ಮಾನವ ಜನ್ಮ ದೊಡ್ಡದು ವ್ಯರ್ಥ ಮಾಡದೇ – ಅರ್ಥೈಸಿ ಕೊಳ್ಳಿರಿ ಮಾನವರೆ.
ಸುಗೂರ.ಎನ್ ಫೆ.26

ಕಲಬುರಗಿ ಚಿತ್ತಾಪುರ ತಾಲೂಕಿನ ಸುಗೂರ ಎನ್ ಗ್ರಾಮದಲ್ಲಿ ಸದ್ಗುರು ಶ್ರೀ ಭೋಜಲಿಂಗೇಶ್ವರ ಜಾತ್ರಾ ಮಹೋತ್ಸವ ಮತ್ತು ಭವ್ಯ ರಥೋತ್ಸವ ಶ್ರೀಮಠದ ಪೀಠಾದಿಪತಿಗಳಾದ ಪರಮ ಪೂಜ್ಯ ಶ್ರೀ ಹಿರಗಪ್ಪ ತಾತನವರ ಘನ ಅಧ್ಯಕ್ಷತೆಯಲ್ಲಿ ಜರುಗಿತ್ತು.
84 ಲಕ್ಷ ಜೀವ ರಾಶಿಗಳಲ್ಲೇ ಮಾನವ ಜನ್ಮ ಶ್ರೇಷ್ಠವಾದದ್ದು. ಅದನ್ನು ವ್ಯರ್ಥ ಮಾಡಿಕೊಳ್ಳ ಬಾರದು ಎಂದು ದಿವ್ಯ ಸಾನಿಧ್ಯ ವಹಿಸಿದ ಚರಂತಿಮಠ ಕೆರೂರ ಶ್ರೀ ಷ.ಬ್ರ ಡಾ, ಶಿವಕುಮಾರ್ ಶಿವಾಚಾರ್ಯ ಮಹಾ ಸ್ವಾಮಿಗಳು ಭಕ್ತರಿಗೆ ಕಿವಿಮಾತು ಹೇಳಿದರು.
ಇಲ್ಲಿಯ ಸುಗೂರ ಎನ್ ಗ್ರಾಮದ ಸದ್ಗುರು ಶ್ರೀ ಭೋಜಲಿಂಗೇಶ್ವರ ಮಠದ ಪಕ್ಕದಲ್ಲಿ ನಿರಂತರವಾಗಿ ಐದು ದಿನಗಳ ಜಾತ್ರಾ ಮಹೋತ್ಸವ, ಸದ್ಗುರು ಸಚ್ಚಿದಾನಂದ ನಿತ್ಯ ನಿರಂಜನ ಸ್ವಯಂ ಸಿದ್ದ ಶರಣ ಶ್ರೀ ಭೋಜಲಿಂಗೇಶ್ವ ಮುತ್ಯಾನ ಜಾತ್ರಾ ಮಹೋತ್ಸವ ಹಾಗೂ ಭವ್ಯ ರಥೋತ್ಸವ ಮತ್ತು ಸುವಿಚಾರ ಚಿಂತನ ಕಾರ್ಯಕ್ರಮ ಸಮಾರೋಪದ ಉದ್ಘಾಟನಾ ಸಮಾರಂಭದ ದಿವ್ಯ ಉದ್ಘಾಟನಾ ಶ್ರೀ. ಷ.ಬ್ರ ಅಭಿನವ ಕಾಡಸಿದ್ಧೇಶ್ವರ ಶಿವಾಚಾರ್ಯ ಮಹಾ ಸ್ವಾಮಿಗಳು ಮರಡಿಮಠ ಗುಳೇದಗುಡ್ಡ ಅವರು ಸಹ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಆಧ್ಯಾತ್ಮ ಜ್ಞಾನ ಇಲ್ಲದ ವ್ಯಕ್ತಿಯ ಬದುಕು ಪಶುವಿನಂತೆ ಆಗುತ್ತದೆ. ಆತ ಅರಾಜಕತೆ ಉಂಟು ಮಾಡುತ್ತಾನೆ. ಹೀಗೆ ಆಗ ಬಾರದೆಂದರೆ, ಆಧ್ಯಾತ್ಮದ ಕಡೆಗೆ ಸಾಗಬೇಕು. ಗುರುವಿನ ಸಂದೇಶ ಆಲಿಸಬೇಕು ಎಂದು ತಿಳಿಸಿದರು.

