🚨BREAKING NEWS, ಇತಿಹಾಸದಲ್ಲೇ ಮೊದಲು! ವಿಧಾನ ಸೌಧದ ಮೆಟ್ಟಿಲುಗಳ – ಮೇಲೆ ‘ಯಕ್ಷ ವೈಭವ’🚨

ಬೆಂಗಳೂರು/ಉಡುಪಿ ಫೆ.26

ರಾಜ್ಯದ ಶಕ್ತಿ ಕೇಂದ್ರವಾದ ಬೆಂಗಳೂರಿನ ವಿಧಾನ ಸೌಧದ ಮೆಟ್ಟಿಲುಗಳು ಮೇಲೆ ಇದೇ ಮೊದಲ ಬಾರಿಗೆ ಕರಾವಳಿಯ ಗಂಡು ಕಲೆ ‘ಯಕ್ಷಗಾನ’ ದ ಅಬ್ಬರಕ್ಕೆ ಸಾಕ್ಷಿ ಯಾಗಲಿವೆ..!

ಕರ್ನಾಟಕ ಯಕ್ಷಗಾನ ಅಕಾಡೆಮಿಯ ಆಶಯದಂತೆ, ಮುಂಬರುವ ಮೇ ತಿಂಗಳಲ್ಲಿ ವಿಧಾನ ಸೌಧದ ಮುಂಭಾಗದಲ್ಲಿ ಅದ್ಧೂರಿ ಯಕ್ಷಗಾನ ಪ್ರದರ್ಶನವನ್ನು ಆಯೋಜಿಸಲು ಸಭಾಧ್ಯಕ್ಷರಾದ ಯು.ಟಿ ಖಾದರ್ ಅವರು ಹಸಿರು ನಿಶಾನೆ ತೋರಿದ್ದಾರೆ.

🎭 ಸುದ್ದಿಯ ಪ್ರಮುಖ ಮುಖ್ಯಾಂಶಗಳು:

ಸ್ಥಳ:-

ವಿಧಾನ ಸೌಧದ ಭವ್ಯ ಮೆಟ್ಟಿಲುಗಳ ಮೇಲೆ.

ಸಮಯ:-

ಮುಂಬರುವ ಮೇ ತಿಂಗಳು. ಸಹಕಾರ:-ವಿಧಾನ ಸಭಾ ಸಚಿವಾಲಯ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ. ವಿಶೇಷತೆ:-ಇದೇ ಮೊದಲ ಬಾರಿಗೆ ಉಭಯ ತಿಟ್ಟುಗಳ (ತೆಂಕು ಮತ್ತು ಬಡಗು) ಖ್ಯಾತ ಕಲಾವಿದರ ಸಮಾಗಮ.

🤝 ಸ್ಪೀಕರ್ ಭೇಟಿ ಮತ್ತು ಮಹತ್ವದ ನಿರ್ಧಾರ:-

ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾದ ಡಾ, ತಲ್ಲೂರು ಶಿವರಾಮ ಶೆಟ್ಟಿ ಅವರ ನೇತೃತ್ವದ ನಿಯೋಗವು ಮಂಗಳವಾರ ವಿಧಾನಸೌಧದಲ್ಲಿ ಸ್ಪೀಕರ್ ಯು.ಟಿ ಖಾದರ್ ಅವರನ್ನು ಭೇಟಿ ಮಾಡಿ ಈ ಕುರಿತು ಸುದೀರ್ಘ ಸಮಾಲೋಚನೆ ನಡೆಸಿತು. ಅಕಾಡೆಮಿಯ ಮನವಿಗೆ ತಕ್ಷಣ ಸ್ಪಂದಿಸಿದ ಸ್ಪೀಕರ್ ಅವರು, ರಾಜ್ಯದ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿ ಬಿಂಬಿಸುವ ಯಕ್ಷಗಾನ ಪ್ರದರ್ಶನಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

🏛️ ಜನ ಪ್ರತಿನಿಧಿಗಳಿಗಾಗಿ ಯಕ್ಷಗಾನದ ರಸ ದೌತಣ:-

ಕೇವಲ ಸಾರ್ವಜನಿಕರಿಗಷ್ಟೇ ಅಲ್ಲದೆ, ರಾಜ್ಯದ ಎಲ್ಲಾ ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರು ಒಟ್ಟಾಗಿ ಕುಳಿತು ವೀಕ್ಷಿಸಲು ಅನುಕೂಲವಾಗುವಂತೆ ಈ ಕಾರ್ಯಕ್ರಮವನ್ನು ರೂಪಿಸಲಾಗುತ್ತಿದೆ. ಹೆಸರಾಂತ ಮತ್ತು ಹಿರಿಯ ಯಕ್ಷಗಾನ ಕಲಾವಿದರು ಈ ಪ್ರದರ್ಶನದಲ್ಲಿ ಭಾಗವಹಿಸಲಿದ್ದು, ಬೆಂಗಳೂರಿನ ಹೃದಯ ಭಾಗದಲ್ಲಿ ಕರಾವಳಿ-ಮಲೆನಾಡಿನ ಕಲೆ ಮೇಳೈಸಲಿದೆ.

👥 ಸಭೆಯಲ್ಲಿ ಉಪಸ್ಥಿತರಿದ್ದ ಗಣ್ಯರು:-

ಈ ಮಹತ್ವದ ಸಮಾಲೋಚನೆಯ ಸಂದರ್ಭದಲ್ಲಿ

ವಿಶಾಲಾಕ್ಷಿ:-

ಕಾರ್ಯದರ್ಶಿಗಳು, ವಿಧಾನ ಸಭಾ ಸಚಿವಾಲಯ.

ನಮೃತಾ ಎನ್:-

ರಿಜಿಸ್ಟ್ರಾರ್ ಯಕ್ಷಗಾನ ಅಕಾಡೆಮಿ.

ಸದಸ್ಯರು:-

ಕೊಪ್ಪಲ ಮೋಹನ್ ಕದ್ರಿ, ಸುಧಾಕರ ಶೆಟ್ಟಿ, ಪುಟ್ಟಸ್ವಾಮಿ.ಎ ಆರ್.

“ರಾಜ್ಯದ ಶಾಸಕಾಂಗದ ಶಕ್ತಿ ಕೇಂದ್ರದಲ್ಲಿ ಕಲೆ ಮತ್ತು ಸಂಸ್ಕೃತಿಯ ಅನಾವರಣ ವಾಗುತ್ತಿರುವುದು ಹೆಮ್ಮೆಯ ವಿಷಯ. ಇದು ಯಕ್ಷಗಾನದ ಇತಿಹಾಸದಲ್ಲಿ ಒಂದು ಮೈಲಿಗಲ್ಲಾಗಲಿದೆ.”

ವರದಿ:ಆರತಿ.ಗಿಳಿಯಾರು.ಉಡುಪಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button