕ ಸಹಾಯಕರು, ಬಿ.ಎಪ್.ಟಿ ಗ್ರಾಮ ಕಾಯಕ ಮಿತ್ರರು ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button