ಜೀವನದ ಸಾರ್ಥಕತೆಗೆ ಗುರು ಕಾರುಣ್ಯಕ್ಕೆ ಪಾತ್ರ ರಾಗಬೇಕು. ಧರ್ಮದ ಕಾರ್ಯಗಳಲ್ಲಿ ತೊಡಗಿಸಿ ಕೊಳ್ಳಬೇಕು ಎಂದು ತಿಳಿಸಿದರು.
ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಸುಗೂರ.ಎನ್ ಗ್ರಾಮದಲ್ಲಿ ಮೊದಲಿಗೆ ಸ್ವಾಮೀಜಿ ಅವರ ಹಿತ ನುಡಿ ಪ್ರಚಾರ ಮಾಡಿದವರು ಪವಾಡ ಪುರುಷ ಸದ್ಗುರು ಎಂದು ಪಾವನ ಸಾನಿಧ್ಯ ಘನ ಅಧ್ಯಕ್ಷತೆ ವಹಿಸಿದ ಪರಮ ಪೂಜ್ಯ ಶ್ರೀ ಶ್ರೀ ಹಿರಗಪ್ಪ ತಾತನವರು ನೇತೃತ್ವದಲ್ಲಿ ಭವ್ಯ ರಥೋತ್ಸವ (ತೇರು) ಎಳೆಯುವ ಮೂಲಕ ಜಿಲ್ಲೆಯಲ್ಲಿ ಪವಾಡ ಪುರುಷ ಶ್ರೀ ಸದ್ಗುರು ಶ್ರೀ ಭೋಜಲಿಂಗೇಶ್ವರ ಅಜ್ಜ (ಮುತ್ಯಾ) ಅವರ ಶಿಷ್ಯ ಬಳಗ ವ್ಯಾಪಕವಿದೆ. ಅವರು ಹಗಲಿರುಳು ಪರಿಶ್ರಮ ಪಟ್ಟು ಗುರು ಸಂಪ್ರದಾಯ ಬೆಳೆಸಿದ್ದರಿಂದಲೇ ವೇದಾಂತ ಪರಂಪರೆ ಬೆಳೆದಿದೆ ಎಂದು ಗುಳೇದಗುಡ್ಡ ಪೂಜ್ಯರು ತಿಳಿಸಿದರು.
ಪ್ರಾಣಿ, ಪಕ್ಷಿಗಳ ಶರೀರ ಆಧ್ಯಾತ್ಮ ಸಾಧನೆಗೆ ಸಾಧನ ಆಗಲಾರದು. ವಿವೇಕ ಸಂಪನ್ನ ಮನುಷ್ಯನ ಶರೀರ ಪಾರಮಾರ್ಥ ಸಾಧನೆಯ ಪರಮ ಸಾಧನವಾಗಿದೆ. ಹೀಗಾಗಿ ಗುರು, ಹಿರಿಯ ಮಾರ್ಗದರ್ಶನದಲ್ಲಿ ಸಾಧನೆ ಮಾಡಬೇಕು ಎಂದು ಹೇಳಿದರು. ಬೆಳಿಗ್ಗೆ ರುದ್ರಾಭಿಷೇಕ, ಸ್ತೋತ್ರ, ಮಹಾ ಮಂಗಳಾರತಿ. ಕಾರ್ಯಕ್ರಮ ಜರುಗಿದವು.
