ವಿಶ್ವೇಶ್ವರ ಬಾಲ ಭಾರತಿ ಶಾಲೆಯಲ್ಲಿ ಮಾತಾ ಪಿತೃ – ಪಾದ ಪೂಜೆ ತಾಯಿ ಕೈತುತ್ತು.

ಆಲಮೇಲ ಮಾ.01

ಇಂದಿನ ತಂತ್ರಜ್ಞಾನ ಯುಗದಲ್ಲಿ ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರದ ಅವಶ್ಯಕತೆ ಇದೆ ಎಂದು ಸಾಹಿತಿ ಶಂಕರ ಬೈಚಬಾಲ ಹೆಳಿದರು.

ಶುಕ್ರವಾರ ಪಟ್ಟಣದ ವಿಶ್ವೇಶ್ವರ ಬಾಲ ಭಾರತಿ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡ ಮಾತಾ ಪೀತೃ ಪಾದ ಪೂಜೆ ಮತ್ತು ಅಮ್ಮನ ಕೈ ತುತ್ತು ಹಾಗೂ 7 ನೇ. ತರಗತಿ ವಿದ್ಯಾರ್ಥಿಗಳ ಬೀಳ್ಕೋಡುವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಮಕ್ಕಳಲ್ಲಿ ಮೊಬೈಲ್ ಬಳಕೆ ಅತಿಯಾಗಿದ್ದು ಇದರಿಂದ ನಮ್ಮ ಪುರಾತನ ಸಂಪ್ರದಾಯ ಸಂಸ್ಕಾರ, ತಂದೆ ತಾಯಿ, ಗುರು ಹಿರಿಯರಿಗೆ ಗೌರವಿಸುವಂತ ಸಂಸ್ಕಾರ ಮರೆಯಾಗುತ್ತಿದೆ ಎಂದರು.

ತಂತ್ರಜ್ಞಾನ ಯುಗದಲ್ಲು ಮಕ್ಕಳಲ್ಲಿ ಸಂಸ್ಕಾರ ಮರೆಯಾಗುತ್ತಿದೆ ಅದನ್ನು ಹೋಗಲಾಡಿಸಲು ಶಾಲೆಗಳಲ್ಲಿ ಈ ರೀತಿ ಸಂಸ್ಕಾರ ನೀಡುವಂತಹ ಕಾರ್ಯಕ್ರಮಗಳು ಮಾಡುವ ಮೂಲಕ ಮಕ್ಕಳಿಗೆ ಶಿಕ್ಷಣದ ಜೋತೆಗೆ ಸಂಸ್ಕಾರ ಕಲಿಸಬೇಕಾದ ಅನಿವಾರ್ಯತೆ ಬಂದಿದೆ ಎಂದರು.

ಬಸವಣ್ಣನವರಂತ ಶರಣ ವಚನಗಳು, ಮಹಾನ ನಾಯಕರ ಜೀವನ ಚರಿತ್ರೆ, ವೈಚಾರಿಕತೆಯ ಮಕ್ಕಳಿಗೆ ಕಲಿಸ ಬೇಕಾಗಿದೆ. ಈ ಶಾಲೆಯ ಮಕ್ಕಳು ಮುಂದಿನ ವರ್ಷ ಅತಿ ಹೆಚ್ಚು ವಚನಗಳು ಹೇಳಿದ ಮಗುವಿಗೆ 2 ಸಾವಿರ ನಗದು ಬಹುಮಾನ ಕೊಡುವುದಾಗಿ ಘೋಷಿಸಿದರು.

ಯಂಕಂಚಿ ಹಿರೇಮಠದ ಅಭಿನವ ರುದ್ರಮುನಿ ಶಿವಾಚಾರ್ಯರು ಮಾತನಾಡಿ ತಾಯಿಯ ಋಣ ಯಾವತ್ತು ತಿರಿಸಲಾಗದು. ಮಕ್ಕಳು ತಮ್ಮ ತಂದೆ ತಾಯಿ ಇರುವರೆಗೂ ಪ್ರೀತಿ ಅಕ್ಕರೆಯೊಂದಿಗೆ ತಂದೆ ತಾಯಿಯರ ಆರೈಕೆ ಮಾಡಿದರೆ ಮಾತ್ರ ತಂದೆ ತಾಯಿ ಋಣ ತೀರಿಸಲು ಸಾದ್ಯ ಎಂದರು.

