ಶಾಸಕಾಂಗ & ಕಾರ್ಯಾಂಗದ ಕಾರ್ಯ ವೈಖರಿ ಎಸ್.ಐ.ಟಿ ಎಂಬ ಪೆಡಂಭೂತ ದಲಿತರನ್ನು ದಾರಿ ತಪ್ಪಿಸುತ್ತದೆ – ದಲಿತರೇ ಜಾಗೃತರಾಗಿ ಮಹಾದೇವ ಪ್ರಸಾದ್ ಎಚ್ಚರಿಕೆ.
ನರಸಿಂಹರಾಜಪುರ ಫೆ.25

ದಲಿತರು ಭೂಮಿಗಾಗಿ ಹೋರಾಟ ಮಾಡುತ್ತಿದ್ದಾರೆ ಆದರೆ ಸ್ಥಳಕ್ಕೆ ಆಗಮಿಸಿದ ತಹಸಿಲ್ದಾರ್, ಉಪ ವಿಭಾಗಾಧಿಕಾರಿಗಳು, ಶಾಸಕರು ಚಳುವಳಿ ನಿರತರ ಬಳಿ ಬಂದು ಎಸ್.ಐ.ಟಿ ಮುಗಿದ ಮೇಲೆ ಭೂಮಿ ಲಭ್ಯವಿದ್ದರೆ ಭರವಸೆ ನೀಡುತ್ತೇವೆ ಎಂದು ದಲಿತರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಮಹಾತ್ಮ ಪ್ರೊ, ಬಿ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಖಜಾಂಚಿಯಾದ ಬೆಂಗಳೂರಿನ ಮಹಾದೇವ್ ಪ್ರಸಾದ್ ರವರು ಹೇಳಿದರು.
ಅವರು ಇಂದು ಪಟ್ಟಣದ ತಾಲೂಕ ಆಡಳಿತ ಸೌಧ ಎದುರು ನಡೆಯುತ್ತಿರುವ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು. ಕಾಫಿ ಬೆಳೆಗಾರರು, ಶ್ರೀಮಂತ ರೈತರು, ಭೂ ಮಾಲೀಕರು ಅಕ್ರಮವಾಗಿ ನೂರಾರು ಎಕರೆ ಪ್ರದೇಶವನ್ನು ಒತ್ತುವರಿ ಮಾಡಿರುವುದನ್ನು ಗುರುತಿಸಲು ತನಿಖೆ ಮಾಡಲು ಮತ್ತು ಕಂದಾಯ ಮತ್ತು ಅರಣ್ಯ ಇಲಾಖೆ ಯ ಜಂಟಿ ಸರ್ವೆ ಕಾರ್ಯ ಮಾಡುತ್ತಿರುವುದು. ಆದರೆ 1969 ರ ನಿಯಮ 5 ರ ಅಡಿಯಲ್ಲಿ ದಲಿತರಿಗೆ ಭೂಮಿ ನೀಡಲು ಯಾವುದೇ ಸಂಬಂಧವಿರುವುದಿಲ್ಲ, ಎಸ್.ಐ.ಟಿ ಎಂದು ದಲಿತರನ್ನು ದಾರಿ ತಪ್ಪಿಸ ಬೇಡಿ ಎಂದು ಹೇಳಿದರು.
ಪ್ರತಿಭಟನೆಗೆ ಬೆಂಗಳೂರಿನ ಯಲಹಂಕ ದಿಂದ ಆಗಮಿಸಿದ್ದ ರಾಜ್ಯ ಸಂಘಟನಾ ಸಂಚಾಲಕರಾದ ಆದಿ ನಾರಾಯಣಪ್ಪ ಮಾತನಾಡಿ ಭೂಮಿಗಾಗಿ ಹೋರಾಟ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಸಂಘದ ಮುಖಂಡರು ಆಗಮಿಸುತ್ತಿದ್ದು ಹೋರಾಟದ ತೀವ್ರತೆ ಹೆಚ್ಚಾಗುತ್ತಿದೆ ಮುಂದಿನ ದಿನಗಳಲ್ಲಿ ರಾಜ್ಯ ಮಟ್ಟದಲ್ಲಿ ಪ್ರತಿಭಟನೆಗಳು ಮಾಡ ಬೇಕಾಗುತ್ತದೆ ಎಂದರು.
