ಶ್ರೀಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದಲ್ಲಿ ಶ್ರೀರಾಮಕೃಷ್ಣರ 191 ನೇ. – ಜಯಂತ್ಯುತ್ಸವ ಆಚರಣೆ.
ಚಳ್ಳಕೆರೆ ಫೆ.24

ನಗರದ ವಾಲ್ಮೀಕಿ ನಗರದ ಶ್ರೀಮಲ್ಲಿಕಾರ್ಜುನಸ್ವಾಮಿ ದೇವಸ್ಥಾನದ ಆವರಣದಲ್ಲಿ ಮಾರ್ಚ್ 1 ರ ಭಾನುವಾರ ಬೆಳಗ್ಗೆ 10:30 ರಿಂದ ಮಧ್ಯಾಹ್ನ 1:30 ರ ವರೆಗೆ ತ್ಯಾಗರಾಜ ನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದಿಂದ “ಶ್ರೀರಾಮಕೃಷ್ಣ ಪರಮ ಹಂಸರ 191 ನೇ. ಜಯಂತ್ಯುತ್ಸವ” ದ ಪ್ರಯುಕ್ತ ವಿಶೇಷ ಭಜನೆ ಮತ್ತು ಪ್ರವಚನ ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು.
ಬೆಳಿಗ್ಗೆ 10:30 ರಿಂದ ಬೆಂಗಳೂರಿನ ಶ್ರೀಶಾರದಾದೇವಿ ಪ್ರಗತಿ ಮಂದಿರದ ವಿದ್ಯಾರ್ಥಿನಿ ಕುಮಾರಿ ಚಿನ್ಮಯಿ ರಾವ್ ಮತ್ತು ಸಂಗಡಿಗರಿಂದ “ಶ್ರೀರಾಮಕೃಷ್ಣ ಗಾನ ಸುಧೆ” 11:30 ರಿಂದ ಹಿರಿಯೂರಿನ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ಚೈತನ್ಯಮಯೀ ಅವರಿಂದ “ಅವತಾರ ವರಿಷ್ಠ ಶ್ರೀರಾಮಕೃಷ್ಣ” ಎಂಬ ವಿಷಯವಾಗಿ ಪ್ರವಚನ 12:15 ರಿಂದ “ಸ್ವಾಮಿ ವಿವೇಕಾನಂದರ ಗುರು” ಎಂಬ ವಿಷಯವಾಗಿ ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ತ್ಯಾಗಮಯೀ ಅವರು ಪ್ರವಚನ ನಡೆಸಿ ಕೊಡಲಿದ್ದು.

ಮಧ್ಯಾಹ್ನ 1:30 ಕ್ಕೆ ಅನ್ನಪ್ರಸಾದ ವಿನಿಯೋಗ ನಡೆಯಲಿದ್ದು ಸಾರ್ವಜನಿಕರು ಕಾರ್ಯಕ್ರಮದ ಸದುಪಯೋಗ ಪಡೆದು ಕೊಳ್ಳುವಂತೆ ತ್ಯಾಗರಾಜ ನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಮುಖ್ಯಸ್ಥರಾದ ಶ್ರೀಮತಿ ಎಚ್.ಲಕ್ಷ್ಮೀದೇವಮ್ಮ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