ಚಿತ್ತಾಪುರ ತಾಲೂಕಿ ಸುಕ್ಷೇತ್ರ ಸೂಗೂರು (ಎನ್) ಗ್ರಾಮದ ಪವಾಡ ಪುರುಷ ಸಚ್ಚಿದಾನಂದ ನಿತ್ಯ ನಿರಂಜನ ಮೂರ್ತಿ, ಸ್ವಯಂ ಸಿದ್ಧ ಶರಣರಾದ ಸದ್ಗುರು ಶ್ರೀ ಭೋಜಲಿಂಗೇ ಶ್ವರ ಜಾತ್ರಾ ಮಹೋತ್ಸವ ಫೆಬ್ರುವರಿ ಮಂಗಳವಾರ 24-02-2026 ರಂದು ಸಾವಿರಾರು ಭಕ್ತರ ಮಧ್ಯೆ ಅದ್ಧೂರಿಯಾಗಿ ನಡೆಯಿತು ಎಂದು ಮಠದ ಪೀಠಾದಿಪತಿಗಳಾದ ಪರಮ ಪೂಜ್ಯ ಶ್ರೀ ಶ್ರೀ ಹಿರಗಪ್ಪ ತಾತಾನವರ ಘನ ಅಧ್ಯಕ್ಷತೆಯಲ್ಲಿ ಫೆ.24 ರಂದು ಬೆಳಿಗ್ಗೆ ಕರ್ತೃ ಗದ್ದುಗೆಗೆ ಮಹಾ ರುದ್ರಾಭಿಷೇಕ ಹಾಗೂ ಮಹಾ ಮಂಗಳಾರತಿ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ನಂತರ ಸಂಜೆ 07:05 ಕ್ಕೆ ಭವ್ಯ ರಥೋತ್ಸವ ನಂತರ ನಡೆದ ಧರ್ಮ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹಾಗೂ ಮುಂಬೈ ಉದ್ಯಮಿ ಲಾಲಾಸೇಠ್ ಅವರಿಂದ ಮದ್ದು (ಪಟಾಕಿ) ಸುಡುವ ಕಾರ್ಯಕ್ರಮ ನಡೆಯಿತು ಎಂದರು.

ಕಾರ್ಯಕ್ರಮದಲ್ಲಿ ಜನ ಪ್ರತಿನಿಧಿಗಳಾದ ಶ್ರೀ ಚನ್ನಾರೆಡ್ಡಿ ಗೌಡ ತುನ್ನೂರು ಯಾದಗಿರ ಕಾಂಗ್ರೆಸ್ ಶಾಸಕರು ಮಾತನಾಡಿ ಬಹುತೇಕ ಹಳ್ಳಿಗಳಿಂದ ಕೂಡಿದ ದೇಶ ನಮ್ಮದಾಗಿದ್ದು. ಬಡವರು ಹಿಂದುಳಿದ ವರ್ಗದ ಜನರು ಶಿಕ್ಷಣದಿಂದ ವಂಚಿತರಾಗಿದ್ದ ಕಾಲಘಟ್ಟದಲ್ಲಿ ಬಹುತೇಕ ಮಠಗಳು ನಿಸ್ವಾರ್ಥದಿಂದ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪನೆ ಮಾಡುವ ಮೂಲಕ ಶಿಕ್ಷಣದೊಂದಿಗೆ ಅನ್ನ ದಾಸೋಹ ನೀಡಿ ಜಾಗೃತಿ ಮೂಡಿಸುವ ಕಾರ್ಯವನ್ನು ಮಠಗಳು ಮಾಡಿವೆ ಎಂದು ಹೇಳಿದರು.