ಸಂಘದ ಕಾನೂನು ಸಲಹೆಗಾರರಾದ ವಕೀಲರಾದ ನವೀನ್ ಕುಮಾರ್ ಮಾತನಾಡಿ ಉಪ ವಿಭಾಗಾಧಿಕಾರಿಗಳು ಎಸ್.ಐ.ಟಿ ಮುಗಿದ ನಂತರ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳುತ್ತಿದ್ದಾರೆ ಭೂಮಿ ಕೊಡುವ ವರೆಗೂ ಹೋರಾಟ ಮುಂದುವರೆಯುತ್ತದೆ. ಸಂಸ್ಥಾಪಕ ರಾಜ್ಯ ಸಂಚಾಲಕರಾದ ತರೀಕೆರೆ.ಎನ್ ವೆಂಕಟೇಶ್ ಅವರ ನೇತೃತ್ವದಲ್ಲಿ ರಾಜ್ಯ ಮಟ್ಟದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಹೋರಾಟ ಮಾಡುತ್ತೇವೆ ಎಂದು ಹೇಳಿದರು.
ಬೆಂಗಳೂರು ಜಿಲ್ಲಾ ಸಂಚಾಲಕರಾದ ಪ್ರವೀಣ್.ಕುಮಾರ್ ಮಾತನಾಡಿ ಇಂದು ಭೂಮಿಗಾಗಿ ಹೋರಾಟ ಅಹೋ ರಾತ್ರಿ ಅನಿರ್ದಿಷ್ಟ ಕಾಲ ಧರಣಿ ಸತ್ಯಾಗ್ರಹ ಮತ್ತು ಪ್ರತಿಭಟನೆ 10 ನೇ. ದಿನಕ್ಕೆ ಕಾಲಿಟ್ಟಿರುತ್ತದೆ ಸರ್ಕಾರ ಕೊಡುತ್ತಿರುವುದು ಭಿಕ್ಷೆಯಲ್ಲ ಇದು ನಮ್ಮ ಹಕ್ಕು ನ್ಯಾಯ ಮತ್ತು ಭೂಮಿಯ ಹಕ್ಕು ಸಿಗುವ ವರೆಗೂ ಹೋರಾಡುತ್ತೇವೆ ಎಂದು ಹೇಳಿದರು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ್ದ ಉಪ ವಿಭಾಗಾಧಿಕಾರಿ ನಟೇಶ್ ರವರು ನಿಮ್ಮ ಬೇಡಿಕೆಗಳ ಕುರಿತು ಮೇಲಧಿಕಾರಿಗಳಿಗೆ ಸರ್ಕಾರಕ್ಕೆ ತಿಳಿಸುತ್ತೇವೆ ಎಂದು ಹೇಳಿದರು.
ರಾಜ್ಯ ಸಂಚಾಲಕರಾದ ತರೀಕೆರೆ ವೆಂಕಟೇಶ್ ರವರು ದಲಿತರಿಗೆ ಕಾಯ್ದಿರಿಸಿರುವ ಭೂಮಿಯನ್ನು ಕೊಡುತ್ತೇವೆ ಎಂದು ಪ್ರಸ್ತಾವನೆ ಮಾಡಿರಿ ಹಾಗೂ ಜಿಲ್ಲಾಧಿಕಾರಿಗಳು ಬರುವ ವರೆಗೂ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಹೇಳಿದರು.
ನಂತರ ಸಮಾಜ ಕಲ್ಯಾಣ ಅಧಿಕಾರಿ ಎ.ಕೆ ಪಾಟೀಲ್ರವರು ಆಗಮಿಸಿ ದಲಿತರ ಹೋರಾಟ ಕುರಿತು ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳ ಗಮನಕ್ಕೆ ತರುತ್ತೇವೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಅಂಗ ಸಂಸ್ಥೆಯ ಮಹಿಳಾ ಒಕ್ಕೂಟದ ರಾಜ್ಯ ಸಂಚಾಲಕಿ ಎಂ.ವಿ ಭವಾನಿ, ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಮಿತಿ ಸದಸ್ಯರಾದ ಎಸ್.ರಾಜೇಶ್, ತಾಲೂಕ ಸಂಚಾಲಕರಾದ ಸಿಜು ತಾಲೂಕ ಸಂಘಟನಾ ಸಂಚಾಲಕರಾದ ಮೃತ್ಯುಂಜಯ, ಎಸ್ ರಾಜು, ರವಿ, ಕಧೀರ್, ಕುಮಾರ ಹಾಗೂ ಜಿಲ್ಲಾ ಸಂಘಟನಾ ಸಂಚಾಲಕರಾದ ಅಬ್ದುಲ್ ರೆಹಮಾನ್ ತುಮಕೂರು ಜಿಲ್ಲಾ ಸಂಚಾಲಕರಾದ ಓಂಕಾರ ಮೂರ್ತಿ ಮತ್ತು ವಾಸಂತಿ, ರೇಣುಕಾ, ವೆನಿಲ್ಲಾ ಮುಂತಾದವರು ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಎನ್.ವೆಂಕಟೇಶ್.ತರೀಕೆರೆ ಚಿಕ್ಕಮಗಳೂರು

