ಇಂದು ಎಸ್.ಎನ್.ಡಿ ಪಬ್ಲಿಕ್ ಶಾಲೆಯಲ್ಲಿ ಸಂಸ್ಕ್ರತಿ ಉತ್ಸವ ಮತ್ತು – ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆಯೋಜನೆ.

ಹುಲ್ಲೂರು ಮಾ.01

ಮುದ್ದೇಬಿಹಾಳ ತಾಲೂಕಿನ ಹುಲ್ಲೂರು ಗ್ರಾಮದ ಹತ್ತಿರ ಆಲಮಟ್ಟಿ ರಸ್ತೆ ಪಕ್ಕದಲ್ಲಿರುವ ಚನ್ನಬಸವ ಶ್ರೀ ಎಜುಕೇಶನ್, ರೂರಲ್, ಕಲ್ಚರ್ ಸೊಸೈಟಿಯ ಎಸ್,ಎನ್,ಡಿ ನ್ಯಾಷನಲ್ ಪಬ್ಲಿಕ್ ಪ್ರಾಥಮಿಕ, ಪ್ರೌಢ ಶಾಲೆಯಲ್ಲಿ ಮಾ, 1 ರಂದು ಸಂಜೆ 4 ಕ್ಕೆ ಎಸ್,ಎನ್,ಡಿ ಸಂಸ್ಕೃತಿ ಉತ್ಸವ ಪ್ರತಿಭಾ ಪುರಸ್ಕಾರ-2026 ಸಮಾರಂಭ ಏರ್ಪಡಿಸಲಾಗಿದೆ.

ದಿವ್ಯ ಸಾನಿಧ್ಯವನ್ನು ಯರ್ಜರಿ ಯಲ್ಲಾಲಿಂಗ ಮಠದ ಯಲ್ಲಾಲಿಂಗ ಮಹಾಸ್ವಾಮಿಗಳು, ಸಾನಿಧ್ಯವನ್ನು ಜಮಖಂಡಿ ಓಲೆಮಠದ ಆನಂದ ದೇವರು, ದೇವಿ ಆರಾಧಕರಾದ ಮಾದೇವಪ್ಪ ವಿಶ್ವಕರ್ಮ, ಈರಣ್ಣ ಬಡಿಗೇರ್ ವಹಿಸುವವರು. ಶಾಸಕ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷರಾದ ಸಿ,ಎಸ್ ನಾಡಗೌಡ ಉದ್ಘಾಟಿಸುವರು ಜಿ.ಪಂ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಅಧ್ಯಕ್ಷತೆ ವಹಿಸುವರು. ಸಿ.ಪಿ.ಐಗಳಾದ ಪರಶುರಾಮ ಮನಗೂಳಿ ಮೊಹಮ್ಮ ಪಸಿಯುದ್ದಿನ್ ಜ್ಯೋತಿ ಬೆಳಗಿಸುವವರು.

ಕಾಂಗ್ರೆಸ್ ಮುಖಂಡರಾದ ಗುರು ತಾರನಾಳ ಸಿ,ಬಿ ಅಕ್ಕಿ ಅವರು ಪ್ರಶಸ್ತಿ ಪ್ರಧಾನ ಸನ್ಮಾನ ನಡೆಸಿ ಕೊಡುವವರು. ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಸಹಾಯಕ ಆಯುಕ್ತರು ಜಮಖಂಡಿ, ಉದ್ಯಮಿ ಸಿ,ಪಿ ಸಜ್ಜನ ನೇತೃತ್ವ ವಹಿಸುವವರು.

ಬಿ.ಇ.ಓ ಬಿ,ಎಸ್ ಸಾವಳಗಿ ಪಿ.ಡಿ.ಓ ಎಸ್,ಎ ಲೋನಾರ್ ಮಠ ಇರುವವರು. ಹಲವು ಗಣ್ಯರು ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸುವವರು. ಎಂದು ಶಾಲೆ ಸಂಸ್ಥಾಪಕ ಅಧ್ಯಕ್ಷ ಎಂ,ಎಸ್ ಕೋಪ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ ಎಂದು ವರದಿಯಾಗಿದೆ.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್‌ ಕನ್ನಡ ಚಾನಲ್:ಬಸವರಾಜ. ಸಂಕನಾಳ.ಮುದ್ದೇಬಿಹಾಳ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button