ಸಾವಯವ ಕೃಷಿ ವ್ಯವಸಾಯದಲ್ಲಿ ಸಾಧನೆ ಮಾಡಿ – ಎಂದು ಕೃಷಿ ವಿಜ್ಞಾನಿ ಡಾ, ಚಂದ್ರಶೇಖರ್ ಬಿರಾದಾರ್.

ರೂಡಗಿ ಫೆ.28

ಮುದ್ದೇಬಿಹಾಳ ತಾಲೂಕಿನ ರೂಡಗಿ ಗ್ರಾಮದ ಪಿ.ಎಂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾ ಪಂಚಾಯಿತಿ ಹಾಗೂ ಶಿಕ್ಷಣ ಇಲಾಖೆ ವಿಜಯಪುರ ಸಂಯೋಗದಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಪ್ರಯುಕ್ತ ಆಹಾರ, ಆರೋಗ್ಯ, ವಿಜ್ಞಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಾಧನೆ ಮಾಡಿದರೆ ಸ್ವಂತ ಊರಿನಲ್ಲಿ ಜಮೀನಿನಲ್ಲಿ ಸಾವಯಯವ ವ ಕೃಷಿಯಲ್ಲಿ ಸಾಧನೆ ಮಾಡಿ, ನೀವು ಶಿಕ್ಷಣವನ್ನು ವಿದೇಶಗಳಲ್ಲಿ ಕಲಿತರು ಕೂಡ ಕೊನೆಗೆ ನೀವು ನಿಮ್ಮ ಸ್ವಂತ ಊರಿನಲ್ಲಿ ಕೃಷಿ ವ್ಯವಸಾಯದಲ್ಲಿ ಸಾಧನೆ ಮಾಡಿ ಎಂದು ಕೃಷಿ ವಿಜ್ಞಾನಿ ಡಾ, ಚಂದ್ರಶೇಖರ್ ಬಿರಾದಾರ್ ಹೇಳಿದರು.

ನಾವು ಹಿಂದೆ ಕಲಿಯುವಾಗ ಪ್ರತಿ ದಿನ ಮುಂಜಾನೆ ಶಾಲಾವಧಿಯ ವರೆಗೆ ಹೋಲಗಳಲ್ಲಿ ಕೆಲಸ ಮಾಡಿ ನಂತರ ಶಾಲೆಗೆ ಹೋಗುತ್ತಿದ್ದೆವು, ಆದರೆ ಈಗಿನ ಮಕ್ಕಳಿಗೆ ಯಾವುದೇ ಕೆಲಸ ಇರುವುದಿಲ್ಲ, ನಮಗೆ ಪುಸ್ತಕ ವಿಷಯ ಗಿಂತ ನಾವು ಮಾಡುವ ಕೆಲಸದಿಂದ ನಮಗೆ ಎಲ್ಲಾ ರೀತಿಯ ಅರಿವು ಆಗುತ್ತದೆ. ನಾವು ಯಾವುದೇ ಪದವಿ ಮಾಡಿದರು ನಾವು ಕೃಷಿ ಬಗ್ಗೆ ಕೃಷಿಯ ಮೂಲದ ಬಗ್ಗೆ ತಿಳಿದು ಕೊಳ್ಳಬೇಕು ಎಂದರು.

ಈಗೀನ ಎಲ್ಲಾ ಆಹಾರದಲ್ಲಿ ಕಲಬೆರಿಕೆ ಇದೆ ಆದ್ದರಿಂದ ನಮಗೆ ಆರೋಗ್ಯದ ಸಮಸ್ಯೆ ಅರಿವಿನ ಬಗ್ಗೆ ವೈದ್ಯರ ಅವಶ್ಯಕತೆ ಇದೆ ಎಂದು ಹೇಳಿ ನಮ್ಮ ದೇಶ ಶ್ರೀಮಂತರಾಗಿರಲು ಮೊದಲು ಕೃಷಿಗೆ ಕಾರಣವಾಗಿತ್ತು. ಹಾಗಾಗಿ ಕೃಷಿ ಬೆಳಸಿ ಉಳಿಸಿ ಎಂದು ತಿಳಿಸಿದರು.

ಪ್ರಾಥಮಿಕ ಪ್ರೌಢ ಶಾಲಾ ವಿದ್ಯಾರ್ಥಿಗಳು ರೈತರು ಬೆಳೆದ ಕಬ್ಬು ದಾಳಿಂಬೆ ದ್ರಾಕ್ಷಿ ಈರುಳ್ಳಿ ಬೆಳ್ಳುಳ್ಳಿ ಕುಂಬಳಕಾಯಿ ಸಿಹಿ ಗೆನಸು ಮೂಲಂಗಿ ಹಾಗೂ ಸಿರಿ ಧಾನ್ಯಗಳ ಪ್ರದರ್ಶನವನ್ನು ಅಧಿಕಾರಿಗಳು ಮತ್ತು ಗಣ್ಯರು ವೀಕ್ಷಿಸಿ ಮಾಹಿತಿ ಪಡೆದು ಕೊಂಡರು.

ಅಕ್ಷರ ದಾಸೋಹ ಅಧಿಕಾರಿ ಎಂ.ಎಂ ಬೆಳಗಲ್ ನೇತ್ರ ಸಮನ್ವಯ ಅಧಿಕಾರಿ ಆರ್.ಬಿ ದನ್ನೂರ್ ಮಠ, ಎಸ್.ಡಿ.ಎಂ.ಸಿ ಅಧ್ಯಕ್ಷ ಅಶೋಕ್ ಮೆಣಸಿನಕಾಯಿ, ಸೇವಾಲಾಲ್ ರಾಥೋಡ್, ಸಂಗಮೇಶ ಹರಿವಾಳ, ಶ್ರೀಶೈಲ್ ದೊಡ್ಡಮನಿ, ಇನ್ನೂ ಶಿಕ್ಷಕರು ಗ್ರಾಮಸ್ಥರು ಉಪಸ್ಥಿತರಿದ್ದರು ಎಂದು ವರದಿಯಾಗಿದೆ.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್‌ ಕನ್ನಡ ಚಾನಲ್: ಬಸವರಾಜ.ಸಂಕನಾಳ.ಮುದ್ದೇಬಿಹಾಳ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button