ದಲಿತರಿಗೆ ಭೂಮಿ ಕೊಡಿ ನಮ್ಮ ಭೂಮಿ ನಮ್ಮ ಹಕ್ಕು – ಹೋರಾಟಕ್ಕೆ ಭೇಟಿ ನೀಡಿದ ಶಾಸಕರು ಡಿ.ಎಸ್.ಎಸ್ ರಾಜ್ಯ ನಿಯೋಗಕ್ಕೆ ಮುಖ್ಯ ಮಂತ್ರಿಗಳ ಭೇಟಿಗೆ ಭರವಸೆ ನೀಡಿದರು.
ಎನ್.ಆರ್ ಪುರ ಫೆ.23

ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್ ಪುರ ತಾಲೂಕ ಕಚೇರಿ ಮುಂದೆ ಮಹಾತ್ಮ ಪ್ರೊ, ಬಿ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಆಶ್ರಯದಲ್ಲಿ ದಲಿತರಿಗೆ ಭೂಮಿ ಕೊಡಿ ನಮ್ಮ ಭೂಮಿ ನಮ್ಮ ಹಕ್ಕು ಶಿರ್ಷಿಕೆ ಅಡಿ ಹೋರಾಟ ನಡೆಯುತ್ತಿರುವ ಎಂಟನೇ ದಿನದ ಪ್ರತಿಭಟನೆಗೆ ವಿಜಯನಗರ ಜಿಲ್ಲೆಯ ರಾಜ್ಯ ಸಂಘಟನಾ ಸಂಚಾಲಕರಾದ ದುರ್ಗಾ ದಾಸ್ ಪಿ ರವರು ಹಾಗೂ ಮೈಸೂರು ಜಿಲ್ಲೆಯ ರಾಜ್ಯ ಸಂಘಟನಾ ಸಂಚಾಲಕರಾದ ಕೆ.ನಂಜಪ್ಪ ಬಸವನಗುಡಿ ರವರು ಮೈಸೂರು ಜಿಲ್ಲಾ ಸಂಘಟನಾ ಸಂಚಾಲಕರಾದ ಬಿ.ರಂಗಸ್ವಾಮಿ ರವರು ದಿನಾಂಕ 23.02.2026 ರಂದು ಪ್ರತಿಭಟನೆ ನಡೆಸುತ್ತಿರುವಾಗ ಶೃಂಗೇರಿ ಕ್ಷೇತ್ರದ ಶಾಸಕರಾದ ಟಿ.ಡಿ ರಾಜೇಗೌಡ ರವರು ಆಗಮಿಸಿ ಪ್ರತಿಭಟನೆಗೆ ಬೆಂಬಲ ಸೂಚಿಸಿ ಭೂಮಿಗಾಗಿ ಹೋರಾಟ ಸಮಂಜಸವಾಗಿದೆ ದಲಿತರು ಭೂಮಿ ಮಾಲೀಕರಾಗ ಬೇಕು ಸರ್ಕಾರದ ಪ್ರತಿ ನಿಧಿಯಾಗಿ ನಾನು ಸಂಬಂಧಪಟ್ಟವರೊಂದಿಗೆ ಮಾತನಾಡಿ ನಮ್ಮ ಭೂಮಿ ನಮ್ಮ ಹಕ್ಕು ಎಂಬಂತೆ ಭೂಮಿ ಕೊಡಿಸುವ ಭರವಸೆ ನೀಡಿದರು.

ಮುಂದುವರೆದು ಮಹಾತ್ಮ ಪ್ರೊಫೆಸರ್, ಬಿ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳ ನಿಯೋಗವನ್ನು ಕಂದಾಯ ಸಚಿವರು ಹಾಗೂ ಕೃಷಿ ಸಚಿವರು ಹಾಗೂ ಮುಖ್ಯ ಮಂತ್ರಿಗಳೊಂದಿಗೆ ಭೇಟಿ ಮಾಡಿಸುವುದಾಗಿ ಹಲವಾರು ಸಮಸ್ಯೆಗಳನ್ನು ಬಗೆಹರಿಸುವುದಾಗಿ ದಲಿತರಿಗೆ ಭೂಮಿ ಕೊಡಿಸುತ್ತೇನೆ ಎಂದು ಪ್ರತಿಭಟನಾಕಾರರಿಗೆ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ರಾಜ್ಯ ಸಂಚಾಲಕರಾದ ತರೀಕೆರೆ ಏನ್ ವೆಂಕಟೇಶ್ ರವರು ಮಾತನಾಡಿ ದಲಿತರಿಗೆ ಭೂಮಿ ಕೊಡುವವರೆಗೂ ಯಾವುದೇ ಕಾರಣಕ್ಕೂ ಪ್ರತಿಭಟನೆಯನ್ನು ಹಿಂಪಡೆಯುವುದಿಲ್ಲ ಎಂದು ಖಡಕ್ಕಾಗಿ ಉತ್ತರಿಸಿದರು.

ರಾಜ್ಯ ಸಂಘಟನಾ ಸಂಚಾಲಕರಾದ ಕೆ.ನಂಜಪ್ಪ ಬಸವನಗುಡಿ ರವರು ಮಾತನಾಡುತ್ತಾ ಈ ಪ್ರತಿಭಟನೆಯನ್ನು ಯಾವುದೇ ಕಾರಣಕ್ಕೂ ರಾಜಿಯಾಗಲು ಬಿಡುವುದಿಲ್ಲ ದಲಿತರಿಗೆ ಭೂಮಿ ಸಿಗುವ ವರೆಗೂ ಕೂಡ ಹಂತ ಹಂತವಾಗಿ ವಿನೂತನ ಚಳುವಳಿಯನ್ನು ಪ್ರಾರಂಭಿಸುವುದಾಗಿ ಕರೆ ಕೊಟ್ಟರು.

ಎನ್.ಆರ್ ಪುರ ತಾಲೂಕ ಸಂಚಾಲಕರಾದ MJ ಸಿಜು ರವರು ರಾಜ್ಯ ಮಹಿಳಾ ಸಂಚಾಲಕಿ M.V ಭವಾನಿ ಬಾಳೆಹೊನ್ನೂರು ಮತ್ತು ನೂರಾರು DSS ಕಾರ್ಯಕರ್ತರು ಮಹಿಳಾ ಕಾರ್ಯಕರ್ತರು ಹಾಜರಿದ್ದರು ಎಂದು ವರದಿಯಾಗಿದೆ.

