ರೈತರು ಖರೀದಿ ಕೇಂದ್ರದ ಸದ್ಬಳಕೆ ಮಾಡಿ ಕೊಳ್ಳಿ – ಮಾಜಿ ಶಾಸಕ ಕೆ.ವಿ ರವೀಂದ್ರನಾಥ ಬಾಬು.
ಕೆ.ಹೊಸಹಳ್ಳಿ ಫೆ.28

ಸಮೀಪದ ಚಿಕ್ಕಜೋಗಿಹಳ್ಳಿಯ ಉಪ ಮಾರುಕಟ್ಟೆಯಲ್ಲಿ ಸರಕಾರದಿಂದ ಬೆಂಬಲ ಬೆಲೆಯಲ್ಲಿ ರಾಗಿ ಮತ್ತು ಜೋಳ ಖರೀದಿ ಕೇಂದ್ರ ಆರಂಭ ಗೊಂಡಿದ್ದು, ರೈತರು ಈ ಕೇಂದ್ರವನ್ನು ಸದ್ಭಳಕೆ ಮಾಡಿ ಕೊಳ್ಳಬೇಕು ಎಂದು ಮಾಜಿ ಶಾಸಕ ಕೆ.ವಿ ರವೀಂದ್ರನಾಥ ಬಾಬು ತಿಳಿಸಿದರು.
ಕಾನ ಹೊಸಹಳ್ಳಿ ಸಮೀಪದ ಚಿಕ್ಕಜೋಗಿಹಳ್ಳಿಯ ಉಪ ಮಾರುಕಟ್ಟೆಯಲ್ಲಿ ರಾಗಿ, ಜೋಳ ಖರೀದಿ ಕೇಂದ್ರಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು. ನಾನು ಶಾಸಕನಾಗಿದ್ದ ಸಂದರ್ಭದಲ್ಲಿ ಭೂಮಿ ದಾನವಾಗಿ ನೀಡಿದ್ದು, ಈ ವರೆಗೆ ಉಪ ಮಾರುಕಟ್ಟೆ ಆರಂಭವಾಗದಿರುವುದನ್ನು ಕಂಡು ಬೇಸರವಾಗಿತ್ತು.
ಇದೀಗ, ರಾಗಿ, ಜೋಳ ಖರೀದಿ ಕೇಂದ್ರದ ಮೂಲಕ ಉಪ ಮಾರುಕಟ್ಟೆಗೆ ಚಾಲನೆ ಸಿಕ್ಕಿರುವುದು ಸಂತೋಷವಾಗಿದೆ ಎಂದು ತಿಳಿಸಿದರು.
ಎ.ಪಿ.ಎಂ.ಸಿ ಅಧ್ಯಕ್ಷ ಕುರಿಹಟ್ಟಿ ಬೋಸಯ್ಯ ಮಾತನಾಡಿ, ಚಿಕ್ಕಜೋಗಿಹಳ್ಳಿಯಲ್ಲಿ ಉಪ ಮಾರುಕಟ್ಟೆ ಆರಂಭಿಸಬೇಕೆಂದು ಸಾಕಷ್ಟು ಶ್ರಮಿಸಿದ್ದು.
ಈಗಾಗಲೇ ಮೂಲ ಸೌಕರ್ಯ ಕಲ್ಪಿಸಲು ಕ್ರಿಯಾ ಯೋಜನೆ ರೂಪಿಸಲಾಗಿದೆ. ಸದ್ಯಕ್ಕೆ ರಾಗಿ, ಜೋಳ ಖರೀದಿ ಕೇಂದ್ರ ಆರಂಭಿಸಿದ್ದು, ಮುಂದಿನ ದಿನಗಳಲ್ಲಿ ಕುರಿ ಮಾರುಕಟ್ಟೆ ಸಹ ಆರಂಭಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಎ.ಪಿ.ಎಂ.ಸಿ ಕಾರ್ಯದರ್ಶಿ ಎಸ್.ಸಿ ಬಸವರಾಜ ಸೇರಿ ಮುಖಂಡರು ಇದ್ದರು.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್ ವೀರೇಶ್ ಕೆ ಹೊಸಹಳ್ಳಿ