ಮತ್ತು ಚಿತ್ತಾಪುರ ಕಾಂಗ್ರೆಸ್ ನ ಹಿರಿಯರು ಭೀಮಣ್ಣ ಸಾಲಿ. ಮತ್ತು ನಿವೃತ್ತ ತಹಶಿಲ್ದಾರರು ನರಸಿಂಹ ರಾವ್ ಮತ್ತು ಸಿದ್ದಣಗೌಡ ಕಾಡಮಗೇರಾ ಸೇರಿದಂತೆ ಅನೇಕ ಗಣ್ಯರು ವೇದಿಕೆಯ ಮೇಲೆ ಪಾಲ್ಗೊಂಡರು. ಇದೇ ಸಂಧರ್ಭದಲ್ಲಿ ಶಿವ ಕೀರ್ತನೆ ಪ್ರವಚನಕಾರರು ಪಂಡಿತ ಪುಟ್ಟರಾಜ ಗುರುಗಳ ಹಾಗೂ ಶ್ರೀ ಕಲ್ಲಯ್ಯಜ್ಜನವರ ಶಿಷ್ಯಂದಿರಾದ.ಯುವ ಪ್ರವಚನಕಾರ ಶ್ರೀ ದೊಡ್ಡಬಸಯ್ಯ ಶಾಸ್ತ್ರಿಗಳು ಖರಾಬದಿನ್ನಿ ಮಾನ್ವಿ ತಾಲೂಕ ಸಂಗೀತಗಾರರು ಗಾನ ಕೋಗಿಲೆ ಶರಣಯ್ಯ ಗವಾಯಿಗಳು ಸಾ-ಸೋಮನಾಳ. ತಬಲವಾದಕಾರು ತಬಲ ಚತುರ ಶಂಕರಯ್ಯಾ ಸ್ವಾಮಿ ಮಠಮಾರಿ ಭಾಗವಹಿಸಿದ್ದರು.
ನಂತರ ರಾತ್ರಿ ೧೦:೩೦ ನಿಮಿಷಕ್ಕ ರಸ ಮಂಜರಿ ಹಾಸ್ಯ ಕಾರ್ಯಕ್ರಮದಲ್ಲಿ ಪ್ರಭಾ ಕಂಬಾರ ಎದೆ ತುಂಬಿ ಹಾಡುವೆನು ಗಾಯಕಿ ರಾಯಚೂರು. ಮತ್ತು ದೇವರಾಜ್ ಯಲಿ ಹಾಸ್ಯಮಯ ಕಾಮಿಡಿ ಕಲಾವಿದರು ಗೊಬ್ಬುರ. ಚನ್ನಬಸವ ಗಾಯಕರು ಸಿಂಧನೂರು. ರಾಜು ಜಾದುಗಾರ ವಿಜಯಪುರ. ದೀಪಿಕಾ ಮಂಗಳೂರು ಕಾಮಿಡಿ ಕಿಲಾಡಿ ಖ್ಯಾತಿಯ ಹಾಸ್ಯ ಕಲಾವಿದೆ. ಮತ್ತು ಪ್ರವೀಣ್ ಗಸ್ತಿ ಕಾಮಿಡಿ ಕಿಲಾಡಿಯ ಖ್ಯಾತಿ ಯ ಹಾಸ್ಯ ಕಲಾವಿದರ ಮನರಂಜನಾ ಕಾರ್ಯಕ್ರಮ ರಸ ದೌತಣ ಉಣ ಬಡಿಸಿದರು.

