ಭಗವತ್ ಸಾಕ್ಷಾತ್ಕಾರ ಮನುಷ್ಯ ಜೀವನದ ನಿಜವಾದ ಗುರಿ – ಮಾತಾಜೀ ತ್ಯಾಗಮಯೀ ಹೇಳಿಕೆ.

ಚಳ್ಳಕೆರೆ ಫೆ.21

ಶ್ರೀರಾಮಕೃಷ್ಣ ಪರಮಹಂಸರು ತಿಳಿಸಿದಂತೆ ಭಗವಂತನ ಸಾಕ್ಷಾತ್ಕಾರ ಮನುಷ್ಯ ಜೀವನದ ನಿಜವಾದ ಗುರಿಯಾಗಬೇಕು,ಇದನ್ನು ಕಾಮ-ಕಾಂಚನಗಳ ತ್ಯಾಗದ ಮೂಲಕ ಸಾಧಿಸಬಹುದು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ತ್ಯಾಗಮಯೀ ಅಭಿಪ್ರಾಯ ಪಟ್ಟರು.

ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ “ಶ್ರೀರಾಮಕೃಷ್ಣ ಪರಮಹಂಸರ 191 ನೇ. ಜಯಂತ್ಯುತ್ಸವ” ದ ಪ್ರಯುಕ್ತ ಆಯೋಜಿಸಿದ್ದ ವಿಶೇಷ ಸತ್ಸಂಗ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಶ್ರೀರಾಮಕೃಷ್ಣರ ಜೀವನ ಮತ್ತು ಸಂದೇಶಗಳ ಬಗ್ಗೆ ವಿಶೇಷ ಪ್ರವಚನ ನೀಡಿದರು.

ಅವತಾರ ವರಿಷ್ಠರಾಗಿ ಸರ್ವ ಧರ್ಮಗಳ ಸಾಧನೆಗಳನ್ನು ಮಾಡಿದ ಶ್ರೀರಾಮಕೃಷ್ಣರ ಜೀವನ ಆಧ್ಯಾತ್ಮಿಕ ಅನುಭವಗಳ ಬಹು ದೊಡ್ಡ ಪ್ರಯೋಗ ಶಾಲೆ, ಶ್ರೀರಾಮಕೃಷ್ಣರ ನಾಲ್ಕು ಪ್ರಧಾನ ಮಹಾ ವಾಕ್ಯಗಳನ್ನು ಪಾಲಿಸಬೇಕು. ಸಾಧು-ಸಂತರ ಸತ್ಸಂಗ ಮಾಡಬೇಕು, ಸದಾ ಭಗವಂತನ ಚಿಂತನೆ ಮಾಡಬೇಕು ಎಂದು ತಿಳಿಸಿದರು.

ಜಯಂತೋತ್ಸವದ ಪ್ರಯುಕ್ತ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಎಂ.ಗೀತಾ ನಾಗರಾಜ್ ಮತ್ತು ಯತೀಶ್ ಎಂ ಸಿದ್ದಾಪುರ ಅವರ ನೇತೃತ್ವದಲ್ಲಿ ವಿಶೇಷ ಶ್ರೀರಾಮಕೃಷ್ಣ ಭಜನೆ, 108 ಶ್ರೀರಾಮಕೃಷ್ಣರ ನಾಮಸ್ಮರಣೆ, ದಿವ್ಯತ್ರಯರಿಗೆ ಮಂಗಳಾರತಿ ಮತ್ತು ಅನ್ನಪ್ರಸಾದ ವಿನಿಯೋಗ ನಡೆಯಿತು.

ಕಾರ್ಯಕ್ರಮದಲ್ಲಿ ನೇತಾಜಿ ಪ್ರಸನ್ನ, ಶ್ರೀಮತಿ ಎಚ್ ಲಕ್ಷ್ಮೀದೇವಮ್ಮ, ನಾಗಶಯನಾ ಗೌತಮ್, ಪಂಕಜ, ಸೌಮ್ಯ, ನಾಗರಾಜ್, ಗೀತಾ ವೆಂಕಟೇಶರೆಡ್ಡಿ, ರಾಘವೇಂದ್ರ, ರಶ್ಮಿ, ಪಿ.ಎಸ್ ಮಾಣಿಕ್ಯ, ದೊಡ್ಡಜ್ಜಯ್ಯ, ಮಲ್ಲಿಕಾರ್ಜುನ, ಕವಿತಾ, ಮಾನ್ಯ, ಸಂತೋಷ್, ಚೇತನ್, ಸುಮನಾ,ಜಿ ಯಶೋಧಾ, ಸಂಜನಾ, ಡಾ, ಸಿ.ಟಿ‌ ಬಸವರಾಜಪ್ಪ, ಲಾವಣ್ಯ, ರಮೇಶ್, ರವಿಚಂದ್ರ, ಲೀಲಾವತಿ, ವೀರಮ್ಮ, ಜಯಮ್ಮ, ಮಲ್ಲಮ್ಮ, ವಾಸವಿ, ಲಕ್ಷ್ಮೀ, ಬಸವರಾಜ, ಗೀತಾ ಭಕ್ತವತ್ಸಲ, ಸರಸ್ವತಿ ಗೋವಿಂದರಾಜು, ಗಂಗಾಧರಶೆಟ್ಟಿ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಸದ್ಭಕ್ತರು ಭಾಗವಹಿಸಿದ್ದರು.

ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button