ಮಕ್ಕಳಿಗೆ ಸಂಸ್ಕಾರ ಬೆಳೆಯಬೇಕು ಎಂದರೆ ಯಾರೊ ಒಬ್ಬರಿಂದ ಸಾಧ್ಯವಿಲ್ಲ ಮನೆಯಲ್ಲಿ ತಂದೆ ತಾಯಿ ಶಾಲೆಯಯ ಶಿಕ್ಷಕರು ಎಲ್ಲರು ಮಕ್ಕಳಿಗೆ ಸಂಸ್ಕಾರ ಕಲಿಸಬೇಕು ಅಂದಾಗ ನಮ್ಮ ಪುರಾತನ ಸಂಪ್ರದಾಯ ಸಂಸ್ಕಾರ ಬೆಳೆಯಲು ಸಾದ್ಯ ಎಂದರು. ಮಕ್ಕಳಿಗೆ ತಾಯಿಯ ಕೈತುತ್ತು ಅಮೃತ ಸಮಾನವಾಗಿದೆ.

ತಾಯಿ ಮಗುವಿಗೆ ಕೈ ತುತ್ತು ತಿನಿಸುವಾಗ ತನ್ನ ಪರಿಶುದ್ದವಾದ ಮನಸ್ಸಿನಿಂದ ಹಾರೈಸಿ ಆಶಿರ್ವದಿಸಲಿದ್ದಾಳೆ ಹಾಗೆ ಇಂದಿನ ತಾಯಿಯಂದಿರು ತಮ್ಮ ಮಕ್ಕಳನ್ನು ಒಳ್ಳೆಯದನ್ನು ಹಾರೈಶಿ ಆಶಿರ್ವದಿಸಬೇಕು ಎಂದು ಹೇಳಿದರು.

ಸಂಸ್ಥೆಯ ಅಧ್ಯಕ್ಷ ಎಸ್.ಐ ಜೋಗೂರ, ಇಂಡಿ ಕಾಲೇಜಿನ ಪ್ರಾಚಾರ್ಯ ಶ್ರೀಶೈಲ ಸಣ್ಣಕ್ಕಿ, ಸಿಂದಗಿ ಎಸ್.ಜಿ ಕಾಲೇಜಿನ ಉಪನ್ಯಾಸಕಿ ಹೇಮಾ ಹಿರೇಮಠ ಮಾತನಾಡಿದರು.

ಕಾ.ನಿ.ಪ ಅಧ್ಯಕ್ಷ ಅವಧೂತ ಬಂಡಗಾರ ಅವರಿಗೆ ವಿಶೇಷ ಸನ್ಮಾನಿಸಿ ಅಭಿನಂದಿಸಿದರು. ತಾಲೂಕ ಜಿಲ್ಲಾ ಮಟ್ಟದ ವಿವಿಧ ಪರೀಕ್ಷೆ, ಸಂಸ್ಕೃತಿಕ ಕಾರ್ಯಕ್ರಗಳಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಿದರು.

ಶೀಕ್ಷಣ ಸಂಯೋಜಕ ಎಂ.ಪಿ ಭಿಸೆ, ಸಂಸ್ಥೆಯ ಕೋಶಾಧ್ಯಕ್ಷ ಅರವಿಂದ ಕುಲಕರ್ಣಿ, ನಿರ್ದೇಶಕರಾದ ಅಶೋಕ ವಾರದ, ಶಿವಾನಂದ ಮಾರ್ಸನಳ್ಳಿ, ಅಲೋಕ ಬಡದಾಳ, ಪಾಲಕ ಪ್ರತಿನಿದಿಗಳಾದ ಪಾರ್ಶ್ವನಾಥ ಶೆಟ್ಟಿ, ಮುಖಂಡರಾದ ಕಾಮಣ್ಣ ಕಲ್ಲೂರ, ಮುಖ್ಯ ಶಿಕ್ಷಕ ಲಕ್ಷ್ಮೀಪುತ್ರ ಕಿರನಳ್ಳಿ, ಶಿಕ್ಷಕರಾದ ಚಂದ್ರಕಾಂತ ದೇವರಮನಿ, ಪ್ರಶಾಂತ ಗಡದೆ, ಸುವರ್ಣ ಸಾರಂಗಮಠ, ಲಕ್ಷ್ಮೀಬಾಯಿ ಹಳೇಮನಿ, ಸೀತಾ ಆರೇಶಂಕರ ಮುಂತಾದವರು ಇದ್ದರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರೇವಣಸಿದ್ದಯ್ಯ.ಜಿ ಹಿರೇಮಠ ಆಲಮೇಲ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button