ನಿವೃತ್ತ ಪ್ರಾಂಶುಪಾಲ ಎಸ್ ಎಸ್ ಜ್ಯುಗೇರಿ, ಸರ ಮತ್ತು ವಂದನಾರ್ಪಣೆ ಭಾಷಣ ಶ್ರೀ ಈರಣ್ಣ ಬಲಕಲ್ ಎಲ್.ಐ.ಸಿ ಯಾದಗಿರ ಮಾತನಾಡಿದರು, ಶ್ರೀ ಶರಣಗೌಡ ಬೆನಕನಹಳ್ಳಿ. ಸ್ವಾಗತ ಭಾಷಣ ಶ್ರೀ ಭೀಮರೆಡ್ಡಿ ಗೌಡ ಕುರಾಳ ಸುಗೂರ ಎನ್ ಮಾಡಿದರು, ವಿಶ್ವನಾಥ ರೆಡ್ಡಿ ಪಾಟೀಲ ಸುಗೂರ ಎನ್.ಸಿದ್ರಾಮರೆಡ್ಡಿ ಗೌಡ ಬೆನಕನಹಳ್ಳಿ. ಯಾದಗಿರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸವ ರೆಡ್ಡಿ ಅನಪೂರ. ಸಂಗಾರೆಡ್ಡಿ ಗೌಡ ಮಾಲಿ ಪಾಟೀಲ. ಮಹಿಪಾಲ ರೆಡ್ಡಿ ಗೌಡ ಕರಣಗಿ. ಬಸ್ಸುಗೌಡ ಮಾಲಿ ಪಾಟೀಲ. ಡಾ.ವಿರೇಶ ಯಣ್ಣಿ ನಾಲವಾರ. ಮಹಾದೇವರೆಡ್ಡಿ ಗೌಡ ತುಮಕೂರು ಪ್ರಭು ಹೂಗಾರ ಯಾದಗಿರ. ಮಲ್ಲಿಕಾರ್ಜುನ ಕಾರ್ಪೆಟರ್ ಯಾದಗಿರ. ಸುರೇಶ್ ಕೋಟಿ ಮನಿ ಯಾದಗಿರ. ಮಲ್ಲಪ್ಪ ಅರಿಕೇರಿ ಮಾಸ್ತರ, ನಿರೂಪಣೆ ಶಂಕರಗೌಡ ಮಾಸ್ತರ ಲಿಂಗಸುಗೂರ ಅವರು ಮಾಡಿದರು.
ಶರಣಗೌಡ ವಕೀಲರು ಸುಗೂರ ಎನ್. ಮಹಾಂತೇಶ ಗೌಡರು ಹಿರೇಮಠ ಲಿಂಗಸುಗುರ, ಡಾ, ಸುರೇಶ ಮಾಘಾನೂರ. ಮಹಾದೇವಪ್ಪ ಸಾಹುಕಾರ್ ಕುರಕುಂದಿ. ಬಸವರಾಜ.ಮಲ್ಲಿನಾಥ ಪೋಟೊ ಸ್ಟುಡಿಯೋ. ಬಸವರಾಜ ಹಡಪದ ಸುಗೂರ ಎನ್. ರಾಜೇಂದ್ರ ನಾಯ್ಕೊಡಿ. ಸಿದ್ದು ಗೌಡ ಕುರಾಳ.ಬಾಬು ಪಾಟೀಲ. ಪ್ರವೀಣ್ ಪಾಟೀಲ ತುಮಕೂರು, ಹಾಗೂ ಮಲ್ಲಿಕಾರ್ಜುನ ನಾನಾಕಳ್ಳಿ. ಸಿದ್ದು ಸಾಹು ಕುಂಬಾರ. ಸಾಬ್ಬಣ್ಣ ಬೇನಿಗಿಡ. ಮತ್ತು ಜೆಟ್ಟೆಪ್ಪ ಪೂಜಾರಿ ಬಾಂಬೆ ಅವರು ಶ್ರೀಮಠಕ್ಕೆ ವಾಹನ ವ್ಯವಸ್ಥೆ ಮಾಡಿ ಮಾನವೀಯ ಮೆರೆದರು.
ಎಂದು ಶ್ರೀ ಮಠದ ಸಂದ್ಬಕ್ತರಾದ ಮಲ್ಲಿಕಾರ್ಜುನ ಬಿ ಹಡಪದ ಸುಗೂರ (ಎನ್) ಅವರು ಸೇರಿದಂತೆ ವಿವಿಧೆಡೆಯ ಮಹಾರಾಷ್ಟ್ರ, ಆಂಧ್ರ, ಗೋವಾ, ಮುಂಬಯ, ತೆಲಂಗಾಣ, ರಾಜ್ಯದ ಭಕ್ತರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು ಮತ್ತು ಅನೇಕರು ಉಪಸ್ಥಿತರಿದ್ದರು ಎಂದು ತಿಳಿಸಿದರು ಎಂದು ವರದಿಯಾಗಿದೆ.

