ದಲಿತರು ಭೂಮಿಗಾಗಿ ವಿನೂತನ – ಗಂಜಿ ಪ್ರತಿಭಟನೆ ತಹಶೀಲ್ದಾರ್ ಗೆ ಮನವಿ.
ನರಸಿಂಹರಾಜಪುರ ಫೆ.24

ರಾಜ್ಯದಲ್ಲಿ ಹಸಿವು ನೀಗಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅನ್ನಭಾಗ್ಯ ಯೋಜನೆ ಜಾರಿಗೆ ತಂದಿದ್ದಾರೆ. ದಲಿತರಿಗೆ ಭೂಮಿಯ ಹಕ್ಕು ಯೋಜನೆ ಜಾರಿಗೆ ತರಲಿ ಎಂದು ಮಹಾತ್ಮ ಪ್ರೊ, ಬಿ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕರಾದ ತರೀಕೆರೆ ಎನ್.ವೆಂಕಟೇಶ್ ಹೇಳಿದರು.ಅವರು ಇಂದು ಭೂಮಿಗಾಗಿ ಹೋರಾಟ ಅಹೋ ರಾತ್ರಿ ಧರಣಿ ಸತ್ಯಾಗ್ರಹ ಉದ್ದೇಶಿಸಿ ಮಾತನಾಡಿದರು.
ಇಂದಿಗೆ ಪ್ರತಿಭಟನೆ ಆಹೋರಾತ್ರಿ ಧರಣಿ ಸತ್ಯಾಗ್ರಹ 9 ನೇ. ದಿನಕ್ಕೆ ಕಾಲಿಟ್ಟಿದ್ದು ನಾವೆಲ್ಲರೂ ಗಂಜಿ ಸೇವಿಸುತ್ತಾ ವಿನೂತನವಾಗಿ ಪ್ರತಿಭಟನೆ ಮಾಡುತ್ತಿದ್ದೇವೆ ಎಂದು ಹೇಳಿದರು. ನಾಳೆ ಅರೆಬೆತ್ತಲೆ ಪ್ರತಿಭಟನೆ ಮಾಡುತ್ತೇವೆ ನಾಡಿದ್ದು ಪೊರಕೆ ಪ್ರತಿಭಟನೆ ಮಾಡುತ್ತೇವೆ ಹೀಗೆ ಪ್ರತಿ ದಿನವೂ ವಿನೂತನವಾಗಿ ಪ್ರತಿಭಟನೆ ಮಾಡುತ್ತೇವೆ ಎಂದು ಹೇಳಿದರು.
ಒಂಬತ್ತನೇ ದಿನದ ಆಹೋರಾತ್ರಿ ಭೂಮಿ ಚಳುವಳಿಗೆ ಮೈಸೂರಿನಿಂದ ಆಗಮಿಸಿದ್ದ ರಾಜ್ಯ ಸಂಘಟನಾ ಸಂಚಾಲಕರಾದ ಕೆ.ನಂಜಪ್ಪ ಬಸವನಗುಡಿ ರವರು ಮಾತನಾಡಿ ದಲಿತ ಸಂಘದ ಪಿತಾಮಹ ಪ್ರೊ, ಬಿ.ಕೃಷ್ಣಪ್ಪ ರವರು ಭೂಮಿ ಹೋರಾಟ ಮಾಡಿದ ಫಲ ಭೂ ಪರಬಾರೆ ಕಾಯಿದೆ ಜಾರಿಗೆ ಬಂದಿತು ಆದ್ದರಿಂದ ನಮಗೆ ಭೂಮಿ ಕೊಡುವ ವರೆಗೂ ಪ್ರತಿಭಟನೆ ಮುಂದುವರಿಸುತ್ತೇವೆ ಎಂದು ಹೇಳಿದರು.
ವಿಜಯನಗರ ಜಿಲ್ಲೆಯಿಂದ ಆಗಮಿಸಿದ್ದ ರಾಜ್ಯ ಸಂಘಟನಾ ಸಂಚಾಲಕರಾದ ದುರ್ಗಾ ದಾಸ್ ಪಿ ರವರು ಮಾತನಾಡಿ ನಮ್ಮ ಹಕ್ಕುಗಳನ್ನು ಪಡೆಯಲು ವಿಭಿನ್ನ ರೀತಿಯಲ್ಲಿ ಚಳುವಳಿ ಮಾಡುತ್ತಿದ್ದೇವೆ ಭೂಮಿ ಸಿಗುವರೆಗೂ ಧರಣಿ ನಿಲ್ಲಿಸುವುದಿಲ್ಲ. ಜಿಲ್ಲಾಧಿಕಾರಿಗಳು ಧರಣಿ ಸ್ಥಳಕ್ಕೆ ಆಗಮಿಸಬೇಕು ಎಂದು ಆಗ್ರಹಿಸಿದರು.
ತುಮಕೂರು ಜಿಲ್ಲಾ ಸಂಚಾಲಕರಾದ ಓಂಕಾರ ಮೂರ್ತಿ ಮಾತನಾಡಿ ಪ್ರತಿಭಟನೆ ಮಾಡುತ್ತಿರುವ ಭೂಹೀನ ದಲಿತರಿಗೆ ಭೂಮಿ ಕೂಡಲೇ ಮಂಜೂರಿಸ ಬೇಕು ಅಲ್ಲಿಯ ವರೆಗೂ ಸಂಘಟಿತ ಹೋರಾಟ ಮಾಡುತ್ತೇವೆ ರಾಜ್ಯದ ಎಲ್ಲಾ ಜಿಲ್ಲೆಗಳಿಂದಲೂ ಸಹ ಸಂಘಟನೆಯ ಮುಖಂಡರು ಈ ಪ್ರತಿಭಟನೆಗೆ ಆಗಮಿಸುತ್ತಿದ್ದಾರೆ ಭೂಮಿ ಸಿಗುವ ವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ಹೇಳಿದರು.
ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದ ತಹಶೀಲ್ದಾರ್ ಡಾ, ನೂರುಲ್ ಉದಾ ಮಾತನಾಡಿ ಪ್ರತಿಭಟನಾಕಾರರು ತಮ್ಮ ಆರೋಗ್ಯದ ಕಡೆಯೂ ಗಮನ ಕೊಡಿ 9 ದಿನಗಳಿಂದ ಯಾವುದೇ ತೊಂದರೆ ಯಾಗಿಲ್ಲ ಎಸ್.ಐ.ಟಿ ಮುಗಿದ ಮೇಲೆ ಕ್ರಮವಾಗುತ್ತದೆ ನೀವು ನೀಡಿದ ಮನವಿ ಪತ್ರವನ್ನು ಮೇಲಧಿಕಾರಿಗಳ ಮೂಲಕ ಸರ್ಕಾರಕ್ಕೆ ಕಳುಹಿಸುತ್ತೇನೆ ಎಂದು ಹೇಳಿದರು.
ರಾಜ್ಯ ಸಮಿತಿ ಸದಸ್ಯರಾದ ಎಸ್ ರಾಜೇಶ್ ಕರ್ನಾಟಕ ದಲಿತ ಮಹಿಳಾ ಒಕ್ಕೂಟದ ರಾಜ್ಯ ಸಂಚಾಲಕಿಯಾದ ಎಂ.ವಿ ಭವಾನಿ ತಾಲೂಕ ಸಂಚಾಲಕರಾದ ಎಂ.ಜೆ ಸಿಜು ತಾಲೂಕ ಸಂಘಟನಾ ಸಂಚಾಲಕರಾದ ಮೃತ್ಯುಂಜಯ, ಎಸ್ ರಾಜು, ಜಯರಾಮ್, ಖಾದಿರ್, ಮೀನ್ ಕ್ಯಾಂಪ್ ರವಿ, ಕುಮಾರ ಹೊನ್ನಕುಡಿಗೆ ತಿಮ್ಮಯ್ಯ, ವಾಸಂತಿ, ವೆನಿಲಾ, ರೇಣುಕಾ, ಶೋಭಾ ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಎನ್.ವೆಂಕಟೇಶ್. ತರೀಕೆರೆ ಚಿಕ್ಕಮಗಳೂರು

